Bigg Boss ಮನೆಗೆ ಕ್ರೇಜಿಸ್ಟಾರ್ ಎಂಟ್ರಿ – ತನ್ನ ಹೃದಯ ಕದ್ದ ಚೆಲುವೆ ಬಗ್ಗೆ ಮಾತಾಡಿದ ರವಿಚಂದ್ರನ್.

ಬಿಗ್ಬಾಸ್ ಮನೆಗೆ ಅತಿಥಿಗಳು ಆಗಾಗ್ಗೆ ಬರುತ್ತಲೇ ಇರುತ್ತಾರೆ. ಕೆಲ ವಾರಗಳ ಹಿಂದಷ್ಟೆ ಈ ಹಿಂದಿನ ಸೀಸನ್ನ ಕೆಲ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ ಬಂದಿದ್ದರು. ಈ ಹಿಂದಿನ ಸೀಸನ್ಗಳಲ್ಲಿ ಸಹ ಕೆಲ ಬೇರೆ ಅತಿಥಿಗಳು ಸಹ ಬಂದಿದ್ದರು. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ Bigg Boss ಮನೆಗೆ ಬಂದಿದ್ದಾರೆ.
ಸಿನಿಮಾದ ಪ್ರಚಾರ
ಬಿಗ್ಬಾಸ್ ಮನೆ ಒಳಗೆ ಇದು ಅವರ ಮೊದಲ ಎಂಟ್ರಿ. ತಮ್ಮ ಹೊಸ ಸಿನಿಮಾದ ಪ್ರಚಾರಕ್ಕೆಂದು ಬಿಗ್ಬಾಸ್ ಮನೆಗೆ ಬಂದಿರುವ ರವಿಚಂದ್ರನ್ ಅವರು ತಮ್ಮ ಮೊದಲ ಪ್ರೇಮಕಥೆಯನ್ನು ಬಿಗ್ಬಾಸ್ ಮನೆಯಲ್ಲಿ ಹೇಳಿದ್ದಾರೆ.
ಲವ್ ಸ್ಟೋರಿ
ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಕೂರಿಸಿಕೊಂಡು ರವಿಚಂದ್ರನ್ ತಮ್ಮ ಕಾಲೇಜು ದಿನಗಳ ಮೊದಲ ಲವ್ ಸ್ಟೋರಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ನಾನಿನ್ನ ಮರೆಯಲಾರೆ ಸಿನಿಮಾದಲ್ಲಿ ರಾಜ್ಕುಮಾರ್ ಅವರು ಓಡಿಸಿದ್ದ ಬೈಕ್ ತಗೊಂಡು ಕಾಲೇಜಿಗೆ ಎಂಟ್ರಿಯಾದೆ.
ಇದನ್ನು ಓದಿ : ರಾಮನಗರದಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ

ಫಸ್ಟ್ ಪ್ರೀತಿಸಿದ ಹುಡುಗಿ ಅವಳು
ಆಗ ಅಲ್ಲೇ 10-15 ಹುಡುಗಿಯರು ನಿಂತಿದ್ದರು. ನನ್ನ ಮೋಟರ್ಬೈಕ್ ಸೌಂಡ್ಗೆ ಒಂದು ಹುಡುಗಿ ತಿರುಗಿ ನೋಡ್ತಾಳೆ. ಇವತ್ತಿನವರೆಗೂ ಆ ಕ್ಷಣನ ಮರೆತಿಲ್ಲ ನಾನು. ಫಸ್ಟ್ ಪ್ರೀತಿಸಿದ ಹುಡುಗಿ ಅವಳು’ ಅಂತ ರವಿಚಂದ್ರನ್ ಹೇಳಿಕೊಳ್ತಾರೆ.
ಒಂದು ವರ್ಷ ಪ್ರೀತಿ ಮಾಡಿದ್ದೀವಿ
‘ಅವಳಿಗೆ ಐ ಲವ್ ಯು ಅಂತ ಹೇಳೋಕೆ ಒಂದು ವರ್ಷ ತಗೊಂಡೆ. ಕಣ್ಣಲ್ಲೇ ಇಬ್ಬರೂ ಒಂದು ವರ್ಷ ಪ್ರೀತಿ ಮಾಡಿದ್ದೀವಿ. ಒಂದು ದಿನ ಅವಳನ್ನು ಮಾತಾಡಿಸಲೇಬೇಕು ಅಂತ ಕಾರು ತಗೊಂಡು ಕಾಲೇಜ್ಗೆ ಹೋಗಿದ್ದೆ. ನಡೆದುಕೊಂಡು ಹೋಗ್ತಿದ್ದ ಅವಳ ಬಳಿ ಕಾರು ನಿಲ್ಲಿಸಿ, ನಿಮಗೆ ಡ್ರಾಪ್ ಕೊಡ್ಲಾ ಅಂತ ಕೇಳ್ತೀನಿ. ಆದರೆ, ಅವಳು ನೋ ಥ್ಯಾಂಕ್ಸ್ ಅಂತ ಹೇಳಿ ಹೊರಟು ಹೋಗ್ತಾಳೆ.
ಪ್ರೇಮ ಪ್ರಸಂಗ
ಅಷ್ಟೇ.. ನೆಕ್ಸ್ಟ್ಯಿಂದ ಕಾಲೇಜ್ಗೆ ಬಂದಿಲ್ಲ ನಾನು. ಒಂದು ವಾರ ನಾನು ಕಾಲೇಜ್ಗೆ ಹೋಗಲ್ಲ. ಒಂದು ದಿನ ಲ್ಯಾಂಡ್ಲೈನ್ಗೆ ಕಾಲ್ ಬರುತ್ತೆ. ಮನೆ ನಂಬರ್ ಹೇಗೋ ತಿಳ್ಕೊಂಡು ಅವಳೇ ಕಾಲ್ ಮಾಡಿದ್ದಳು. ಅಲ್ಲಿಂದ ಇಬ್ಬರು ಮಾತನಾಡಲು ಶುರು ಮಾಡ್ತೀವಿ’ ಅಂತ ರವಿಚಂದ್ರನ್ ತಮ್ಮ ಪ್ರೇಮ ಪ್ರಸಂಗ ತೆರೆದಿಟ್ಟಿದ್ದಾರೆ.

ಇದನ್ನು ನೋಡಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ರಿಂದ ಗೃಹಲಕ್ಷ್ಮೀ ಯೋಜನೆ ಹಣದ ಅಪ್ಡೇಟ್




