ಬೆಂಗಳೂರು : ಮಕ್ಕಳನ್ನು ಸೇರ್ಸೋಕೆ 6 ವರ್ಷ ಕಡ್ಡಾಯವಲ್ಲ | ಶಿಕ್ಷಣ ಇಲಾಖೆಯಿಂದ ಸಿಕ್ತು ಗುಡ್ ನ್ಯೂಸ್

ಬೆಂಗಳೂರು :

ಮಕ್ಕಳನ್ನು ಶಾಲೆಗೆ ಸೇರಿಸೋಕೆ ಈ ಹಿಂದೆ ಕಟ್ಟುನಿಟ್ಟಿನ ನೀತಿ ನಿಯಮಗಳು ಇರಲಿಲ್ಲ. ಹಾಗೆಲ್ಲ 1ನೇ ತರಗತಿಗೆ ಮಕ್ಕಳನ್ನು ಸೇರಿಸಬೇಕಾದರೆ 5 ವರ್ಷದ ಒಳಗಿರಬೇಕಿತ್ತು. ಇಲ್ಲವೇ ಬಲಗೈಯಿಂದ ಎಡಭಾಗದ ಕಿವಿಯನ್ನು ಮುಟ್ಟಬೇಕಿತ್ತು. ಅಷ್ಟೇ ಸಾಕಿತ್ತು ಮಗುವನ್ನು ಶಾಲೆಗೆ ಅಡ್ಮೀಷನ್‌ ಮಾಡಿಕೊಳ್ಳಲು. ಆದರೆ ಕಾಲ ಬದಲಾದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಆದಂತಹ ಬದಲಾವಣೆಗಳಿಂದ ಎಲ್‌ಕೆಜಿ, ಯುಕೆಜಿ ಸೇರಿಸುವುದರಿಂದ ಹಿಡಿದು ಇಂತಿಷ್ಟೆ ವಯಸ್ಸು ಎಂದು ಫಿಕ್ಸ್‌ ಮಾಡಲಾಗಿತ್ತು.

ಇನ್ನು ರಾಜ್ಯ ಸರ್ಕಾರ 1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಕಡ್ಡಾಯವಾಗಿ 6 ವರ್ಷ ತುಂಬಿರುವುದು ಕಡ್ಡಾಯವಾಗಿತ್ತು. 1 ದಿನ ಕಡಿಮೆ ಇದ್ದರೂ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ತಾ ಇರಲಿಲ್ಲ. ಇದು ಪೋಷಕರ ಗೊಂದಲಕ್ಕೆ ಕಾರಣವಾಗಿ ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು.  ಇನ್ನು ಮಕ್ಕಳನ್ನು 1 ತರಗತಿಗೆ ಸೇರಿಸಬೇಕಾದರೆ ಎಷ್ಟು ವಯೋಮಿತಿ ಇರಬೇಕು ಅನ್ನೋ ಪೋಷಕರ ಗೊಂದಲಕ್ಕೆ ಶಿಕ್ಷಣ ಇಲಾಖೆ ಗುಡ್‌ ನ್ಯೂಸ್‌ ಕೊಟ್ಟಿದೆ.

