Mangaluru ನ ಕಡಬ ತಾಲೂಕಿನ ಗುಂಡ್ಯಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

Mangaluru ಜಿಲ್ಲೆಯಲ್ಲಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಈ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಪ್ರದೇಶದ ಗುಂಡ್ಯಹೊಳೆಯಲ್ಲಿ ನಡೆದಿದೆ.
ಸ್ನಾನಕ್ಕೆ ತೆರಳಿದ್ದ ವೇಳೆ ಅವಘಡ
ಮಾಹಿತಿಯ ಪ್ರಕಾರ, ನಾಲ್ವರು ಯುವತಿಯರು ಸ್ನಾನಕ್ಕೆ ತೆರಳಿದ್ದ ವೇಳೆ ಇಬ್ಬರು ನೀರಿನಲ್ಲಿ ಮುಳುಗಿದ್ದಾರೆ.ಮೃತರನ್ನು ಸುನೀತಾ (21) ಮತ್ತು ಅರ್ಪಿತಾ (15) ಎಂದು ಗುರುತಿಸಲಾಗಿದ್ದು, ಇವರು ಕುಟ್ರುಪ್ಪಾಡಿ ನಿವಾಸಿಗಳಾಗಿದ್ದಾರೆ.
MUST READ : ಮೇ 15ಕ್ಕೆ DK Shivakumar ಗೆ ಸಿಎಂ ಪಟ್ಟ ಫಿಕ್ಸ್ ಆಗುತ್ತಾ…?
ಒಂದೇ ಕುಟುಂಬದ ಇಬ್ಬರು ಯುವತಿಯರ ದುರ್ಮರಣ
ಸುನೀತಾ ಮತ್ತು ಅರ್ಪಿತಾ ಒಂದೇ ಕುಟುಂಬದವರಾಗಿದ್ದು, ಇವರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ನೀರಿನಿಂದ ಹೊರತೆಗೆದರು.
MUST WATCH : ಸರ್ಕಾರಿ ವೈದ್ಯರ ವಿರುದ್ಧ ಅಪಪ್ರಚಾರ – ಗ್ರಾಮಸ್ಥರಿಂದ ವೈದ್ಯರ ಪರ ಪ್ರತಿಭಟನೆ..! | MADHUGIRI NEWS |




