ರಾಜ್ಯದಲ್ಲಿ ಇಂದಿನಿಂದ D.K Shivakumar ದರ್ಬಾರ್ – ಕನಕಪುರ ಬಂಡೆಯ ಮೂರು ವರ್ಷಗಳ ಕಾಯುವಿಕೆ ಅಂತ್ಯ.

ಕನಕಪುರ ಬಂಡೆ, ಟ್ರಬಲ್ ಶೂಟರ್ ಅಂತಾನೇ ಕರೆಸಿಕೊಳ್ಳುವ ಡಿ.ಕೆ ಶಿವಕುಮಾರ್ ಅವರು ರಾಜ್ಯ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಅವರು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಇಂದಿನಿಂದ ರಾಜ್ಯದಲ್ಲಿ ಡಿಕೆ ದರ್ಬಾರ್ ಶುರುವಾಗುತ್ತಿದೆ.
ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಡಿ.ಕೆ ಪ್ರಮಾಣ ವಚನ ಸ್ವೀಕಾರ
ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಿಕೆ ಪದಗ್ರಹಣಕ್ಕೆ ಗ್ಲಾಸ್ ಹೌಸ್ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ನ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಮಾಜಿ ಸಿಎಂ ಸಿದ್ದರಾಮಯ್ಯ, ತೆಲಂಗಾಣ ಸಿಎಂ ರೇವಂತ್ ರೆಡ್ಡಿ. ಕೇರಳ ಸಿಎಂ ಹಾಗೂ ವಿವಿಧ ಮಠಾಧೀಶರ ದಿವ್ಯ ಸಾನಿಧ್ಯದಲ್ಲಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ವಿಶೇಷವಾಗಿತ್ತು.

ಜ್ಯೋತಿಷಿಗಳ ಸಲಹೆಯಂತೆ ಪ್ರಮಾಣ ವಚನ ಸ್ವೀಕಾರ
ಜ್ಯೋತಿಷಿಗಳ ಸಲಹೆಯಂತೆ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಇಷ್ಟು ದಿನಗಳ ಕಾಲ ಸಿಎಂ ಆದವರು ಪಶ್ಞಿಮ ದ್ವಾರದ ಮೂಲಕ ಲೋಕಭವನಕ್ಕೆ ಬರ್ತಾ ಇದ್ದು, ಆದ್ರೆ ಡಿ.ಕೆ ಶಿವಕುಮಾರ್ ಸಿಎಂ ಆದ ಬಳಿಕ ಹೊಸ ಸಂಪ್ರದಾಯ ಶುರುವಾಗಿದ್ದು, ಉತ್ತರ ದಿಕ್ಕಿನ ಮೂಲಕ ಡಿಕೆಶಿ ಪ್ರವೇಶ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಡಿ.ಕೆ ಶಿವಕುಮಾರ್ ಲೋಕಭವನಕ್ಕೆ ಆಗಮಿಸ್ತಾ ಇದ್ದಂತೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತ್ತು. ವೇದಿಕೆ ಬಳಿ ಡಿಕೆಶಿ ಆಗಮಿಸ್ತಾ ಇದ್ದಂತೆ ಸ್ವಾಮೀಜಿಗಳಿಂದ ಆಶೀರ್ವಾದವನ್ನು ಪಡೆದು ಬಳಿಕ, ವೇದಿಕೆಗೆ ಡಿಕೆಶಿ ತೆರಳಿದರು.
ರೇಷ್ಮೆ ಪಂಚೆ, ಜುಬ್ಬ, ಶಲ್ಯ ಧರಿಸಿ ಡಿಕೆಶಿ ಮಿಂಚ್ಚಿಂಗ್
ಪದಗ್ರಹಣ ಕಾರ್ಯಕ್ರಮ ಹಿನ್ನೆಲೆ ಡಿಕೆಶಿ ರೇಷ್ಮೆ ಪಂಚೆ, ಜುಬ್ಬ, ಶಲ್ಯ ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದ ತೊಟ್ಟು ಬಂದಿದ್ರು. ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪದಗ್ರಹಣ ಕಾರ್ಯಕ್ರಮದಲ್ಲಿ ಡಿಕೆಶಿ ದೀರ್ಘದಂಡ ನಾಮಸ್ಕಾರ ಮಾಡಿದರು. ಬಳಿಕ ವೇದಿಕೆ ಮೇಲೆಯೇ ಇರಿಸಿದ್ದ ಅಜ್ಜಯ್ಯನವರ ಭಾವಚಿತ್ರಕ್ಕೆ ಡಿಕೆಶಿ ಪುಷ್ಪ ನಮನ ಸಲ್ಲಿಸಿ ಬಳಿಕ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನು ಓದಿ : ಸಾತನೂರಿನಿಂದ ವಿಧಾನಸಭೆವರೆಗೂ ಕನಕಪುರ ಬಂಡೆಯ ರೋಚಕ ಜರ್ನಿ!

