ಗುಬ್ಬಿ : ಗೃಹ ಸಚಿವ ಪರಮೇಶ್ವರ್ ಅವರ ಮನೆ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ಮಾಡ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಮಾಡಿತ್ತು. ಇಡಿ ದಾಳಿ ಮಾಡೋದು ಬರೀ ವಿರೋಧ ಪಕ್ಷದವರ ಪಿತೂರಿ ಅಂತಾ ಎಲ್ಲರಿಗೂ ಗೊತ್ತಿದೆ. ವಿರೋಧ ಪಕ್ಷದವರಿಗೆ ಬೇರೆ ಏನು ಕೆಲಸ ಇದೆ ಹೇಳಿ. ಇಡಿ ಡ್ರೀಲ್ ಮಾಡುವುದೇ ಅವರ ಉದ್ದೇಶವಾಗಿದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ದ ಶಾಸಕ ಎಸ್.ಆರ್. ಶ್ರೀನಿವಾಸ್ ಗುಬ್ಬಿಯಲ್ಲಿ ಗುಡುಗಿದರು.
ಗುಬ್ಬಿ ತಾಲ್ಲೂಕಿನ ಹಂಡನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ 31 ಕೋಟಿ ವೆಚ್ಚದ ರಸ್ತೆ ಕಾಮಾಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಗುಬ್ಬಿಯಲ್ಲಿ ಜಲ ಜೀವನ್ ಯೋಜನೆ ಕಳಪೆ ಕಾಮಾಗಾರಿ ಬಗ್ಗೆ ವ್ಯಾಪಕವಾಗಿ ಪೋನ್ ಗಳು ಬರುತ್ತಿದ್ದು, ಶೀಘ್ರದಲ್ಲಿ ಎಲ್ಲ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಇಂಜಿನಿಯರ್‌ಗಳ ಸಭೆ ಕರೆದು ಚರ್ಚಿಸಿ ಸೂಕ್ತವಾಗಿ ಕೆಲಸ ಮಾಡಲು ಸೂಚಿಸುತ್ತೇನೆ. ಜೊತೆಗೆ ಗುತ್ತಿಗೆದಾರರು ಕೂಡ ಸರಿಯಾದ ಕೆಲಸ ಮಾಡಲಿಲ್ಲ ಅಂದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಗದೀಶ್, ಶಂಕರಪ್ಪ, ದೊಡ್ಡಕೆಂಪಯ್ಯ, ಪಿಡಿಓ ರಂಗರಾಜು, ವಿ.ಎಸ್ ಎಸ್.ಎನ್. ಅಧ್ಯಕ್ಷ ರಮೇಶ್, ಕೊಂಡ್ಲಿ ಜಗದೀಶ್ ,ರಾಜು, ಇತರರು ಭಾಗವಹಿಸಿದ್ದರು.