JOB ALERT : ‘KAS ಹುದ್ದೆ ಆಕಾಂಕ್ಷಿ’ಗಳಿಗೆ ಭರ್ಜರಿ ಸಿಹಿಸುದ್ದಿ: ‘319 ಹುದ್ದೆ’ ಭರ್ತಿಗೆ KPSC ಅಧಿಸೂಚನೆ, ನಾಳೆಯಿಂದ ಅರ್ಜಿ ಸಲ್ಲಿಕೆ ಆರಂಭ

ಕರ್ನಾಟಕ ಆಡಳಿತ ಸೇವೆ (KAS) ಸೇರಿದಂತೆ ರಾಜ್ಯ ನಾಗರಿಕ ಸೇವೆಯ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಒಟ್ಟು 319 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (KPSC) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.ಅರ್ಹ ಅಭ್ಯರ್ಥಿಗಳು ಆಗಸ್ಟ್ 1, 2026ರಿಂದ ಆಗಸ್ಟ್ 31, 2026ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪೂರ್ವಭಾವಿ ಪರೀಕ್ಷೆಯನ್ನು ನವೆಂಬರ್ 15, 2026ರಂದು ನಡೆಸಲು ತಾತ್ಕಾಲಿಕವಾಗಿ ನಿಗದಿಪಡಿಸಲಾಗಿದೆ.
ಹುದ್ದೆಗಳ ವಿವರ
ಒಟ್ಟು 319 ಹುದ್ದೆಗಳಲ್ಲಿ,
- ಗ್ರೂಪ್ ‘ಎ’ – 117 ಹುದ್ದೆಗಳು
- ಗ್ರೂಪ್ ‘ಬಿ’ – 202 ಹುದ್ದೆಗಳು
ಇವುಗಳಲ್ಲಿ RPCಗೆ 297 ಹಾಗೂ ಕಲ್ಯಾಣ ಕರ್ನಾಟಕ (HK) ವೃಂದಕ್ಕೆ 22 ಹುದ್ದೆಗಳು ಮೀಸಲಿರುತ್ತವೆ.
ಗ್ರೂಪ್ ‘ಎ’ ಪ್ರಮುಖ ಹುದ್ದೆಗಳು
- ಸಹಾಯಕ ಆಯುಕ್ತರು – 39
- ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು – 50
- ಸಹಾಯಕ ನಿರ್ದೇಶಕರು (ಖಜಾನೆ) – 2
- ಕಾರ್ಯನಿರ್ವಾಹಕ ಅಧಿಕಾರಿ / ಸಹಾಯಕ ಕಾರ್ಯದರ್ಶಿ (RDPR) – 15
- ಸಹಾಯಕ ನಿರ್ದೇಶಕರು ಗ್ರೇಡ್-1 (ಸಮಾಜ ಕಲ್ಯಾಣ) – 11
ಗ್ರೂಪ್ ‘ಬಿ’ ಪ್ರಮುಖ ಹುದ್ದೆಗಳು
- ವಾಣಿಜ್ಯ ತೆರಿಗೆ ಅಧಿಕಾರಿ – 74
- ತಹಶೀಲ್ದಾರ್ ಗ್ರೇಡ್-2 – 25
- ಸಹಕಾರ ಸಂಘಗಳ ಸಹಾಯಕ ನಿಬಂಧಕರು – 21
- ಮುಖ್ಯಾಧಿಕಾರಿ ಗ್ರೇಡ್-1 – 20
- ಸಹಾಯಕ ಖಜಾನಾಧಿಕಾರಿ – 12
- ಸಹಾಯಕ ನಿರ್ದೇಶಕರು (ಕೃಷಿ ಮಾರಾಟ) – 12
- ಸಹಾಯಕ ನಿರ್ದೇಶಕರು ಗ್ರೇಡ್-2 (ಸಮಾಜ ಕಲ್ಯಾಣ) – 11
- ಸಹಾಯಕ ಅಧೀಕ್ಷಕರು (ಕಾರಾಗೃಹ) – 6
- ಅಬಕಾರಿ ಉಪ ಅಧೀಕ್ಷಕರು – 5
- ಶಾಖಾಧಿಕಾರಿ (ಸಚಿವಾಲಯ) – 5
- ಶಾಖಾಧಿಕಾರಿ (KPSC) – 4
- ಸಹಾಯಕ ನಿರ್ದೇಶಕರು (ಆಹಾರ ಮತ್ತು ನಾಗರಿಕ ಸರಬರಾಜು) – 4
- ಉದ್ಯೋಗಾಧಿಕಾರಿ – 3
ಇದನ್ನು ಓದಿ : ಉದ್ಯೋಗಾಕಾಂಕ್ಷಿಗಳಿಗೆ ಶೀಘ್ರವೇ 72,000 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ

ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 1, 2026
- ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 31, 2026
- ಪೂರ್ವಭಾವಿ ಪರೀಕ್ಷೆ: ನವೆಂಬರ್ 15, 2026 (ತಾತ್ಕಾಲಿಕ)
ಶೈಕ್ಷಣಿಕ ಅರ್ಹತೆ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
- ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳೂ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರು.
ವಯೋಮಿತಿ
- ಕನಿಷ್ಠ ವಯಸ್ಸು: 21 ವರ್ಷ
- ಸಾಮಾನ್ಯ ವರ್ಗ: 40 ವರ್ಷ
- 2A, 2B, 3A, 3B: 43 ವರ್ಷ
- SC/ST ಹಾಗೂ ಪ್ರವರ್ಗ-1: 45 ವರ್ಷ
ಸರ್ಕಾರದ ಆದೇಶದಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಮ್ಮೆ ಮಾತ್ರ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಪರೀಕ್ಷೆಯ ಪ್ರಯತ್ನಗಳು
- ಸಾಮಾನ್ಯ ವರ್ಗ: 5 ಪ್ರಯತ್ನಗಳು
- 2A, 2B, 3A, 3B ಹಾಗೂ Cat-1: 7 ಪ್ರಯತ್ನಗಳು
- SC/ST ಅಭ್ಯರ್ಥಿಗಳಿಗೆ ಪ್ರಯತ್ನಗಳ ಮಿತಿ ಇಲ್ಲ
ಪರೀಕ್ಷಾ ವಿಧಾನ
ನೇಮಕಾತಿ ಎರಡು ಹಂತಗಳಲ್ಲಿ ನಡೆಯಲಿದೆ.
ಪೂರ್ವಭಾವಿ ಪರೀಕ್ಷೆ:
- ಎರಡು MCQ ಪ್ರಶ್ನೆ ಪತ್ರಿಕೆಗಳು
- ಪ್ರತಿ ಪತ್ರಿಕೆ 100 ಪ್ರಶ್ನೆಗಳು, 200 ಅಂಕಗಳು
- ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಋಣಾತ್ಮಕ ಮೌಲ್ಯಮಾಪನ
ಮುಖ್ಯ ಪರೀಕ್ಷೆ:
- ವಿವರಣಾತ್ಮಕ (Descriptive) ಮಾದರಿ
- ಒಟ್ಟು 1,250 ಅಂಕಗಳು
- ಕನ್ನಡ ಹಾಗೂ ಇಂಗ್ಲಿಷ್ ಅರ್ಹತಾ ಪತ್ರಿಕೆಗಳಲ್ಲಿ ಕನಿಷ್ಠ 35% ಅಂಕಗಳು ಕಡ್ಡಾಯ
- ವ್ಯಕ್ತಿತ್ವ ಪರೀಕ್ಷೆ: 25 ಅಂಕಗಳು
ಅರ್ಜಿ ಶುಲ್ಕ
- ಸಾಮಾನ್ಯ ವರ್ಗ: ₹600
- 2A, 2B, 3A, 3B: ₹300
- ಮಾಜಿ ಸೈನಿಕರು: ₹50
- SC/ST, Cat-1 ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ಅಭ್ಯರ್ಥಿಗಳು KPSCಯ ಅಧಿಕೃತ ವೆಬ್ಸೈಟ್ನಲ್ಲಿ OTR (One Time Registration) ಪೂರ್ಣಗೊಳಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಸೂಚನೆಯಲ್ಲಿರುವ ಅರ್ಹತೆ, ಮೀಸಲಾತಿ ಹಾಗೂ ಇತರೆ ಷರತ್ತುಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವಂತೆ ಕೆಪಿಎಸ್ಸಿ ಸೂಚಿಸಿದೆ.

ಇದನ್ನು ನೋಡಿ : ಹಾನಗಲ್– ಆಡೂರು ಪೊಲೀಸರ ಭರ್ಜರಿ ಕಾರ್ಯಾಚರಣೆ – ಕಳೆದು ಹೋದ ವಸ್ತುಗಳು ಮತ್ತೆ ಮಾಲೀಕರ ಮಡಿಲಿಗೆ




