Mysuru : ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರೆ ಎಚ್ಚರ

ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಘೋಷಿಸಲಾಗಿದ್ದು, ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ನಿಷೇಧ ಹೇರಲಾಗಿದೆ.
ಹೊಸ ಕಠಿಣ ನಿಯಮ!
ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪರಿಸರ ಸಂರಕ್ಷಣೆ ಹಾಗೂ ಬೆಟ್ಟದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಕಠಿಣ ಕ್ರಮ ಕೈಗೊಂಡಿದೆ. ಲಲಿತ ಮಹಲ್ ಪಾರ್ಕಿಂಗ್ ಪ್ರದೇಶದಿಂದ ದೇವಸ್ಥಾನದ ಆವರಣದವರೆಗೆ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಇರುವುದಿಲ್ಲ.ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳು, ಪ್ಲಾಸ್ಟಿಕ್ ನೀರಿನ ಬಾಟಲಿಗಳು ಹಾಗೂ ಒಮ್ಮೆ ಬಳಸಿ ಎಸೆಯುವ ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬೆಟ್ಟದ ಮೇಲೆ ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದನ್ನು ಓದಿ : ಚಾಮುಂಡಿಬೆಟ್ಟಕ್ಕೆ ಹೊಸ ರೂಲ್ಸ್! ₹300 ಟಿಕೆಟ್ ರದ್ದು, ₹2,000ಕ್ಕೆ ನೇರ ದರ್ಶನ

ಯಾವೆಲ್ಲಾ ದಿನಗಳು ಮುಖ್ಯ?
ಆಷಾಢ ಮಾಸದ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
- ಜುಲೈ 17 – ಮೊದಲ ಆಷಾಢ ಶುಕ್ರವಾರ
- ಜುಲೈ 24 – ಎರಡನೇ ಆಷಾಢ ಶುಕ್ರವಾರ
- ಜುಲೈ 31 – ಮೂರನೇ ಆಷಾಢ ಶುಕ್ರವಾರ
- ಆಗಸ್ಟ್ 4 – ಅಮ್ಮನವರ ವರ್ಧಂತಿ
- ಆಗಸ್ಟ್ 7 – ನಾಲ್ಕನೇ ಆಷಾಢ ಶುಕ್ರವಾರ

Mysuru – ಭಕ್ತರಿಗೆ ಸಲಹೆ
ಭಕ್ತರು ಪ್ಲಾಸ್ಟಿಕ್ ಬದಲಾಗಿ ಬಟ್ಟೆಯ ಚೀಲ ಅಥವಾ ಪೇಪರ್ ಬ್ಯಾಗ್ ಬಳಸುವಂತೆ ಸೂಚಿಸಲಾಗಿದೆ. ಜೊತೆಗೆ ಮರುಬಳಕೆ ಮಾಡಬಹುದಾದ ಸ್ಟೀಲ್ ಅಥವಾ ಮರುಬಳಕೆ ಯೋಗ್ಯ ನೀರಿನ ಬಾಟಲಿಗಳನ್ನು ಬಳಸುವಂತೆ ಪ್ರಾಧಿಕಾರ ಮನವಿ ಮಾಡಿದೆ.
ಚಾಮುಂಡಿಬೆಟ್ಟದ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಪವಿತ್ರತೆಯನ್ನು ಕಾಪಾಡುವ ಉದ್ದೇಶದಿಂದ ಜಾರಿಯಾಗಿರುವ ಈ ನಿಯಮಗಳನ್ನು ಪ್ರತಿಯೊಬ್ಬ ಭಕ್ತರೂ ಪಾಲಿಸಬೇಕಿದೆ.

ಇದನ್ನು ನೋಡಿ : ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ – ತುಮಕೂರು ಸೇರಿ ಹಲವೆಡೆ ಲೋಕಾ ರೇಡ್




