ರಾಯಚೂರು ಜಿಲ್ಲೆಯ Devadurga ದಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಯಚೂರು ಜಿಲ್ಲೆಯ Devadurga ಪಟ್ಟಣದಲ್ಲಿ ಸಂಭವಿಸಿದ ಕಟ್ಟಡ ಮೇಲ್ಛಾವಣಿ ಕುಸಿತ ಪ್ರಕರಣದಲ್ಲಿ ಮೂವರು ಯುವಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಕಟ್ಟಡದ ಮಾಲೀಕ ಸಾದತ್ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆಯ ಕಟ್ಟಡವನ್ನು ಡೆಮಾಲಿಷ್ ಮಾಡದೇ ಬಳಸಿದ್ದೇ ದುರಂತಕ್ಕೆ ಕಾರಣ ಎನ್ನುವ ಆರೋಪದ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ದೇವದುರ್ಗ ಬಸ್ ನಿಲ್ದಾಣದ ಸಮೀಪದ ವಾಣಿಜ್ಯ ಕಟ್ಟಡದ ಬಳಿ ಕೆಲವು ಯುವಕರು ಕಿರುಚಿತ್ರದ ಪೋಸ್ಟರ್ ಅಂಟಿಸುತ್ತಿದ್ದರು. ಇದೇ ವೇಳೆ ಕಟ್ಟಡದ ಮೇಲ್ಛಾವಣಿ ಏಕಾಏಕಿ ಕುಸಿದು ಅವರ ಮೇಲೆ ಬಿದ್ದ ಪರಿಣಾಮ ಭೀಕರ ದುರಂತ ಸಂಭವಿಸಿತು.
MUST READ : ರಾಜ್ಯದ ವಿದ್ಯಾರ್ಥಿಗಳಿಗೆ Bus Pass ಶುಲ್ಕ ಮರುಪಾವತಿ – ಇಲ್ಲಿದೆ ಸಂಪೂರ್ಣ ಮಾಹಿತಿ

ಮೂವರು ಯುವಕರ ದುರ್ಮರಣ
ಅಪಘಾತದಲ್ಲಿ ನಾಗರಾಜ್ ಮತ್ತು ರವಿಕುಮಾರ್ ಸ್ಥಳದಲ್ಲೇ ಮೃತಪಟ್ಟರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್ ಅವರನ್ನು ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಉಮೇಶ್, ಪ್ರಭು ಮತ್ತು ಅಭಿಷೇಕ್ ಅವರಿಗೆ ರಾಯಚೂರಿನ ಓಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.
ಪರಿಹಾರಕ್ಕೆ ಕುಟುಂಬಗಳ ಒತ್ತಾಯ
ಮೃತರ ಕುಟುಂಬಸ್ಥರು ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಜೊತೆಗೆ, ನಿರ್ಲಕ್ಷ್ಯದಿಂದ ಹಳೆಯ ಕಟ್ಟಡವನ್ನು ಬಳಸಿದ್ದ ಕಟ್ಟಡ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡ ಕುಸಿತಕ್ಕೆ ಕಾರಣವಾದ ನಿರ್ಲಕ್ಷ್ಯದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
MUST WATCH : DUDHAKAR ON PRADEEP ESHWAR | ವೇದಿಕೆಲಿ ಬೆಕ್ಕಿನಂತೆ ಇದ್ದು ಹೊರಗಡೆ ಬಂದು ಪೌರುಷ ತೋರಿಸಿದ್ರೆ ಜನ ಸುಮ್ನಿರ್ತಾರಾ.

