ಮಧುಗಿರಿ : ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮದ ದೊಡ್ಡಕೆರೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಇನ್ನು ಸುಮಾರು 55 ವರ್ಷ ಅಸುಪಾಸು ವಯಸ್ಸಿನ ಮಹಿಳೆ ಎನ್ನಲಾಗಿದ್ದು, ಕೆರೆಯಲ್ಲಿ ಶವಬಿದ್ದಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಎಸ್‌ಐ ಮೊಹಮ್ಮದ್ ಪೈಗಂಬರ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರೀಶಿಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದಾರೆ. ಈ ಮಹಿಳೆಯ ಸಾವು ಅನುಮಾನಾಸ್ಪದವಾಗಿದ್ದು, ಬಹಿರ್ದೆಸೆಗೆ ಹೋದಾಗ ಕಾಲು ಜಾರಿ ಬಿದ್ದಿರುವ ಶಂಕೆ ಒಂದೆಡೆ ವ್ಯಕ್ತವಾಗುತ್ತಿದೆ. ಮಹಿಳೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ಇದು ಕೊಲೆಯೋ ಅಥವಾ ಅಸಹಜ ಸಾವೋ ಎಂಬುದರ ಕುರಿತು ಪೊಲೀಸರ ತನಿಖೆಯಿಂದ ಮಾತ್ರವೇ ಸತ್ಯಾಸತ್ಯತೆ ಹೊರಬೀಳಲಿದೆ.