ದೇವನಹಳ್ಳಿ:
ಹುಡುಗಿಯ ವಿಚಾರವಾಗಿ ಹುಡುಗನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ, ಮದುವೆಗೆ ರೆಡಿಯಾಗಿದ್ದ ಕಾರಿನಲ್ಲೇ ಡಿಲಿವರಿ ಬಾಯ್ನನ್ನು ಕಿಡ್ನ್ಯಾಪ್ ಮಾಡಿ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. 19 ವರ್ಷದ ಪ್ರೀತಂ ಭೀಕರವಾಗಿ ಕೊಲೆಯಾದ ಡಿಲಿವರಿ ಬಾಯ್ ಎನ್ನಲಾಗಿದೆ.
ಹೌದು ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದುವೆಗೆ ರೆಡಿಯಾಗಿದ್ದ ಕಾರಿನಲ್ಲೇ ದುಷ್ಕರ್ಮಿಗಳು ಡಿಲಿವರಿ ಬಾಯ್ ಪ್ರೀತಂನನ್ನು ಕಿಡ್ನಾಪ್ ಮಾಡಿ, ಮನಬಂದಂತೆ ಹಲ್ಲೆ ಮಾಡಿ, ಬೇರೆ ಕಡೆ ಕೊಲೆ ಮಾಡಿ. ಕೊನೆಗೆ ಅಜ್ಜಿಯ ಮನೆ ಮುಂದೆ ಶವವನ್ನು ಕೊಲೆಗಡುಕರು ಬಿಸಾಡಿ ಪರಾರಿ ಯಾಗಿದ್ದಾರೆ. ಮಗನ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇನ್ನು ಯಲಹಂಕ ಬಳಿ ಇರುವ ಗಂಟಿಗಾನಹಳ್ಳಿಯ ಯುವತಿಯನ್ನ ಪ್ರೀತಿ ಮಾಡಿದ್ದಕ್ಕೆ ಪ್ರೀತಂನನ್ನು ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈಕೆ ಚಿತ್ರದುರ್ಗದಲ್ಲಿ MBBS ವ್ಯಾಸಾಂಗ ಮಾಡ್ತಾ ಇದ್ದು, ಪ್ರೀತಂ ಪ್ರೀತಿ ಮಾಡ್ತಾ ಇದ್ನಂತೆ,.. ಸಾಲದ್ದಕ್ಕೆ ಇಬ್ಬರು ಜೊತೆಗಿರುವ ಫೋಟೋ ತೋರಿಸಿ ಪ್ರೀತಂ ಬ್ಲ್ಯಾಕ್ ಮೇಲ್ ಮಾಡಿ, ಸಾಕಷ್ಟು ಬಾರಿ ಫೋನ್ ಪೇ ಮೂಲಕ ಹಣ ಪೀಕಿದ್ದಾನೆ, ಈ ಬಗ್ಗೆ ಯುವತಿ ಮನೆಯವರಿಗೆ ತಿಳಿಯುತ್ತಿದ್ದಂತೆ ಕೊಲೆಯಾದ ಪ್ರೀತಂಗೆ ವಾರ್ನಿಂಗ್ ಕೊಟ್ಟಿದ್ದಾರೆ ಅಂತಾ ಯುವತಿ ಪೋಷಕರು ಹೇಳ್ತಾ ಇದ್ದಾರೆ.
ಇತ್ತ ಹುಡುಗನ ಕಡೆಯವರು ಬೇರೆ ರೀತಿಯೇ ಹೇಳ್ತಾ ಇದ್ದು, ನಮ್ಮ ಮಗನಿಗೆ ಬುದ್ದಿ ಹೇಳ್ತಾ ಇದ್ವಿ ಆದ್ರೆ ಏಕಾಏಕಿ ಕೊಲೆ ಮಾಡಿ ನಮ್ಮನ್ನ ಅನಾಥರನ್ನಾಗಿ ಮಾಡಿದ್ದಾರೆ ಅಂತಾ ಯುವಕ ಪ್ರೀತಂ ಪೋಷಕರು ಗೋಳಾಡ್ತಾ ಇದ್ದಾರೆ. ಅಲ್ದೇ ಯುವತಿ ಕಡೆಯವರೇ ಕೊಲೆ ಮಾಡಿದ್ದಾರೆ ಅಂತಾ ಆರೋಪ ಮಾಡ್ತಾ ಇದ್ದಾರೆ.
ಸದ್ಯ ಕೊಲೆ ಸಂಬಂಧ ಹುಡುಗಿಯ ದೊಡ್ಡಮ್ಮನ ಮಗ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ, ಈ ಕೊಲೆ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿರೋ ಶಂಕೆ ವ್ಯಕ್ತವಾಗಿದ್ದು ಉಳಿದ ಆರೋಪಿಗಳಿಗಾಗಿ ದೇವನಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.