ಕೈಯಲ್ಲಿ ಸಂವಿಧಾನ ಹಿಡಿದುಕೊಂಡು ರಾಜ್ಯದ 25ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಡಿಕೆ ಶಿವಕುಮಾರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಿ.ಕೆ ಶಿವಕುಮಾರ್ ಅವರು ವೀರ ಗಂಗಾಧರ ಅಜ್ಜಯ್ಯ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರತಿಜ್ಞಾವಿಧಿ ಸ್ವೀಕಾರದ ಬಳಿಕ ರಾಜ್ಯಪಾಲರು ಸಿಎಂಗೆ ಹೂಗುಚ್ಛ ನೀಡಿ ಡಿಕೆಶಿ ಅವರನ್ನು ಅಭಿನಂದಿಸಿದ್ರು. ಬಳಿಕ ವೇದಿಕೆ ಮೇಲಿನ ಗಣ್ಯರು ಡಿಕೆಶಿಗೆ ಶುಭಾಶಯಗಳನ್ನು ತಿಳಿಸಿದ್ರು.
ಇಂದಿನಿಂದ ರಾಜ್ಯದಲ್ಲಿ D.K Shivakumar ದರ್ಬಾರ್
ಇತ್ತ ಡಿಕೆಶಿ ಪದಗ್ರಹಣಕ್ಕೆ ಆಗಮಿಸಿದ್ದ ಡಿಕೆಶಿ ಪತ್ನಿ ಉಷಾ ಹಾಗೂ ಪುತ್ರಿ ಐಶ್ಚರ್ಯ ಮೊಗದಲ್ಲಿ ಸಂಭ್ರಮ ಮುಗಿಲುಮುಟ್ಟಿತ್ತು.. ಆನಂದಭಾಷ್ಪವನ್ನೇ ಹರಿಸಿದ್ರು. ಇನ್ನು ಡಿ.ಕೆ ಶಿವಕುಮಾರ್ ಅವರು ಪ್ರಮಾಣ ವಚನವನ್ನು ಓದುತ್ತಿದಂತೆ ಡಿಕೆಶಿ ಶಿಳ್ಳೆ ಹಾಕುತ್ತಾ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ್ರು. ರಾಜಭವನ ಮುಂಭಾಗ ಸಂಪೂರ್ಣವಾಗಿ ಹರ್ಷೋದ್ಗಾರಗಳಿಂದ ತುಂಬಿಕೊಂಡಿತ್ತು. ಹಲವರು ಪರಸ್ಪರ ಅಪ್ಪಿಕೊಂಡು ಶುಭಾಶಯಗಳನ್ನು ಹಂಚಿಕೊಂಡರು. ಒಟ್ನಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಅಂತ್ಯ ಕಂಡಿದ್ದು, ಇಂದಿನಿಂದ ರಾಜ್ಯದಲ್ಲಿ ಡಿಕೆ ದರ್ಬಾರ್ ಶುರುವಾಗಲಿದೆ. ಮುಂದಿನ ದಿನಗಳಲ್ಲಿ ಡಿಕೆ ಆಡಳಿತ ಯಾವ ರೀತಿ ಇರಲಿದೆ ಅನ್ನೋದನ್ನ ಕಾದುನೋಡಬೇಕಿದೆ.

ಇದನ್ನು ನೋಡಿ : ಡಾ.ಜಿ ಪರಮೇಶ್ವರ್ಗೆ ಬಂಪರ್ ಆಫರ್ – ಎರಡನೇ ಬಾರಿ DCM ಆದPARAM




