Dina Bhavishya : 2025 ಡಿಸೆಂಬರ್ 15ರ ಸೋಮವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ

Dina Bhavishya :
ಮೇಷ ರಾಶಿ
ಇಂದು ಅತ್ಯಂತ ಶುಭದಿನ. ಸಾಮಾಜಿಕ ಸ್ಥಾನಮಾನ ಹಾಗೂ ಪ್ರತಿಷ್ಠೆ ಹೆಚ್ಚುತ್ತದೆ. ಕೆಲಸದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ, ಆದರೆ ಕೆಲಸದ ನಿಮಿತ್ತ ಅಚಾನಕ್ ಪ್ರಯಾಣ ಸಾಧ್ಯ. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.
ಸ್ನೇಹಿತರ ಸಹಾಯದಿಂದ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಉದ್ಯೋಗಾರ್ಥಿಗಳಿಗೆ ಶುಭ ಸುದ್ದಿ ಲಭಿಸುತ್ತದೆ. ಕೌಟುಂಬಿಕ ಜೀವನ ಸಂತೋಷಕರವಾಗಿರುತ್ತದೆ. ಹತ್ತಿರದಲ್ಲಿ ಕೆಂಪು ವಸ್ತು ಇಟ್ಟು ಪ್ರತಿದಿನ ಸೂರ್ಯನಿಗೆ ಅಘ್ರ್ಯ ಅರ್ಪಿಸಿ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಇಂದು ಯಶಸ್ಸಿಗೆ ಹೆಚ್ಚು ಶ್ರಮ ಅಗತ್ಯ. ಕೆಲಸದ ಜವಾಬ್ದಾರಿಗಳು ಹೆಚ್ಚಾದರೂ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬದ ಸಮಸ್ಯೆಗಳನ್ನು ಸಂವಾದದ ಮೂಲಕ ಪರಿಹರಿಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು, ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ.
ಆರೋಗ್ಯ ಉತ್ತಮವಾಗಿರುತ್ತದೆ. ಪ್ರೀತಿ, ಮಕ್ಕಳು ಮತ್ತು ವ್ಯವಹಾರದಲ್ಲಿ ಸಮತೋಲನ ಇರುತ್ತದೆ. ದಿನದ ಆರಂಭದಲ್ಲಿ ಲಾಭದ ಸೂಚನೆ, ಕುಟುಂಬದಿಂದ ಶುಭ ಸುದ್ದಿ ಸಿಗಬಹುದು. ಮನೆಯಲ್ಲಿ ಉದ್ವಿಗ್ನತೆ ಸಾಧ್ಯವಾದ್ದರಿಂದ ಸಂಗಾತಿಯೊಂದಿಗೆ ವಾದ ತಪ್ಪಿಸಿ. ಹಳದಿ ವಸ್ತು ದಾನ ಶುಭ.
ಮಿಥುನ ರಾಶಿ
ಇಂದು ಮಿಶ್ರ ಫಲಿತಾಂಶಗಳು ಎದುರಾಗಬಹುದು. ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳು, ಕಚೇರಿಯಲ್ಲಿ ಜವಾಬ್ದಾರಿಗಳ ಹೆಚ್ಚಳ ಸಾಧ್ಯ. ವ್ಯಾಪಾರದಲ್ಲಿ ಹಣಕಾಸಿನ ನಷ್ಟದ ಭೀತಿ ಇರುವುದರಿಂದ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಿ. ಇಂದು ಸಾಲ ನೀಡುವುದನ್ನು ತಪ್ಪಿಸುವುದು ಉತ್ತಮ. ಸಂಕಟ ನಿವಾರಣೆಗೆ ಪ್ರತಿದಿನ ಸಂಕಟನಾಶಕ ಗಣೇಶ ಸ್ತೋತ್ರ ಪಠಿಸಿ.
ಕಟಕ ರಾಶಿ
ಇಂದು ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಿ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಸಂಭವಿಸಬಹುದು. ವೃತ್ತಿಪರ ಜೀವನದ ಹೊಸ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ. ಕೆಲಸದ ನಿಮಿತ್ತ ಪ್ರಯಾಣ ಸಾಧ್ಯ.
ಅಪರಿಚಿತರಿಗೆ ಸಾಲ ನೀಡುವುದನ್ನು ತಪ್ಪಿಸಿ. ಕುಟುಂಬದೊಂದಿಗೆ ಸಮಯ ಕಳೆಯಿರಿ, ನಕಾರಾತ್ಮಕತೆಯಿಂದ ದೂರವಿದ್ದು ಆರೋಗ್ಯದ ಕಡೆ ಗಮನ ನೀಡಿ. ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಶುಭ.
