ಶಿರಾ:
ಬೀದಿ ಬದಿ ಮಾರಾಟವಾಗ್ತಿದ್ದ ಪಾನಿಪುರಿ ಆರೋಗ್ಯಕ್ಕೆ ಹಾನಿಕಾರಕ ಅಂತಾ ಆಗ್ಗಾಗೆ ವರದಿ ಆಗ್ತಾ ಇದ್ರು ಕೂಡ ಜನರು ಮಾತ್ರ ಕೇರ್ ಮಾಡದೇ ಪಾನಿಪುರಿಯನ್ನು ಇಷ್ಟಪಟ್ಟು ತಿಂತ್ತಾರೆ.. ಅದ್ರಲ್ಲೂ ಕೆಲವರಿಗೆ ಬೀದಿಬದಿ ಸಿಗುವ ಪಾನಿಪುರಿ ಅಂದ್ರೆ ಪಂಚಪ್ರಾಣ.. ಆದ್ರೆ ಬೀದಿ ಬದಿ ಪಾನಿಪುರಿ ತಿಂದು ಅಸ್ವಸ್ಥರಾಗಿ ಆಸ್ಪತ್ರೆ ಪಾಲಾಗ್ತಿರೋದು ಅಲ್ಲಲ್ಲಿ ಬೆಳಕಿಗೆ ಬರ್ತಾನೆ ಇದೆ. ಈಗ ಅಂತಹದ್ದೇ ಒಂದು ಪ್ರಕರಣ ಶಿರಾದಲ್ಲಿ ಬೆಳಕಿಗೆ ಬಂದಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣದ ಬೀದಿಬದಿ ಪಾನಿಪಿರಿ ತಿಂದು ಇಬ್ಬರು ಅಸ್ವಸ್ಥಗೊಂಡಿದ್ದರಿಂದ ಗಾಬರಿಯಾದ ಜನರು ಸುಮಾರು 20ಕ್ಕೂ ಹೆಚ್ಚು ಮಂದಿ ಭಯಗೊಂಡಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಮರಳಿದ್ದಾರೆ. ರಸ್ತೆ ಬದಿಯ ಪಾನಿಪುರಿ ತಿಂದು ಇಬ್ಬರು ಮಕ್ಕಳಲ್ಲಿ ವಾಂತಿ ಬೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥಗೊಂಡಿದ್ರು. ಇದ್ರಿಂದ ಗಾಬರಿಯಾದ ಪೋಷಕರು ಕೂಡಲೇ ಮಕ್ಕಳನ್ನು ಬುಕ್ಕಾಪಟ್ಟಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ, ಇನ್ನು ಪಾನಿಪುರಿ ತಿಂದು ಮಕ್ಕಳ ಅಸ್ವಸ್ಥಗೊಂಡ ವಿಚಾರ ವೈರಲ್ ಆಗ್ತಿದ್ದಂತೆ, ಪಾನಿಪುರಿ ತಿಂದಿದ್ದ ಕೆಲವರು ಆಸ್ಪತ್ರೆಯತ್ತ ತೆರಳಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಸದ್ಯ ಬೀದಿಬದಿ ಪಾನಿಪುರಿ ಎಷ್ಟು ಸೇಫ್ ಇದೆ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.
ಇನ್ನು, ಪಾನಿಪುರಿ ಸೇವಿಸಿ ಅಸ್ವಸ್ಥಗೊಂಡ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಬೀದಿ ಬದಿ ಮಾರಾಟ ಮಾಡ್ತಿದ್ದ ಪಾನಿಪುರಿ ಸ್ಯಾಂಪಲ್ನನ್ನು ಕಲೆಕ್ಟ್ ಮಾಡಿಕೊಂಡು ಲ್ಯಾಬ್ಗೆ ಕಳುಹಿಸಿದ್ದಾರೆ. ಲ್ಯಾಬ್ನ ವರದಿ ಬಂದ ಬಳಿಕ ಬೀದಿಬದಿ ಪಾನಿಪುರಿ ಎಷ್ಟು ಸೇಫ್ ಅನ್ನೋದು ಬಯಲಾಗಲಿದೆ. ಯಾವದಕ್ಕೂ ಬೀದಿ ಬದಿ ಆಹಾರವನ್ನು ಸೇವಿಸುವ ಮುನ್ನ ಹುಷಾರ್ ಆಗೀರೋದು ಒಳ್ಳೆಯದು .