ಕೊನೆಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಚಟುವಟಿಕೆ ಚುರುಕು – ಇಂದು ರಾತ್ರಿ ದೆಹಲಿಗೆ CM , ಮಾಜಿ ಸಿಎಂ ದೌಡು!

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ ಜೀವ ಬಂದಿದೆ. ಸಂಪುಟ ಸರ್ಜರಿ ಕುರಿತು ಹೈಕಮಾಂಡ್ ನಾಯಕರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಇಂದು ರಾತ್ರಿ ದೇಶದ ರಾಜಧಾನಿ ದೆಹಲಿಗೆ ತಲುಪಲಿದ್ದಾರೆ.
ನಾಳೆ ಮೊದಲ ಹಂತದ ಮಹತ್ವದ ಸಭೆ
ನಾಳೆ ಎಐಸಿಸಿ ನಾಯಕರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಮೊದಲ ಹಂತದ ಮಹತ್ವದ ಸಭೆ ನಡೆಯಲಿದೆ.
ಸಭೆಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ, ಪ್ರಾದೇಶಿಕ ಹಾಗೂ ಜಾತಿ ಸಮತೋಲನ ಸೇರಿದಂತೆ ವಿವಿಧ ರಾಜಕೀಯ ಅಂಶಗಳ ಕುರಿತು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದನ್ನು ಓದಿ : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ದೇವೇಗೌಡ ಸ್ಪೋಟಕ ಆರೋಪ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡಾರ್ಜಿಲಿಂಗ್ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ, ಅವರ ಅನುಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ರಾಹುಲ್ ಗಾಂಧಿ ಅಂತಿಮ ನಿರ್ಧಾರ
ನಾಳೆಯ ಮೊದಲ ಹಂತದ ಚರ್ಚೆಯ ವರದಿಯ ಆಧಾರದ ಮೇಲೆ, ರಾಹುಲ್ ಗಾಂಧಿ ಅವರು ಡಾರ್ಜಲಿಂಗ್ನಿಂದ ಮರಳಿದ ಬಳಿಕ ಅವರೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ.
ಆ ಬಳಿಕವಷ್ಟೇ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎಂಬ ಗ್ರೀನ್ ಸಿಗ್ನಲ್ ಸಿಗಲಿದ್ದು, ರಾಹುಲ್ ಗಾಂಧಿ ಅವರೇ ಅಂತಿಮ ಪಟ್ಟಿಗೆ ಮುದ್ರೆ ಒತ್ತಲಿದ್ದಾರೆ.

ದೆಹಲಿಗೆ ತೆರಳಲಿರುವ CM, ಮಾಜಿ ಸಿಎಂ
ಒಟ್ಟಿನಲ್ಲಿ, ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆಗೆ ಈಗ ದೆಹಲಿ ಮಟ್ಟದಲ್ಲಿ ಅಧಿಕೃತ ಚಾಲನೆ ಸಿಕ್ಕಂತಾಗಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬ ಕೌಂಟ್ಡೌನ್ ಆರಂಭವಾಗಿದೆ.
ಇದನ್ನು ನೋಡಿ : ಅಮಾವಾಸ್ಯೆ ರಾತ್ರಿ ಬುರುಡೆ ಇಟ್ಟು ವಾಮಾಚಾರ – ಬುರುಡೆ, ಮೂಳೆ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು




