Suicide : ಹೊಟ್ಟೆ ನೋವು ತಾಳಲಾರದೆ ನೇಣಿಗೆ ಶರಣು.?

ಹೊಟ್ಟೆ ನೋವು ತಾಳಲಾಗದೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು Suicide ಮಾಡಿಕೊಂಡಿರುವ ದುರ್ಘಟನೆ ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಬ್ಯಾತ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ಗುಲ್ಬರ್ಗ ಜಿಲ್ಲೆಯ ಕಲಗಿ ತಾಲೂಕಿನ ಸಾಲಹಳ್ಳಿ ನಿವಾಸಿ 19 ವರ್ಷದ ಕೀರ್ತನಾ ಎಂದು ಗುರುತಿಸಲಾಗಿದೆ.
ಕೆಲಸ ಹುಡುಕಲು ಬಂದಿದ್ದ ವೇಳೆ ನಡೆದ ಘಟನೆ
ಕೀರ್ತನಾ ಕೆಲಸ ಹುಡುಕುವ ಉದ್ದೇಶದಿಂದ ಎರಡು ತಿಂಗಳ ಹಿಂದೆ ತುಮಕೂರಿಗೆ ಬಂದು ಚಿಕ್ಕಪ್ಪನ ಮನೆಯಲ್ಲಿ ವಾಸವಾಗಿದ್ದಳು. ಆದರೆ, ಕೆಲಸ ಸಿಗದ ಕಾರಣ ಚಿಕ್ಕಪ್ಪನ ಮನೆಯಲ್ಲೇ ಉಳಿದಿದ್ದಳು. ಘಟನೆ ನಡೆದ ದಿನ ಚಿಕ್ಕಪ್ಪನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಸೀರೆಯನ್ನು ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನು ಓದಿ : Hassan|ಮಗನಿಂದಲೇ ತಂದೆಯ ಬರ್ಬರ ಹತ್ಯೆ
ಹೊಟ್ಟೆ ನೋವು ತಾಳಲಾರದೆ Suicide
ಮೃತ ಯುವತಿಗೆ ಇತ್ತೀಚೆಗೆ ಋತುಕಾಲದ ಸಂದರ್ಭದಲ್ಲಾಗುವ ತೀವ್ರ ಹೊಟ್ಟೆ ನೋವು ಇದ್ದು, ಅದನ್ನು ತಾಳಲಾಗದೆ ಈ ದುರ್ಘಟನೆ ನಡೆದಿದೆ ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರು ಮತ್ತು ಗ್ರಾಮಸ್ಥರು ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ.
ಪ್ರಕರಣ ದಾಖಲು
ಘಟನೆಯ ಮಾಹಿತಿ ಪಡೆದ ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ಎರಡೇ ದಿನಕ್ಕೆ ತೀವ್ರವಾಗಿ ಕುಸಿದ ‘ದಿ ರಾಜಾ ಸಾಬ್’ ಸಿನಿಮಾ ಕಲೆಕ್ಷನ್




