ದೆಹಲಿಯಲ್ಲಿ ಸಂಪುಟ ವಿಸ್ತರಣೆ ಪ್ರಾಥಮಿಕ ಚರ್ಚೆ; ಪ್ರತ್ಯೇಕ ಪಟ್ಟಿ ಕಳುಹಿಸಲು CM , ಮಾಜಿ ಸಿಎಂಗೆ ಸೂಚನೆ

ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಈಚೆಗೆ ನಡೆದಿದ್ದು, ಪ್ರಾಥಮಿಕ ಚರ್ಚೆಯಷ್ಟೇ. ಪ್ರತ್ಯೇಕ ಪಟ್ಟಿಯನ್ನು ಕಳುಹಿಸುವಂತೆ ಸಿಎಂ ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ ನೀಡಿದೆ.
ಇದನ್ನು ಓದಿ : ದೆಹಲಿಯಲ್ಲಿ ಮಹತ್ವದ ಸಭೆ.. ಯಾರಿಗೆ ಸಿಗಲಿದೆ ಮಂತ್ರಿ ಪಟ್ಟ?

CM ಗೆ ಪ್ರತ್ಯೇಕ ಪಟ್ಟಿ ಕಳುಹಿಸಲು ಸೂಚನೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸುವ ಪಟ್ಟಿಯನ್ನು ಆಧರಿಸಿ ಸೋಮವಾರದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ನಡೆಯಲಿದೆ. ಅಗತ್ಯವಿದ್ದರೆ ಇಬ್ಬರನ್ನು ದೆಹಲಿಗೆ ಬುಲಾವ್ ನೀಡುವ ಸಾಧ್ಯತೆಯಿದೆ.

ಮುಂದಿನ ಬೆಳವಣಿಗೆ ಹೀಗಿರಲಿದೆ?
ಇನ್ನು ಇಬ್ಬರು ನಾಯಕರು ಸಲ್ಲಿಸುವ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ, ಮುಂದಿನ ವಾರವೇ ಸಚಿವ ಸಂಪುಟ ವಿಸ್ತರಣೆಯ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. ಮುಂದಿನ ಬೆಳವಣಿಗೆ ಹೀಗಿರಲಿದೆ ಎಂದು ಸಿಎಂ ಹಾಗೂ ಮಾಜಿ ಸಿಎಂಗೆ ಎಐಸಿಸಿ ನಾಯಕರು ಸ್ಪಷ್ಟ ಸೂಚನೆ ನೀಡಿದ್ದಾರೆ.
ಇದನ್ನು ನೋಡಿ : ಮತ್ತೆ ವಕ್ಕರಿಸಿತಾ CORONA ಮಹಾಮಾರಿ..! – COVID CONTROLಗೆ DC ಅಗತ್ಯ ಕ್ರಮ