ಸಿಂಹ ರಾಶಿ
ಇಂದು ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ, ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆಗಳು ದೂರವಾಗುತ್ತವೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಸಿಗುತ್ತವೆ. ಕಾನೂನು ವಿಷಯಗಳಲ್ಲಿ ಜಯ, ಹಳೆಯ ಹೂಡಿಕೆಗಳಿಂದ ಲಾಭ ಸಾಧ್ಯ.
ಹೊಸ ಆಸ್ತಿ ಅಥವಾ ವಾಹನ ಖರೀದಿಗೆ ಯೋಜನೆ ಮಾಡಬಹುದು. ಕುಟುಂಬದ ಹಣಕಾಸು ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಿ. ಶ್ರೀ ಗಣೇಶ ಚಾಲೀಸಾ ಪಠಿಸುವುದು ಶುಭ.
ಕನ್ಯಾ ರಾಶಿ
ಇಂದು ನಿಮಗೆ ಶುಭ ದಿನವಾಗಿರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬಹುದು. ನಿಮ್ಮ ವೃತ್ತಿಯಲ್ಲಿ ಹೊಸ ಸಾಧನೆಗಳನ್ನು ಮಾಡುವಿರಿ. ಉದ್ಯೋಗದಲ್ಲಿ ಜನರು ನಿಮ್ಮ ಕೆಲಸವನ್ನು ಹೊಗಳುತ್ತಾರೆ.
ನೀವು ಕೆಲಸದ ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಬಹುದು.
ಇಂದು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಕೊಡಿ. ಇಂದು, ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದ ಕೆಲಸದ ಅಡೆತಡೆಗಳು ನಿವಾರಣೆಯಾಗುತ್ತವೆ. ಇಂದು ಹಸುಗಳಿಗೆ ಬೆಲ್ಲವನ್ನು ತಿನ್ನಿಸಿ.
ತುಲಾ ರಾಶಿ
ಇಂದು ಜೀವನದಲ್ಲಿ ಕೆಲವು ಸವಾಲುಗಳು ಎದುರಾದರೂ ವ್ಯವಹಾರದಲ್ಲಿ ಬೆಳವಣಿಗೆಗೆ ಹೊಸ ಅವಕಾಶಗಳು ಕಾಣಿಸುತ್ತವೆ. ಹೊಸ ಹೂಡಿಕೆ ಆಯ್ಕೆಗಳ ಮೇಲೆ ಗಮನ ಇರಲಿ.
ಅಜ್ಞಾತ ಭಯದಿಂದ ಮನಸ್ಸು ಅಶಾಂತವಾಗಬಹುದು, ಆದ್ದರಿಂದ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸಿ. ಕೆಲಸದ ಒತ್ತಡವನ್ನು ಹೆಚ್ಚಾಗಿ ತೆಗೆದುಕೊಳ್ಳದೆ, ವ್ಯವಹಾರ ನಿರ್ಧಾರಗಳಿಗೆ ತಜ್ಞರ ಸಲಹೆ ಪಡೆಯುವುದು ಉತ್ತಮ.
ವೃಶ್ಚಿಕ ರಾಶಿ
ಇಂದು ಕೆಲಸದ ಸ್ಥಳದ ರಾಜಕೀಯದಿಂದ ದೂರವಿದ್ದು ನಿಮ್ಮ ಕಾರ್ಯಕ್ಷಮತೆಯ ಮೇಲೆ ಗಮನ ಹರಿಸಿ.
ಮಕ್ಕಳಿಂದ ಶುಭ ಸುದ್ದಿ ಸಿಗಬಹುದು. ಹೊಸ ಆದಾಯ ಮೂಲಗಳು ರೂಪುಗೊಂಡು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಿ.
ಕೆಲಸದ ಒತ್ತಡ ಹೆಚ್ಚಿಸಿಕೊಳ್ಳದೆ, ಹೊಸ ಯೋಜನೆಯ ಜವಾಬ್ದಾರಿಯನ್ನು ಸ್ವೀಕರಿಸಲು ಹಿಂಜರಿಯಬೇಡಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವುದರಿಂದ ಮನಸ್ಸು ಸಂತೋಷವಾಗಿರುತ್ತದೆ.
ಧನು ರಾಶಿ
ಇಂದು ವೃತ್ತಿಪರ ಜೀವನದಲ್ಲಿ ಒತ್ತಡ ಸ್ವಲ್ಪ ಹೆಚ್ಚಾಗಬಹುದು. ಕೆಲಸದ ಮೇಲೆ ಕೇಂದ್ರೀಕರಿಸಿ, ಆಫೀಸ್ ಗಾಸಿಪ್ಗಳಿಂದ ದೂರವಿರಿ. ಹೊಸ ಯೋಜನೆ ಆರಂಭಿಸಲು ಹಿಂಜರಿಯಬೇಡಿ, ಆದರೆ ಯೋಚಿಸದೆ ನಿರ್ಧಾರ ಕೈಗೊಳ್ಳಬೇಡಿ.
