ಸಿದ್ದರಾಮಯ್ಯ ಇಳಿಸಲು ಹೈಕಮಾಂಡ್ಗೆ ಕೊಟ್ಟ ಭರವಸೆಯಂತೆ ಟೌನ್ಶಿಪ್ – CM ಡಿಕೆ ವಿರುದ್ಧ ದೇವೇಗೌಡ ಸ್ಪೋಟಕ ಆರೋಪ!

ರಾಮನಗರ ಜಿಲ್ಲೆಯ ಬಿಡದಿ ಟೌನ್ಶಿಪ್ ಯೋಜನೆ ಹಾಗೂ ಜೆಎಂಸಿ ಸರ್ವೆ ವಿವಾದ ರಾಜ್ಯ ರಾಜಕಾರಣದಲ್ಲಿ ಭಾರೀ ಸ್ಟೋಟಗೊಂಡಿದೆ. ಈ ವಿಚಾರವಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಪೋಟಕ ಆರೋಪಗಳನ್ನು ಮಾಡಿದ್ದಾರೆ.
ದೊಡ್ಡ ರಾಜಕೀಯ ಗೇಮ್ ಪ್ಲಾನ್ ಅಡಗಿದೆ
ಬೆಂಗಳೂರಿನ ಜೆಪಿ ಭವನದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ನಡೆಸಿದ ದೇವೇಗೌಡರು, ಬಿಡದಿ ಟೌನ್ಶಿಪ್ ಯೋಜನೆಯ ಹಿಂದೆ ರಾಜಕೀಯ ಉದ್ದೇಶ ಅಡಗಿದೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಹಾಗೂ ಕಾಂಗ್ರೆಸ್ ಹೈಕಮಾಂಡ್ನ ವಿಶ್ವಾಸ ಗಳಿಸಲು ನೀಡಿರುವ ಭರವಸೆ ಈಡೇರಿಸಲು ಬಿಡದಿಯ ಸುಮಾರು 7 ಸಾವಿರ ಎಕರೆ ಭೂಮಿಯನ್ನು ನಿವೇಶನ ಮಾಡಲು ಹೊರಟಿದ್ದಾರೆ.
ಇದನ್ನು ಓದಿ : ಬಿಡದಿ ಟೌನ್ಶಿಪ್ ಯೋಜನೆ ಲೂಟಿ ಸ್ಕೀಮ್ – ಡಿಕೆಶಿ ವಿರುದ್ಧ HDK ವಾಗ್ದಾಳಿ

ಬಡ ರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ – CM ವಿರುದ್ಧ ದೇವೇಗೌಡ ಆರೋಪ!
ಮುಂದುವರಿದು ಡಿಕೆಶಿಗೆ ನೇರ ಎಚ್ಚರಿಕೆ ನೀಡಿದ ದೇವೇಗೌಡರು, “ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ತೆಗೆಯಲು ಹೈಕಮಾಂಡ್ಗೆ ಕೊಟ್ಟ ಆಶ್ವಾಸನೆಯನ್ನು ಫುಲ್ಫಿಲ್ ಮಾಡಿಕೊಳ್ಳಲು ಬೇರೆ ಮಾರ್ಗ ಹುಡುಕಿಕೊಳ್ಳಿ. ಅದನ್ನು ಬಿಟ್ಟು ಬಡ ರೈತರ ಹೊಟ್ಟೆಯ ಮೇಲೆ ಹೊಡೆಯಬೇಡಿ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಸುಳ್ಳು ಪ್ರಸ್ತಾಪ ಮಾಡುತ್ತಿದ್ದಾರೆ. ಅವರ ಚಾಕಚಕ್ಯತೆ ನನಗೆ ಚೆನ್ನಾಗಿ ಗೊತ್ತಿದೆ” ಎಂದು ಕಿಡಿಕಾರಿದರು.

ರೈತರ ಮೇಲಿನ ಎಫ್ಐಆರ್ ವಾಪಸ್ ಪಡೆಯಬೇಕು
ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳ ಕುರಿತು ಕೂಡ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಘಟನೆಯ ವೇಳೆ ಪೊಲೀಸರಿಗೆ ಗಂಭೀರ ಗಾಯಗಳಾಗಿಲ್ಲ. ರೈತರ ಮೇಲೆ ಸುಳ್ಳು ಎಫ್ಐಆರ್ ದಾಖಲಿಸಿ ಬಂಧಿಸುವ ಕ್ರಮ ಸರಿಯಲ್ಲ.
ಇದರಿಂದ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಸರ್ಕಾರ ತಕ್ಷಣವೇ ರೈತರ ಮೇಲಿನ ಎಫ್ಐಆರ್ಗಳನ್ನು ವಾಪಸ್ ಪಡೆಯಬೇಕು” ಎಂದು ಗಡುವು ನೀಡಿದ್ದಾರೆ.

ಇದನ್ನು ನೋಡಿ : ಯುವತಿಯರ ಜೊತೆ ಪೊಲೀಸಪ್ಪನ ಪೋಲಿ ಆಟ ಹೆಂಡ್ತಿ, ಮಾವನ ಮೇಲೆ ಮಚ್ಚು ಬೀಸಲು ಮುಂದಾದ




