spandana Kavya Bigg boss Kannada 12 - 1
BBK S12 : Bigg Boss Kannada 12 ಮನೆಯಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಟ್ವಿಸ್ಟ್ ಭಾರೀ ಚರ್ಚೆಗೆ ಕಾರಣವಾಗಿದೆ. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಎವಿಕ್ಟ್ ಆಗಿದ್ದಾರೆ ಎಂದು ಮನೆಮಂದಿ ಭಾವಿಸಿದ್ದರೂ, ಅಸಲಿ ಕಥೆ ಬೇರೆದೇ ಆಗಿದೆ.

BBK S12 : ಧ್ರುವಂತ್–ರಕ್ಷಿತಾ ಔಟ್ ಅಲ್ಲ, ಸೀಕ್ರೆಟ್ ರೂಮ್ನಲ್ಲಿ!
ವೋಟಿಂಗ್ ಲೈನ್ಸ್ ಓಪನ್ ಆಗಿರದ ಕಾರಣವೇ ವೀಕ್ಷಕರು ಮೊದಲೇ ಅನುಮಾನ ವ್ಯಕ್ತಪಡಿಸಿದ್ದರು.
ನಿರೀಕ್ಷೆಯಂತೆ, ಧ್ರುವಂತ್ ಮತ್ತು ರಕ್ಷಿತಾ ಸದ್ಯ ಸೀಕ್ರೆಟ್ ರೂಮ್ನಲ್ಲಿ ಇದ್ದು, ಮನೆಮಂದಿ ತಮ್ಮ ಬಗ್ಗೆ ಏನು ಮಾತನಾಡುತ್ತಿದ್ದಾರೆ ಎಂಬುದನ್ನು ನೇರವಾಗಿ ವೀಕ್ಷಿಸುತ್ತಿದ್ದಾರೆ.
ರಕ್ಷಿತಾ ಹೊರಹೋಗುತ್ತಿದ್ದಂತೆ ಸ್ಪಂದನಾ–ಕಾವ್ಯ ಖುಷಿ
ರಕ್ಷಿತಾ ಮನೆಯಿಂದ ಹೊರಬಂದಂತೆಯೇ ಸ್ಪಂದನಾ ಮತ್ತು ಕಾವ್ಯ ಸಂತೋಷ ವ್ಯಕ್ತಪಡಿಸಿದ್ದು ಮನೆ ಒಳಗೆ ಚರ್ಚೆಗೆ ಕಾರಣವಾಯಿತು.
ಕಾವ್ಯ, “ಧ್ರುವಂತ್ ಔಟ್ ಆಗಿದ್ದು ಸರ್ಪ್ರೈಸ್ ಅಲ್ಲ” ಎಂದರೆ, ಅಶ್ವಿನಿ ಟಾಸ್ಕ್ ಆಡಿಲ್ಲ ಎಂಬ ಅಸಮಾಧಾನವನ್ನೂ ಹೊರಹಾಕಿದರು.
ಮಾಳು, ಗಿಲ್ಲಿ, ರಘು, ರಜತ್ ಬೇಸರ
ಇನ್ನೊಂದೆಡೆ, ಮಾಳು, ಗಿಲ್ಲಿ, ರಘು ಮತ್ತು ರಜತ್ ಭಾವುಕರಾದರು.ಗಿಲ್ಲಿ, “ನಾನು ಯಾರಿಗೂ ಅತ್ತವನಲ್ಲ, ಆದರೆ ರಕ್ಷಿತಾ ಹೋಗಿದ್ದು ತುಂಬಾ ಬೇಸರ” ಎಂದರು.
ರಘು ರಕ್ಷಿತಾಗೆ ನೆನಪಿಗಾಗಿ ತಮ್ಮ ಆಭರಣವನ್ನೇ ಕೊಟ್ಟರೆ, ರಜತ್ “ಈ ಸೀಸನ್ನಲ್ಲಿ ರಕ್ಷಿತಾ ನನಗೆ ತುಂಬಾ ಹತ್ತಿರ” ಎಂದು ಕಣ್ಣೀರಿಟ್ಟರು.
ನಾಮಿನೇಶನ್ನಿಂದ ಸೀಕ್ರೆಟ್ ರೂಮ್ ತನಕ
ಈ ವಾರ ಅಶ್ವಿನಿ, ಗಿಲ್ಲಿ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ ಸೇರಿದಂತೆ ಹಲವರು ನಾಮಿನೇಟ್ ಆಗಿದ್ದರು.
