Kantara 1 ರೆಕಾರ್ಡ್ ಬ್ರೇಕ್ ಮಾಡಲು ರೆಡಿ ಆದ ಧುರಂಧರ್ ಸಿನಿಮಾ.

ಬಾಕ್ಸ್ ಆಫೀಸ್ನಲ್ಲಿ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಕೇವಲ ಒಂದೇ ವಾರದಲ್ಲೇ ಈ ಸಿನಿಮಾ ಭಾರತದಲ್ಲಿ 240 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ವಿಶ್ವ ಬಾಕ್ಸ್ ಆಫೀಸ್ನಲ್ಲಿ 350 ಕೋಟಿ ರೂ. ದಾಟಿದೆ.
ಒಂದೇ ವಾರದಲ್ಲಿ 350 ಕೋಟಿ ರೂ.
ಈ ಅಬ್ಬರದ ಗಳಿಕೆಯಿಂದಾಗಿ ‘ಧುರಂಧರ್’ ಸಿನಿಮಾ ‘ಕಾಂತಾರ ಚಾಪ್ಟರ್ 1’ ಚಿತ್ರದ ಒಟ್ಟಾರೆ ದಾಖಲೆಯನ್ನು ಮುರಿಯುತ್ತದೆಯೇ ಎಂಬ ಚರ್ಚೆ ಜೋರಾಗಿದೆ. Kantara 1 ಸಿನಿಮಾ ಕೇವಲ ಒಂದು ತಿಂಗಳಲ್ಲಿ 850 ಕೋಟಿ ರೂ. ಗಳಿಕೆ ಮಾಡಿತ್ತು.
ಆದರೆ ‘ಧುರಂಧರ್’ ಕೇವಲ ಒಂದೇ ವಾರದಲ್ಲಿ 350 ಕೋಟಿ ರೂ. ಬಾಚಿಕೊಂಡಿರುವುದರಿಂದ, ಈ ದಾಖಲೆಗೂ ಸವಾಲು ಹಾಕುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಬಾಕ್ಸ್ ಆಫೀಸ್ನಲ್ಲಿ ಅಬ್ಬರದ ಗಳಿಕೆ
ಇನ್ನು ಧುರಂಧರ್ ಸಿನಿಮಾಗೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಅಂದರೆ, ಸಿನಿಮಾದಲ್ಲಿ ಹೆಚ್ಚಿನ ಮಟ್ಟದ ವೈಲೆನ್ಸ್ ಅಂಶಗಳಿದ್ದು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವೀಕ್ಷಣೆ ನಿಷೇಧಿಸಲಾಗಿದೆ.
ಆದರೂ, ಈ ಮಿತಿಯ ನಡುವೆಯೂ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿರುವುದು ವಿಶೇಷ.
ಇದನ್ನು ಓದಿ : ಭದ್ರಾವತಿಯಲ್ಲಿ ಡಬಲ್ Murder – ಹತ್ಯೆಗೆ ಕಾರಣವೇನು?
ದೊಡ್ಡ Comeback
ಸ್ಪೈ ಕಥಾ ಹಂದರ ಹೊಂದಿರುವ ಧುರಂಧರ್ ಚಿತ್ರ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದು, ರಣವೀರ್ ಸಿಂಗ್ ಅವರ ವೃತ್ತಿ ಜೀವನಕ್ಕೂ ಹೊಸ ಚೈತನ್ಯ ನೀಡಿದೆ. ಇತ್ತೀಚಿನ ದಿನಗಳಲ್ಲಿ ಹಿನ್ನಡೆಯನ್ನು ಎದುರಿಸಿದ್ದ ರಣವೀರ್ಗೆ Dhurandhar ದೊಡ್ಡ Comeback ಆಗಿದೆ ಎನ್ನಲಾಗುತ್ತಿದೆ.
ಈ ಸಿನಿಮಾದ ಯಶಸ್ಸಿನ ಮೇಲೆ ‘ಡಾನ್ 3’ ಚಿತ್ರವನ್ನು ಮುಂದುವರಿಸಬೇಕೇ ಇಲ್ಲವೇ ಎಂಬುದನ್ನು ನಿರ್ದೇಶಕ ಫರ್ಹಾನ್ ಅಖ್ತರ್ ನಿರ್ಧರಿಸುತ್ತಾರೆ ಎಂಬ ಮಾತುಗಳು ಕೂಡ ಸಿನಿ ವಲಯದಲ್ಲಿ ಹರಿದಾಡುತ್ತಿವೆ.

ಧುರಂಧರ್ 2 ಯಾವಾಗ ರಿಲೀಸ್?
ಇನ್ನು, ‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದ್ದು, ಈ ಚಿತ್ರ ‘ಟಾಕ್ಸಿಕ್’ ಸಿನಿಮಾದೊಂದಿಗೆ ಕ್ಲ್ಯಾಶ್ ಆಗಲಿದೆ. ಮುಂದಿನ ದಿನಗಳಲ್ಲಿ ‘ಧುರಂಧರ್’ ಬಾಕ್ಸ್ ಆಫೀಸ್ನಲ್ಲಿ ಇನ್ನೆಷ್ಟು ದಾಖಲೆಗಳನ್ನು ಮುರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ನೋಡಿ : TUMAKURU | ರಾಜಕಾಲುವೆ ಮೇಲೆ ಅಕ್ರಮವಾಗಿ ಕಟ್ಟಿದ್ದ VAIBHAV DRIVE INN DABA ನೆಲಸಮ..!?




