
Dasara program at Dodderi Honneshwara Temple in Madhugiri : ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಶ್ರೀ ಹೊನ್ನೇಶ್ವರ ಸ್ವಾಮಿ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ದೇವಾಲಯದಲ್ಲಿ ಮೂರು ದಿನಗಳ ದಸರಾ ಉತ್ಸವ ಕಾರ್ಯಕ್ರಮಗಳನ್ನ ಆಯೋಜಿ ಸಲಾಗ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಜೆ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ರು.
ತಾಲೂಕಿನ ಕುಂಚಿಟಿಗರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಮಾತನಾಡಿ “ದೇವಾಲಯದ ಅಭಿವೃದ್ದಿ ಕಾರ್ಯಗಳಿಗೆ ಹಾಗೂ ದಸರಾ ಉತ್ಸವದ ನೆಪದಲ್ಲಿ ಗೊಂದಲ ಸೃಷ್ಠಿಸಲು ಹೊನ್ನೇಶಗೌಡ ಬಿ.ಆರ್ ದುರುದ್ದೇಶವಾಗಿ ಕಿರುಕುಳ ನೀಡ್ತಾ ಇದಾರೆ. ಅಲ್ದೇ ಟ್ರಸ್ಟ್ ನ ಹೆಸರಲ್ಲಿ ಆತ ಔಪಚಾರಿಕ ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಿರುವುದು ಅನಧಿಕೃತ. ಹೀಗಾಗಿ ತಹಸೀಲ್ದಾರ್ ಅವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದ್ದು, ಸಿವಿಲ್ ನ್ಯಾಯಾಲಯದ ಆದೇಶದಂತೆ ದೇವಾಲಯದ ಎಲ್ಲ ಕಾರ್ಯಕ್ರಮಗಳನ್ನ ಶ್ರೀ ಹೊನ್ನೇಶ್ವರ ಸ್ವಾಮಿ ಜೀರ್ಣೋದ್ಧಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆಯಲಿದೆ ಎಂದ್ರು.
ಇನ್ನು ಭಕ್ತಾಧಿಗಳು ಯಾವುದೇ ಗೊಂದಲಕ್ಕೀಡಾಗದೇ, ನಿಜವಾದ ಟ್ರಸ್ಟ್ ವತಿಯಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಈ ದಸರಾ ಉತ್ಸವವನ್ನ ಶ್ರದ್ದಾಪೂರ್ವಕವಾಗಿ ಯಶಸ್ವಿ ಗೊಳಿಸೋಣ ಎಂದ್ರು. ಈ ವೇಳೆ ಟ್ರಸ್ಟ್ ಪದಾಧಿಕಾರಿಗಳಾದ ಬಿ.ವಿ ಶಿವರಾಜು, ಕೆ ಶ್ರೀಧರ್, ಕೆ ಮಂಜು ನಾಥ್, ಕರಿಯಣ್ಣ ಬಿ, ಶಿವರಾಮು, ಜಗದೀಶ್ ಬಾಬು, ದೀಪಕ್ ಹೊನ್ನಾವರ ಸೇರಿದಂತೆ ಹಲವರು ಉಪಸ್ಥಿತರಿದ್ರು.




