Chinnaswamy Stadium ನಲ್ಲಿ ಮತ್ತೆ IPL ಪಂದ್ಯಗಳು ಶುರುವಾಗುವ ಕನಸು ಚಿಗುರೊಡೆಯುತ್ತಿದೆ.

Chinnaswamy Stadium ನಲ್ಲಿ ಮತ್ತೆ IPL ಪಂದ್ಯಗಳು ಶುರುವಾಗುವ ಕನಸು ಚಿಗುರೊಡೆಯುತ್ತಿರುವ ನಡುವೆಯೇ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮಾಡಿರುವ ಟ್ವೀಟ್ ಅಭಿಮಾನಿಗಳ ನಿದ್ದೆಗೆಡಿಸಿದ್ದು, ಐಪಿಎಲ್ Shift ಆಗುವ ಬಗ್ಗೆ ಇದ್ದ ಅನುಮಾನವನ್ನ ಮತ್ತಷ್ಟು ಹೆಚ್ಚಿಸಿದೆ.

ಪುಣೆ ಮೈದಾನ ತವರು ಮೈದಾನವಾಗೋದು ಖಚಿತ
ರಾಜಸ್ಥಾನ್ ರಾಯಲ್ಸ್ ಮತ್ತು RCB ತಂಡಗಳ ಪೈಕಿ ಒಂದು ತಂಡದ ತವರು ಪಂದ್ಯಗಳಿಗೆ ಆತಿಥ್ಯ ವಹಿಸಲು ಮೈದಾನ ಸಿದ್ದವಾಗಿದ್ದು, ಈ ಎರಡು ತಂಡಗಳಲ್ಲಿ ಒಂದು ತಂಡಕ್ಕೆ ಪುಣೆ ಮೈದಾನ ತವರು ಮೈದಾನವಾಗೋದು ಖಚಿತ ಎಂದು ಎಂಸಿಎ ಮಾಹಿತಿ ನೀಡಿದೆ. ಕೆಲ ವಾರಗಳ ಹಿಂದಷ್ಟೇ RCB ಮತ್ತು ಆರ್ ಆರ್ ಆಡಳಿತ ಮಂಡಳಿಗಳು ಪುಣೆ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಇದನ್ನು ಓದಿ : ಕಳೆದ ವರ್ಷಕ್ಕಿಂತ ಈ ವರ್ಷ ಕುಸಿಯಲಿದೆಯೇ ಬೆಂಗಳೂರಿನ ಏರ್ ಕ್ವಾಲಿಟಿ?

MCL ಮಹತ್ವದ ಟ್ವಿಟ್..!?
ಆ ಭೇಟಿ ಬಳಿಕ ಈಗ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡ ಎಂಸಿಎ, ಬಿಸಿಸಿಐ ಮುಂದಿನ ದಿನಗಳಲ್ಲಿ ಈ ತಂಡಗಳಲ್ಲಿ ಒಂದಕ್ಕೆ ಎಂಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣವನ್ನ ಸ್ಥಳವಾಗಿ ಪರಿಗಣಿಸೋದು ಖಚಿತವಾಗಿದೆ.

ಇದನ್ನು ನೋಡಿ : ಗಿಲ್ಲಿ, ಅಶ್ವಿನಿ, ಧನು.. ಬಿಗ್ಬಾಸ್ ಟ್ರೋಫಿ ಎತ್ತಿ ಹಿಡಿಯೋಱರು?




