SIRA: ಶಿರಾದ ಬುಕ್ಕಾಪಟ್ಟಣದಲ್ಲಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥ ಕೇಸ್‌ | ಬೀದಿ ಬದಿ ಆಹಾರ ತಪಾಸಣೆಗೆ ಮುಂದಾದ ಮುಂದಾದ ನಗರಸಭೆ

ಶಿರಾ: 

ಕಳೆದ ವಾರ ಶಿರಾ ತಾಲೂಕಿನ ಬುಕ್ಕಾಪಟ್ಟಣದ ಬೀದಿ ಬದಿ ಪಾನಿಪುರಿ ತಿಂದು 20 ಮಂದಿ ಅಸ್ವಸ್ಥರಾಗಿದ್ದ ಪ್ರಕರಣ ಬೆಳಕಿಗೆ ಬರ್ತಿದ್ದಂತೆ, ನಗರಸಭೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ಹೌದು ಬುಕ್ಕಾಪಟ್ಟಣದ ಬೀದಿಬದಿ ಪಾನಿಪುರಿ ತಿಂದು ಇಬ್ಬರು ಮಕ್ಕಳು ಅಸ್ವಸ್ಥಗೊಂಡಿದ್ದ ಬೆನ್ನಲ್ಲೇ ಸುಮಾರು 20 ಮಂದಿ ಅಸ್ವಸ್ಥರಾಗಿರೋ ಶಂಕೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ವಾಪಸ್‌ ಆಗಿದ್ರು. ಈ ಬಗ್ಗೆ ಪ್ರಜಾಶಕ್ತಿ ಟಿವಿಯಲ್ಲಿ ವರದಿ ಕೂಡ ಬಿತ್ತರವಾಗಿತ್ತು. ವರದಿ ಪ್ರಸಾರವಾಗಿ ವಾರದ ಬಳಿಕ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು, ನಿನ್ನೆ ಸಂಜೆ ಬೀದಿಬದಿ ಮಾರಾಟ ಮಾಡ್ತಿದ್ದ ಪಾನಿಪುರಿ, ಗೋಬಿ ಸ್ಟಾಲ್‌ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟತೆಯನ್ನು ಪರೀಕ್ಷೆ ಮಾಡಿದರು.

ಬೀದಿ ಬದಿ ಮಾರಾಟ ಮಾಡ್ತಿದ್ದ ಪಾನಿಪುರಿ, ಗೋಬಿ ಮಂಚೂರಿ ಸೇರಿ ಫಾಸ್ಟ್‌ ಫುಡ್‌ ಮಾರಾಟ ಮಾಡುವ ಅಂಗಡಿಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ರು. ಬೀದಿ ಬದಿ ಸಿಗುವ ಪಾನಿಪುರಿ ಹಾಗೂ ಗೋಬಿ ಮಂಚೂರಿ ಎಷ್ಟು ಆರೋಗ್ಯವಾಗಿದೆ ಅನ್ನೋದನ್ನ ಪರೀಕ್ಷೆ ನಡೆಸಿದ್ರು. ಇನ್ನು ತಪಾಸಣೆ ವೇಳೆ ಅಡುಗೆ ಎಣ್ಣೆ ಕಲಬೆರಕೆ ಆಗಿರೋದು ಕಂಡು ಬಂದಿದೆ, ಜೊತೆಗೆ ಬೀದಿ ಮಾರಾಟ ಮಾಡ್ತಿದ್ದ ಟೀ ಕೂಡ ಅಶುದ್ಧವಾಗಿರೋ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಟೀ ತಯಾರಿಸಿ ವೇಸ್ಟ್‌ ಆದ ಟೀ ಪುಡಿಯನ್ನ ಒಣಗಿಸಿ, ಅದೇ ಟೀ ಪುಡಿ ಜೊತೆಗೆ ಕೃತಕ ಕಲರ್‌ನನ್ನು ಬಳಕೆ ಮಾಡ್ತಾ ಇದ್ದಿದ್ದು ಕಂಡು ಬಂದಿದೆ,

ಇನ್ನು, ಬೀದಿ ಬದಿ ಸ್ಟಾಲ್‌ಗಳಲ್ಲಿದ್ದ ಇದ್ದ ಕೆಲವೊಂದು ಉತ್ಪನ್ನಗಳನ್ನು ಸೀಜ್‌ ಮಾಡಿ ತೆಗೆದುಕೊಂಡು ಹೋದ್ರು ಎನ್ನಲಾಗಿದೆ. ಆದ್ರೆ ಪಾನಿಪುರಿ ತಯಾರಿಸುವವರ ಮೇಲೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರೋದು ಕಂಡು ಬಂದಿದೆ,

Author:

...
Keerthana J

Copy Editor

prajashakthi tv

share
No Reviews