ರಾಜ್ಯ ಪಠ್ಯ ಕ್ರಮದಲ್ಲಿ ಒಂದನೇ ತರಗತಿಗೆ ದಾಖಲಾತಿಯನ್ನು ಪಡೆಯಲು 6 ವರ್ಷ ವಯಸ್ಸಿನ ಮಿತಿ ಖಡ್ಡಾಯವಾಗಿತ್ತು. 6 ವರ್ಷದಲ್ಲಿ ಒಂದು ತಿಂಗಳು ಅಲ್ಲ ಒಂದು ದಿನ ಕಡಿಮೆ ಅಗಿದ್ದರೂ ಶಾಲೆಯಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿರಲಿಲ್ಲ. ಕೇವಲ ಒಂದೆರಡು ತಿಂಗಳಿನಲ್ಲಿ ದಾಖಲಾತಿ ಕಳೆದುಕೊಂಡು ಒಂದು ವರ್ಷ ಕಾಯಬೇಕಿತ್ತು ಪೋಷಕರು. ಇದೇ ವಿಚಾರವಾಗಿ ರಾಜ್ಯಾದ್ಯಂತ ಪೋಷಕರು ಪ್ರತಿರೋದ ವ್ಯಕ್ತಪಡಿಸಿದ್ರು..  ಶಿಕ್ಷಣ ಸಚಿವರ ಬಳಿ ಪೋಷಕರು ತಮ್ಮ ಮಕ್ಕಳ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯಸ್ಸಿನ ಮಿತಿಯನ್ನು ಸಡಿಲಗೊಳಿಸುವಂತೆ ಶಿಕ್ಷಣ ಇಲಾಖೆಯ ಸಚಿವರಾದ ಮಧು ಬಂಗಾರಪ್ಪರೊಡನೆ ಮಾತನಾಡಿದಾಗ ಸಿಡಿಮಿಡಿಗೊಂಡಿದ್ದು ಉಂಟು.

1 ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯೋಮಿತಿ ಸಡಿಲಗೊಳಿಸುವ ಕುರಿತು ಶಿಫಾರಸ್ಸು ಒಳಗೊಂಡ ತಾತ್ಕಾಲಿಕ ವರದಿಯನ್ನು ರಾಜ್ಯ ಶಿಕ್ಷಣ ನೀತಿ ಆಯೋಗವು ಸಲ್ಲಿಸಿದೆ.  ಇದರ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ನಿರ್ಧಾರವನ್ನು ಪ್ರಕಟಿಸಿದೆ. ಶಾಲಾ ಶಿಕ್ಷಣ ಇಲಾಖೆ 2022ರ ನವಂಬರ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ ಜೂನ್‌ 1, 2025ರ ಒಳಗೆ ಆರು ವರ್ಷಗಳನ್ನು ಪೂರ್ಣಗೊಳಿಸಿದ ಮಕ್ಕಳು 2025-26 ಶೈಕ್ಷಣಿಕ ವರ್ಷದ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿದ್ದರು ಎಂದು ಹೇಳಿತ್ತು. ಆದ್ರೆ ಪೋಷಕರ ಒತ್ತಾಯದ ವಿಚಾರವಾಗಿ ಸಿಡಿಮಿಡಿಗೊಂಡ ಸಚಿವರು ಇಂದು ಅದೇ ಪೋಷಕರಿಗೆ 7 ತಿಂಗಳ ಷರತ್ತುಬದ್ದ ವಿನಾಯಿತಿ ನೀಡುವ ಮೂಲಕ ಗುಡ್‌ ನ್ಯೂಸ್‌ ನೀಡಿದ್ದಾರೆ.

ಸಚಿವರು ಹಾಕಿರುವ  ಷರತ್ತುಗಳೆಂದರೆ

  • ಮಕ್ಕಳು ಶಾಲೆಗೆ ಸೇರಲು LKG ಮತ್ತು UKG ಖಡ್ಡಾಯವಾಗಿ ಮುಗಿಸಿರಬೇಕು
  • ಪೋಷಕರ ಒತ್ತಾಯದ ಮೇರೆಗೆ ಮಕ್ಕಳಿಗೆ ಕನಿಷ್ಠ 5 ವರ್ಷ 5 ತಿಂಗಳು ವಯಸ್ಸಾಗಿರಬೇಕು

ಈ ಷರತ್ತುಗಳನ್ನು ಹೊಡ್ಡುವುದರ ಜೊತೆಗೆ ಈ ನಿಯಮವನ್ನು 2025-26ರ ಶೈಕ್ಷಣಿಕ ವರ್ಷದ ದಾಖಲಾತಿ ಹಾಗೂ ಇದು ಕೇವಲ ರಾಜ್ಯ ಪಠ್ಯಕ್ರಮಕ್ಕೆ ಮಾತ್ರ ಸೀಮಿತ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.

 

Author:

...
Sushmitha N

Copy Editor

prajashakthi tv

share
No Reviews