ದೆಹಲಿಯಲ್ಲಿ ಚಿಕಿತ್ಸೆಗೊಳಗಾಗಿದ್ದ Shadakshari ಸಂಪೂರ್ಣ ಚೇತರಿಕೆ

ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಶಾಸಕ ಕೆ. ಷಡಕ್ಷರಿ ಅವರು ಸಂಪೂರ್ಣ ಚೇತರಿಸಿಕೊಂಡಿದ್ದು, ಭಾನುವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ತಿಪಟೂರು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.
ದೆಹಲಿಯಲ್ಲಿ ಚಿಕಿತ್ಸೆಗೊಳಗಾಗಿದ್ದ ಶಾಸಕರು
ಜೂನ್ 11ರಂದು ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲು ದೆಹಲಿಗೆ ತೆರಳಿದ್ದಾಗ ಅಸ್ವಸ್ಥರಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಇದನ್ನು ಓದಿ : ತಿಪಟೂರು ಶಾಸಕ ಷಡಕ್ಷರಿ ವಿರುದ್ದ ಜಾತಿ ನಿಂದನೆ ಆರೋಪ

ಮರಳಿ ತಿಪಟೂರಿಗೆ Shadakshari ಆಗಮನ
ದೆಹಲಿಯಿಂದ ವಿಮಾನದಲ್ಲಿ ಬಂದಿರುವ ಶಾಸಕ ಷಡಕ್ಷರಿ ಅವರು ಮಧ್ಯಾಹ್ನ 2.55ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ಕ್ಕೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕರ ಕುಟುಂಬ ವೈದ್ಯರಾದ ಡಾ. ಜಿ.ಎಸ್. ಶ್ರೀಧರ್ ಇಂದು ಮುಂಜಾನೆ ದೆಹಲಿಯ ಮ್ಯಾಕ್ಸ್ ಆಸ್ಪತ್ರೆಗೆ ತೆರೆಳಿ, ಅವರ ಆರೋಗ್ಯ ಪರೀಕ್ಷಿಸಿ ಸಂಪೂರ್ಣವಾಗಿ ಗುಣಮುಖರಾಗಿದ್ದನ್ನು ಖಾತರಿ ಪಡಿಸಿಕೊಂಡು ಇಂದು ತಿಪಟೂರಿಗೆ ಕರೆತರುತ್ತಿದ್ದಾರೆ. ಶಾಸಕರ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ, ಅವರು ತುಂಬಾ ಚೆನ್ನಾಗಿದ್ದಾರೆಂದು ತಿಳಿಸಿದ್ದಾರೆ.

ಇದನ್ನು ನೋಡಿ : ಸಿದ್ದು ಮನವೊಲಿಕೆಗೆ ಜಮೀರ್ ಕಸರತ್ತು..! ಸಿದ್ದರಾಮಯ್ಯ ಹತ್ತಿರ ಏನ್ ಮಾತಾಡಿದ್ರು?




