Kolar : ಭೀಮನ ಅಮವಾಸ್ಯೆ ದಿನವೇ ಗಂಡನ ಕಥೆ ಮುಗಿಸಿದ ಪತ್ನಿ!

Kolar ತಾಲ್ಲೂಕಿನ ಚೆನ್ನಸಂದ್ರ ಗ್ರಾಮದಲ್ಲಿ ಪತ್ನಿಯೇ ತನ್ನ ಗಂಡನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ನಾರಾಯಣಸ್ವಾಮಿ ಎಂಬ 68 ವರ್ಷದ ವ್ಯಕ್ತಿಯನ್ನು ಆತನ ಪತ್ನಿ ಜಗದಾಂಭ ಕೊಲೆ ಮಾಡಿದ್ದಾಳೆ.
ಹತ್ಯೆಗೆ ಕಾರಣವೇನು?
ಜಮೀನು ಮಾರಾಟ ಮಾಡಿದ ಹಣವನ್ನು ಪತ್ನಿಗೆ ನೀಡುತ್ತಿರಲಿಲ್ಲ ಎಂಬ ಕಾರಣಕ್ಕೆ. ಜೊತೆಗೆ, ಇದ್ದ ಜಮೀನನ್ನೂ ಮಾರಾಟ ಮಾಡುತ್ತಾನೆ ಎಂಬ ಅನುಮಾನದಿಂದ ಪತಿ ನಾರಾಯಣಸ್ವಾಮಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ನಾರಾಯಣಸ್ವಾಮಿ ಹಾಗೂ ಜಗದಾಂಭ ಪ್ರತ್ಯೇಕವಾಗಿ ವಾಸವಾಗಿದ್ರು.
ಇದನ್ನು ಓದಿ : ಕ್ಷುಲ್ಲಕ ಕಾರಣಕ್ಕೆ ಗಲಾಟೆ.. ಚಾಕುವಿನಿಂದ ಚುಚ್ಚಿ ಯುವಕನ ಕೊಲೆ.!

ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ
ಆದ್ರೆ ಕಳೆದ ಎರಡು-ಮೂರು ದಿನಗಳಿಂದ ಪತಿಯನ್ನು ಪುಸಲಾಯಿಸಿ ತೋಟದ ಮನೆಗೆ ಕರೆತಂದಿದ್ದ ಪತ್ನಿ, ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ನಿದ್ರೆಗೆ ಜಾರಿದ ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಕೊಲೆ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : VENUGOPAL SURJEWALA ಮನೆ ಕಾಂಪೌಂಡ್ ಕಾಯೋಕೆ ದೆಹಲಿಗೆ ಬರ್ತಿರಾ-HDK ಕಿಡಿ


