BBK : ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshitha Shetty) ಅವರು ಬಿಗ್ ಬಾಸ್ ಮನೆಯಲ್ಲಿ ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಯೂಟ್ಯೂಬರ್ ರಕ್ಷಿತಾ ಶೆಟ್ಟಿ (Rakshitha Shetty) ತಮ್ಮ ಆಟದ ಮೂಲಕ ಮಾತ್ರವಲ್ಲ, ಮಾನವೀಯ ನಡೆ–ನಡವಳಿಕೆಯಿಂದಲೂ ಪ್ರೇಕ್ಷಕರ ಮನಸೆಳೆದಿದ್ದಾರೆ.
ಆರಂಭದಿಂದಲೂ ರಕ್ಷಿತಾ ವಿರುದ್ಧವಾಗಿ ವರ್ತಿಸಿದ್ದ ಅಶ್ವಿನಿ ಗೌಡ (Ashwini Gowda) ಅವರ ಎದುರಲ್ಲೇ ಈ ವಾರ ಕಿಚ್ಚ ಸುದೀಪ್ ಅವರು ರಕ್ಷಿತಾಗೆ ‘ಕಿಚ್ಚನ ಚಪ್ಪಾಳೆ’ ನೀಡಿದ್ಧಾರೆ.
ಅಶ್ವಿನಿಯ ಟಾರ್ಗೆಟ್ ನಡುವೆ ರಕ್ಷಿತಾಳ ಸಾಫ್ಟ್ ಹೃದಯ
ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ಜಗಳಗಳು, ಒತ್ತಡ, ಆರೋಪ–ಪ್ರತ್ಯಾರೋಪಗಳು ನಡೆದಿದ್ದರೂ, ರಕ್ಷಿತಾ ಶೆಟ್ಟಿ ತಮ್ಮ ಶಾಂತತೆಗೆ ಹೆಸರಾದರು. ಅಶ್ವಿನಿ ಗೌಡ ಅವರು ಹಲವಾರು ಬಾರಿ ರಕ್ಷಿತಾವನ್ನು ಟಾರ್ಗೆಟ್ ಮಾಡಿದರೂ, ಅಶ್ವಿನಿ ಉಪವಾಸ ಮಾಡಿದಾಗ ರಕ್ಷಿತಾ ತೋರಿಸಿದ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಇದನ್ನು ಓದಿ : Gold Price Today : ಇಂದು ಚಿನ್ನ, ಬೆಳ್ಳಿ ಬೆಲೆ ಏರಿಕೆ

ಸುದೀಪ್ ಅವರ ಮೆಚ್ಚುಗೆಯ ಮಾತುಗಳು
ವೀಕೆಂಡ್ ಸಂಚಿಕೆಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ರಕ್ಷಿತಾಳ ಆಟವನ್ನು ಹೊಗಳಿದ್ದು, ‘ಹೋದವಾರ ನಾನು ಕೆಲವರಿಗೆ ಬೈಯ್ದಿದ್ದೆ. ಅದಕ್ಕಿಂತಲೂ ಹೆಚ್ಚಾಗಿ ಅವರು ಹೋಗುತ್ತಿರುವ ಹಾದಿಯಲ್ಲಿ ಅವರೇ ಅವರಿಗೆ ಮುಳುವಾಗುತ್ತಿದ್ದಾರೆ ಎಂಬುದು ನಮಗೆ ಗೊತ್ತಾದಾಗ ನಾವು ಕ್ಲಾಸ್ ತೆಗೆದುಕೊಳ್ಳುವುದು ಯಾಕೆ ಎಂದರೆ, ತುಂಬ ಚೆನ್ನಾಗಿ ಆಡುತ್ತಿದ್ದೀರಿ.. ಹಾಳಾಗಬೇಡಿ ಅನ್ನೋದಕ್ಕೆ.
ತಕ್ಷಣ ಆಟ ಬದಲಾಯಿಸಿಕೊಂಡು, ತಮ್ಮ ಹಿಂದಿನ ವ್ಯಕ್ತಿತ್ವಕ್ಕೆ ಹೋಗಿ, ತುಂಬಾ ಚೆನ್ನಾಗಿ ಆಟ ಆಡಿ, ತಿದ್ದಿಕೊಂಡು, ಮಾನವೀಯತೆ ತೋರಿಸಿ, ಬೈಯಿಸಿಕೊಂಡವರಿಂದಲೇ ಉತ್ತಮ ಅನಿಸಿಕೊಂಡ ರಕ್ಷಿತಾ ಅವರೇ ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ’ ಎಂದು ಸುದೀಪ್ ಹೇಳಿದರು.
ರಕ್ಷಿತಾ ಶೆಟ್ಟಿಯನ್ನು ಹೊಗಳಿದ ಸುದೀಪ್
‘ನಿಮಗೂ ಅಶ್ವಿನಿ ಅವರಿಗೂ ಎಷ್ಟೇ ಕಿತ್ತಾಟ ಆಗಿದ್ದರೂ ಕೂಡ ಅವರು ಉಪವಾಸ ಮಾಡಿದಾಗ ನೀವು ತೋರಿಸಿದ ಕಾಳಜಿ ಒಳ್ಳೆಯದು. ಅಶ್ವಿನಿ ಗೌಡ ಸಲುವಾಗಿ ನೀವು ಇಷ್ಟೆಲ್ಲ ಮಾಡಿದರೂ ಕೂಡ ಅದನ್ನು ಅಶ್ವಿನಿ ಎದುರು ಹೋಗಿ ನೀವು ಹೇಳಿಕೊಳ್ಳಲಿಲ್ಲ’ ಎಂದು ರಕ್ಷಿತಾ ಶೆಟ್ಟಿ ಅವರನ್ನು ಸುದೀಪ್ ಹೊಗಳಿದರು.
ಇನ್ನು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಈವರೆಗೂ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ರಘು, ಧನುಷ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ಇದನ್ನು ನೋಡಿ : ಶಿರಾದಲ್ಲಿ ಸರ್ಕಾರಿ ಆಸ್ಪತ್ರೆ ಎಡವಟ್ಟು..! ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ..!?




