Bengaluru : ಉದ್ಯಮಿ ಅಡ್ಡಗಟ್ಟಿ ದರೋಡೆ ಮಾಡಿದ ಗ್ಯಾಂಗ್ ಬಂಧನ

ಉದ್ಯಮಿಯೊಬ್ಬರಿಂದ 1.05 ಕೋಟಿ ರೂ. ನಗದು ದರೋಡೆ ಮಾಡಿದ್ದ ಗ್ಯಾಂಗ್ನ ಐವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಅಡ್ಡಗಟ್ಟಿ ದರೋಡೆ ಮಾಡಿದ ಗ್ಯಾಂಗ್ ಬಂಧನ
ರಿಸರ್ಚ್ ಸೆಂಟರ್ ಹೆಸರಲ್ಲಿ ಉದ್ಯಮ ನಡೆಸುತ್ತಿದ್ದ ಉದ್ಯಮಿ ಕಾರಿನಲ್ಲಿ ಹಣ ಕೊಂಡೊಯ್ಯುತ್ತಿದ್ದ ವೇಳೆ, ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ದರೋಡೆ ಮಾಡಿ ಪರಾರಿಯಾಗಿದ್ರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಪೊಲೀಸರು ತನಿಖೆ ನಡೆಸಿದಾಗ, ಉದ್ಯಮಿಯ ಕಾರು ಚಾಲಕ ಚೇತನ್ನೇ ದರೋಡೆಗೆ ಸಂಚು ರೂಪಿಸಿರೋದು ಬೆಳಕಿಗೆ ಬಂದಿದೆ.
ಇದನ್ನು ಓದಿ : ಜಿಂಕೆ ಕೊಂಬು ಮಾರಾಟ ಮಾಡಲು ಯತ್ನ – ಆರೋಪಿಗಳು ಅರೆಸ್ಟ್!

Bengaluru – ಐವರು ಆರೋಪಿಗಳು ಅರೆಸ್ಟ್!
ಆತ ಹಣ ಸಾಗಾಟದ ಮಾಹಿತಿಯನ್ನು ಆರೋಪಿಗಳಿಗೆ ನೀಡಿ ದರೋಡೆಗೆ ಸಹಕರಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಈ ಸಂಬಂಧ ಸೂರ್ಯ, ಸೋಮಶೇಖರ್, ಕಾರು ಚಾಲಕ ಚೇತನ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ 85 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಸದ್ಯ ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಇದನ್ನು ನೋಡಿ : SUSPEND ಆಗಿದ್ರು ಕಚೇರಿಗೆ ಬಂದು PDO ಕೆಲಸ – ಕಚೇರಿಯಲ್ಲಿ ದಾಖಲೆ ನಾಶ ಮಾಡಲು ಮುಂದಾದ್ರಾ?




