Bangalore : ಜುಲೈ 1ರಿಂದ ಮೊಬೈಲ್ ಹಾಜರಾತಿ ಕಡ್ಡಾಯ ಮಾಡಿದ ಆರೋಗ್ಯ ಇಲಾಖೆ

BANGALORE: ಕರ್ನಾಟಕದಲ್ಲಿ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿರುವ ಮೊಟ್ಟಮೊದಲ ಇಲಾಖೆಯಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ. ಜುಲೈ 1, 2025 ರಿಂದ ರಾಜ್ಯದ ಎಲ್ಲಾ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಈ ನವೀನ ಹಾಜರಾತಿ ವ್ಯವಸ್ಥೆ ಜಾರಿಯಾಗಲಿದೆ.

ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಇತರ ಆರೋಗ್ಯ ಸಂಸ್ಥೆಗಳಲ್ಲಿ ಸಿಬ್ಬಂದಿಯ ಸಮಯಪಾಲನೆ, ಹಾಜರಾತಿ ಮತ್ತು ಕಾರ್ಯಕ್ಷಮತೆಯ ಮೇಲ್ವಿಚಾರಣೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗ್ತಿದೆ. ಸಿಬ್ಬಂದಿಯು ತಮ್ಮ ಮೊಬೈಲ್ ಮೂಲಕ GPS ಆಧಾರಿತ ಹಾಜರಾತಿ ಹಾಕಬೇಕಾಗುತ್ತದೆ. ಈ ಮೂಲಕ ನಕಲಿ ಹಾಜರಾತಿಗೆ ತಡೆ ನೀಡುವುದು, ಹಾಗೂ ಆಡಳಿತದ ಪಾರದರ್ಶಕತೆ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ.

ಆರೋಗ್ಯ ಇಲಾಖೆ ಅಧಿಕೃತ ಪ್ರಕಟಣೆಯ ಪ್ರಕಾರ, ಈ ವ್ಯವಸ್ಥೆ ಎಲ್ಲ ಆರೋಗ್ಯ ಸಂಸ್ಥೆಗಳಲ್ಲೂ ಜುಲೈ 1 ರಿಂದ ಅನಿವಾರ್ಯವಾಗಲಿದೆ. ಆರಂಭಿಕ ಹಂತದಲ್ಲಿ ಕೆಲವು ತರಬೇತಿ ಕಾರ್ಯಕ್ರಮಗಳು ಮತ್ತು ತಾಂತ್ರಿಕ ಸಹಾಯ ವ್ಯವಸ್ಥೆ ರೂಪಿಸಲಾಗುತ್ತಿದೆ.

Author:

...
Sushmitha N

Copy Editor

prajashakthi tv

share
No Reviews