ಸಂವಾದದ ಮೂಲಕ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಕೆಲಸದಲ್ಲಿ ಕೆಲ ಅಡಚಣೆಗಳು ಬಂದರೂ ತಾಳ್ಮೆಯಿಂದ ಶ್ರಮಿಸಿದರೆ ಖಂಡಿತ ಯಶಸ್ಸು ಸಿಗುತ್ತದೆ. ಇಂದು ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಶುಭ.
ಮಕರ ರಾಶಿ
ಇಂದು ಜೀವನದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಬಹುದು. ಸಾಮಾಜಿಕ ಸ್ಥಾನಮಾನ ಹಾಗೂ ಪ್ರತಿಷ್ಠೆ ಹೆಚ್ಚಾಗುತ್ತದೆ. ಹಠಾತ್ ಪ್ರವಾಸ ಸಾಧ್ಯ. ಬಾಕಿ ಹಣ ವಾಪಸ್ ದೊರೆತು ಹಣಕಾಸು ವಿವಾದಗಳಿಂದ ಪರಿಹಾರ ಸಿಗುತ್ತದೆ.
ಕೆಲಸ ಹಾಗೂ ವ್ಯವಹಾರದಲ್ಲಿ ಉತ್ತಮ ಯಶಸ್ಸು ಕಾಣುತ್ತೀರಿ. ಕೆಲವರು ಆಪ್ತ ಸ್ನೇಹಿತರಿಗೆ ಆರ್ಥಿಕ ಸಹಾಯ ಮಾಡಬಹುದು. ಉದ್ಯೋಗಾರ್ಥಿಗಳಿಗೆ ಶುಭ ಸುದ್ದಿ ಲಭಿಸುತ್ತದೆ.
ಕುಂಭ ರಾಶಿ
ಇಂದು ಜೀವನದಲ್ಲಿ ಏರಿಳಿತಗಳು ಕಂಡುಬಬಹುದು. ಮನಸ್ಸಿನಲ್ಲಿ ಭರವಸೆ–ಹತಾಶೆ ಹಾಗೂ ಅಜ್ಞಾತ ಭಯ ಉಂಟಾಗುವ ಸಾಧ್ಯತೆ ಇರುವುದರಿಂದ ಹಣದ ವ್ಯವಹಾರಗಳನ್ನು ತಪ್ಪಿಸಿ. ಸಂಬಂಧಗಳಲ್ಲಿ ಅಂತರ ಹೆಚ್ಚಾಗಬಹುದಾದ್ದರಿಂದ ಸಂಗಾತಿಯೊಂದಿಗೆ ಅನಗತ್ಯ ವಾದ ತಪ್ಪಿಸಿ.
ಮನೆಯಲ್ಲಿ ಶುಭ ಕಾರ್ಯಗಳ ಯೋಜನೆ ಸಾಧ್ಯ. ಉದ್ಯೋಗದಲ್ಲಿ ಹೊಸ ಯೋಜನೆಯ ಜವಾಬ್ದಾರಿಯನ್ನು ಸ್ವೀಕರಿಸಿ, ಆದರೆ ದಿನಚರಿಯಿಂದ ಸ್ವಲ್ಪ ವಿರಾಮ ಪಡೆದು ಸ್ವಯಂ ಆರೈಕೆಗೆ ಗಮನ ಕೊಡಿ. ಹಳದಿ ವಸ್ತುಗಳನ್ನು ವಿಷ್ಣು ದೇವಸ್ಥಾನಕ್ಕೆ ಅರ್ಪಿಸುವುದು ಶುಭ.
ಮೀನ ರಾಶಿ
ಇಂದು ಕೆಲಸದ ನಿಮಿತ್ತ ವಿದೇಶ ಪ್ರಯಾಣ ಸಾಧ್ಯ. ಕುಟುಂಬ ಜೀವನ ಸಂತೋಷಕರವಾಗಿರುತ್ತದೆ, ಆದರೆ ಸಂಗಾತಿಯೊಂದಿಗೆ ವಿವಾದ ತಪ್ಪಿಸಿ ಹಾಗೂ ಗುಣಮಟ್ಟದ ಸಮಯ ಕಳೆಯಿರಿ. ಹಣಕಾಸು ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ;
ಹೂಡಿಕೆ ವಿಚಾರದಲ್ಲಿ ತಜ್ಞರ ಸಲಹೆ ಅಗತ್ಯ. ವೃತ್ತಿಜೀವನದಲ್ಲಿ ಸಣ್ಣ ಸಮಸ್ಯೆಗಳಿದ್ದರೂ ಕೆಲಸಗಳು ಯಶಸ್ವಿಯಾಗುತ್ತವೆ. ಕೆಲವರಿಗೆ ವೈದ್ಯಕೀಯ ತುರ್ತು ಕಾರಣದಿಂದ ಖರ್ಚು ಸಾಧ್ಯ




