19 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ Gang Rape – ಮೂವರು ಆರೋಪಿಗಳು ಸೆರೆ.

ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು ರಾಮನಗರದಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ವರದಿಯಾಗಿದೆ. ಮಾಗಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ವಿಕಾಸ್, ಚೇತನ್ ಮತ್ತು ಪ್ರಶಾಂತ್ ಎನ್ನಲಾಗಿದೆ.
ಇದನ್ನು ಓದಿ : ಕರ್ತವ್ಯ ಮರೆತು ‘ಫುಲ್ ಟೈಟ್ʼ ಆದ ಹೆಲ್ತ್ ಇನ್ಸ್ಪೆಕ್ಟರ್
ಗ್ಯಾಂಗ್ ರೇಪ್
ಬೆಂಗಳೂರಿನಲ್ಲಿ ಓದುತ್ತಿದ್ದ ಯುವತಿಯನ್ನು ವಿಕಾಸ್ ಪರಿಚಯಿಸಿಕೊಂಡಿದ್ದ ಮತ್ತು ಬಳಿಕ ಲೈಂಗಿಕ ಸಂಬಂಧ ಬೆಳೆಸಿದ್ದ. ಅದನ್ನು ವಿಡಿಯೋ ಮಾಡಿಕೊಂಡು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ನಂತರ ಪ್ರಶಾಂತ್ ಮತ್ತು ಚೇತನ್ ಜೊತೆ ಸೇರಿ ಯುವತಿಯನ್ನು Gang Rape ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೂವರು ಆರೋಪಿಗಳು ಸೆರೆ
ಇನ್ನು ಪೊಲೀಸರು ಮೂವರು ಆರೋಪಿಗಳನ್ನು ತಕ್ಷಣ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಇದನ್ನು ನೋಡಿ : ಅವರಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ – ಎಲ್ಲಾ ಬಿಚ್ಚಿಡಬೇಕಾ? – ಡಿಕೆಶಿ ಫುಲ್ ಗರಂ




