ಬೆಂಗಳೂರು : ಐ ವಿಲ್ ನೆವರ್ ಸ್ಪೀಕ್ ಕನ್ನಡ ಎಂದ SBI ಬ್ಯಾಂಕ್ ಮ್ಯಾನೇಜರ್..!

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ಕನ್ನಡ ಭಾಷೆಯ ಬಗ್ಗೆ ಅವಾಚ್ಯ ಶಬ್ದವನ್ನು ಬಳಸುತ್ತಿದ್ದಾರೆ. ಇಂತಹ ಚಾಳಿಯ ವಿರುದ್ಧ ಹಲವು ಕನ್ನಡಪರ ಸಂಘಟನೆಗಳು ಹೋರಾಟ ಮಾಡ್ತಿವೆ. ಇತ್ತ ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಇಂಡಿಯನ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕನ್ನಡವನ್ನು ತಾತ್ಸಾರವಾಗಿ ಕಾಣುತ್ತಿದ್ದಾರೆ.

ಹೌದು.. ಬೆಂಗಳೂರಿನ ಆನೇಕಲ್‌ನಲ್ಲಿರುವ ಸೂರ್ಯನಗರದ ಎಸ್‌ಬಿಐ ಬ್ಯಾಂಕ್ ನಲ್ಲಿರುವ ಶಾಖಾ ವ್ಯವಸ್ಥಾಪಕಿಯೊಬ್ಬರು ಕನ್ನಡ ವಿಚಾರದ ಬಗ್ಗೆ ಮಾತನಾಡುತ್ತಿರುವುದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಾ ಇದೆ. ಮ್ಯಾನೇಜರ್‌ ನ್ನು ಗ್ರಾಹಕರೊಬ್ಬರು ಮೇಡಂ ನೀವು ಕನ್ನಡ ಮಾತನಾಡಿ ಅಂತ ಕೇಳಿದ್ದಕ್ಕೆ, ಆಕೆ ಹೇಳೋದು ಈಗೆ ನೋಡಿ. ನಾನು ಕರ್ನಾಟಕದಲ್ಲಿ ಕನ್ನಡ ಮಾತನಾಡುವುದಿಲ್ಲ, ನಾನು ಹಿಂದಿನೇ ಮಾತನಾಡೋದು. ಕನ್ನಡ ಏಕೆ ಮಾತನಾಡಲಿ ಅಂತ ಗಾಂಚಲಿ ತೋರಿಸಿದ್ದಾರೆ. ಐ ವಿಲ್‌ ನೆವರ್‌ ಸ್ಪೀಕ್‌ ಕನ್ನಡ ಅಂತಾ ಇಂಗ್ಲೀಷ್‌ನಲ್ಲಿ ಹೇಳುತ್ತ ದರ್ಪ ಮೆರೆದಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗ್ತಾ ಇದ್ದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

Author:

...
Sushmitha N

Copy Editor

prajashakthi tv

share
No Reviews