Nelamangala Accident : ಕಾರು ರಿವರ್ಸ್ ತೆಗೆಯುವ ಸಂದರ್ಭ ಮಗುವಿನ ಮೇಲೆ ಹರಿದು ಮಗು ಸಾವನ್ನಪ್ಪಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.

ಕಾರು ರಿವರ್ಸ್ ತೆಗೆಯುವ ಸಂದರ್ಭ ಮಗುವಿನ ಮೇಲೆ ಹರಿದು ಮಗು ಸಾವನ್ನಪ್ಪಿದ ಘಟನೆ ಮಾದನಾಯಕನಹಳ್ಳಿ (Madanayakanahalli) ಪೊಲೀಸ್ ಠಾಣಾ ತೋಟದ ಗುಡ್ಡದಹಳ್ಳಿ ಬೆನಕ ಲೇಔಟ್ನಲ್ಲಿ ನಡೆದಿದೆ.
ಕಾರು ಚಕ್ರದಡಿಗೆ ಸಿಲುಕಿ ಮಗು ಸಾವು
ಒಂದೂವರೆ ವರ್ಷದ ನೂತನ್ ಎಂಬ ಮಗು ಕಾರು ಚಕ್ರದಡಿಗೆ ಸಿಲುಕಿ ಮೃತಪಟ್ಟಿದೆ. ಮೋಹನ್ ಅಕ್ಕ ದೇವಿಕಾ ಹಾಗೂ ಭಾವ ಮುನೇಶ್ ಶನಿವಾರ ಬೆಳಗ್ಗೆ ಮೋಹನ್ ಅವರ ಮನೆಗೆ ಬಂದಿದ್ದರು. ಮನೆ ಹೊರಟು ಕಾರನ್ನು ರಿವರ್ಸ್ ತೆಗೆಯುವ ವೇಳೆ, ಆಟವಾಡುತ್ತಿದ್ದ ಮಗುವನ್ನು ಗಮನಿಸದೇ ಕಾರು ಚಲಾಯಿಸುವುದರಿಂದ ಘಟನೆ ಸಂಭವಿಸಿದೆ.
ಇದನ್ನು ಓದಿ : Weather Report : ಇಂದಿನ ಹವಾಮಾನ – ಉತ್ತರ ಕರ್ನಾಟಕದಲ್ಲಿ ಶೀತ ಗಾಳಿ, ಉಳಿದೆಡೆ ಒಣ ಹವೆ
ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎನ್ಎಸ್ 106 (ಅಜಾಗರೂಕತೆಯಿಂದ ಸಾವನ್ನುಂಟು ಮಾಡುವುದು) ಅಡಿ ತನಿಖೆ ನಡೆಯುತ್ತಿದೆ.
ಇದನ್ನು ನೋಡಿ : ಮಧುಗಿರಿಯನ್ನು ಜಿಲ್ಲೆ ಮಾಡುವ ವಿಚಾರ ಮಧುಗಿರಿಯಲ್ಲಿ ರಾಜಣ್ಣ ಏನೇಳಿದ್ರು ಗೊತ್ತಾ