ಕೊನೆಯಲ್ಲಿ ರಜತ್ ಸೇಫ್, ಧ್ರುವಂತ್ ಮತ್ತು ರಕ್ಷಿತಾ ಎವಿಕ್ಟ್ ಎಂದು ಘೋಷಣೆ ಆಯಿತು. ಆದರೆ ಈಗ ಇಬ್ಬರೂ ಸೀಕ್ರೆಟ್ ರೂಮ್ನಲ್ಲಿ ಇದ್ದಾರೆ.
ಇದನ್ನು ಓದಿ : Dina Bhavishya|ದಿನ ಭವಿಷ್ಯ 15 ಡಿಸೆಂಬರ್ 2025
ಧ್ರುವಂತ್ ಕಾಟಕ್ಕೆ ರಕ್ಷಿತಾ ಫುಲ್ ಟೆನ್ಷನ್
ಸೀಕ್ರೆಟ್ ರೂಮ್ನಲ್ಲಿ ಧ್ರುವಂತ್ ನೀಡುತ್ತಿರುವ ವ್ಯಂಗ್ಯ ಮಾತುಗಳಿಂದ ರಕ್ಷಿತಾ ತೀವ್ರ ಟೆನ್ಷನ್ನಲ್ಲಿದ್ದಾರೆ.“ನಿನ್ನಂಥವರನ್ನೇ ನೋಡಿಕೊಂಡು ಬಂದಿದ್ದೇನೆ” ಎಂಬ ಧ್ರುವಂತ್ ಮಾತಿಗೆ, “ಅಯ್ಯೋ ದೇವರೇ, ಒಂದೇ ರೂಮಲ್ಲಿ ಹೇಗೆ ಇರೋದು?” ಎಂದು ರಕ್ಷಿತಾ ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಮಂದಿ ಮಾತುಗಳು ನೇರವಾಗಿ ಕೇಳಿಸಿಕೊಂಡವು
ಮನೆಮಂದಿ ಇಬ್ಬರೂ ಔಟ್ ಆಗಿದ್ದಾರೆ ಎಂದು ಭಾವಿಸಿ ಹಿಂದೆ ಮಾತನಾಡಿದ ಎಲ್ಲಾ ಮಾತುಗಳು ಈಗ ಧ್ರುವಂತ್–ರಕ್ಷಿತಾ ಮುಂದೆ ವಿಡಿಯೋ ರೂಪದಲ್ಲಿ ಪ್ಲೇ ಆಗಿವೆ.ಚೈತ್ರಾ, “ರಕ್ಷಿತಾ ತುಂಬಾ ಕನ್ಫ್ಯೂಸ್ ಆಗಿರ್ತಾ ಇದ್ಲು” ಎಂದು ರಾಶಿಕಾಳ ಬಳಿ ಹೇಳಿದ್ದು ಕೂಡ ಸೀಕ್ರೆಟ್ ರೂಮ್ನಲ್ಲಿ ಕೇಳಿಸಿದೆ.
ಒಟ್ಟಿನಲ್ಲಿ…
Bigg Boss Kannada 12 Secret Room Twist ಆಟಕ್ಕೆ ಹೊಸ ತಿರುವು ನೀಡಿದೆ. ಮನೆಮಂದಿ ನಿಜವಾದ ಭಾವನೆಗಳು ಬಹಿರಂಗವಾಗಿದ್ದು, ಧ್ರುವಂತ್–ರಕ್ಷಿತಾ ಮತ್ತೆ ಮನೆಗೆ ಯಾವಾಗ, ಹೇಗೆ ಎಂಟ್ರಿ ಕೊಡ್ತಾರೆ ಎಂಬುದೇ ಈಗ ದೊಡ್ಡ ಕುತೂಹಲ.
ಇದನ್ನು ನೋಡಿ : ಗಂಡನಿಗೆ ಹೆಂಡ್ತಿ ಮೇಲೆ ಸಿಕ್ಕಾಪಟ್ಟೆ ಅನುಮಾನ? -ಮಟ ಮಟ ಮಧ್ಯಾಹ್ನವೇ ನಡೆಯಿತು ದುರಂತ




