ಶಿರಾ:
ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಹಾಗೂ ನಿರ್ಮಾಪಕರದಂತ ಕೆ.ಮಂಜು ಅವರ ಪುತ್ರ ಶ್ರೇಯಸ್ ಅವರ ಕಾರು ಇಂದು ಹಿರಿಯೂರು ಶಿರಾ ಗಡಿ ಭಾಗದಲ್ಲಿ ಅಪಘಾತಕ್ಕೆ ಈಡಾಗಿದ್ದು, ಸದ್ಯ ನಟ ಮತ್ತು ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಮ್ಮ ಹೊಸ ಸಿನಿಮಾ ವಿಷ್ಣುಪ್ರಿಯ ಸಿನಿಮಾ ಪ್ರಚಾರಕ್ಕಾಗಿ ಇಂದು ಬೆಂಗಳೂರಿನಿಂದ ದಾವಣಗೆರೆಗೆ ಸಿನಿಮಾ ಪ್ರಮೋಶನ್ ಗಾಗಿ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ. ಲಾರಿ ಚಾಲಕ ಏಕಾಏಕಿ ತಿರುಗಿಸಿಕೊಂಡಿದ್ದರಿಂದ BMW ಕಾರಿಗೆ ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ಪರಿಣಾಮ BMW ಕಾರಿನ ಎಡಭಾಗ ಜಖಂಗೊಂಡಿದ್ದು. ಕಾರಿನಲ್ಲಿದ್ದ ಮಂಜು ಪುತ್ರ ನಟ ಶ್ರೇಯಸ್ ಮಂಜು, ಮತ್ತಿತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತ ಆದ ಕೂಡಲೇ ಸ್ಥಳೀಯ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಾರಿನ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ. ಶ್ರೇಯಸ್ ಮಂಜು, ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೇ ದೂರು ಸಹ ದಾಖಲಿಸಿದ್ದಾರೆ. ಓವರ್ ಟೇಕ್ ಮಾಡಲು ಬಂದ ಲಾರಿ ಶ್ರೇಯಸ್ ಇದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.