ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ Devil ಸಿನಿಮಾ ರಿಲೀಸ್ ಆಗಿದೆ.

ನಟ ದರ್ಶನ್ ನಟನೆಯ ಡೆವಿಲ್ ಸಿನಿಮಾ ಡಿಸೆಂಬರ್ 11ರಂದುರಿಲೀಸ್ ಆಗಿ ಭರ್ಜರಿಯಾಗಿಯೇ ಅಬ್ಬರಿಸುತ್ತಿದೆ. ಈ ಸಿನಿಮಾ ಮೊದಲ ದಿನವೇ 13.8 ಕೋಟಿ ಕಲೆಕ್ಷನ್ ಮಾಡಿದೆ. ಹಾಗೆಯೇ ಇದೀಗ 50 ಕೋಟಿಯತ್ತ ದಾಪುಗಾಲಿಡುತ್ತಿದೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಅನೇಕ ಕಡೆ Devil ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.
ಇದನ್ನು ಓದಿ : ಗಲಾಟೆ ಬಿಡಿಸಲು ಹೋದ ವ್ಯಕ್ತಿಯ ಕೊಲೆ
ದರ್ಶನ್ ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ರಿಲೀಸ್
ಇನ್ನು ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದ ಮೊದಲ ದಿನ ಮೊದಲ ಶೋವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ವೀಕ್ಷಣೆ ಮಾಡಿದ್ದರು.
ಮೀನಾ ತೂಗುದೀಪ್ ಡೆವಿಲ್ ವೀಕ್ಷಣೆ
ಸಿನಿಮಾ ಬಿಡುಗಡೆಯಾದ ಒಂದು ವಾರದ ನಂತರ, ದರ್ಶನ್ ತಾಯಿ ಮೀನಾ ತೂಗುದೀಪ್ ಮೈಸೂರಿನ ಡಿಆರ್ಸಿ (DRC) ಚಿತ್ರಮಂದಿರದಲ್ಲಿ ‘ಡೆವಿಲ್’ ಚಿತ್ರ ವೀಕ್ಷಿಸಿದರು. ಮೀನಾ ಅವರು ಅಭಿಮಾನಿಗಳು ಮತ್ತು ಸ್ನೇಹಿತರೊಂದಿಗೆ ಚಿತ್ರವನ್ನು ನೋಡಿದ್ದು, ವೀಕ್ಷಣೆಯ ನಂತರ ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನು ನೋಡಿ : ಈ ವರ್ಷ ಸರ್ಕಾರಕ್ಕೆ ಶೇ. 8 ಹೆಚ್ಚು ಟ್ಯಾಕ್ಸ್ ಸಂಗ್ರಹ




