Bengaluru : ತೀವ್ರ ಸಾಲದ ಸುಳಿಗೆ ಸಿಲುಕಿದ್ದ ಒಂದೇ ಕುಟುಂಬದ ಮೂವರು ಸದಸ್ಯರು ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ನಡೆದಿದೆ.

Bengaluru : ಬಾಡಿಗೆ ಮನೆಯಲ್ಲಿ ವಿಷ ಸೇವಿಸಿ ಮಗು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೋರಮಂಗಲ ಸಮೀಪದ ತಾವರೆಕೆರೆ 2ನೇ ಕ್ರಾಸ್ನಲ್ಲಿ ನಡೆದಿದೆ.
ತಾಯಿ ಸುಧಾ (38) ಅಜ್ಜಿ ಮುದ್ದಮ್ಮ (68) ಮತ್ತು 14 ವರ್ಷದ ಮಗ ಮೋನಿಷ್ ಮೃತರು. ಇನ್ನು ಮೂವರು ಮನೆಯೊಳಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕುಟುಂಬವು ಕಳೆದ ಕೆಲ ತಿಂಗಳುಗಳಿಂದ ಆರ್ಥಿಕ ಸಂಕಷ್ಟ ಮತ್ತು ಸಾಲದ ಹೊರಗೆ ತುತ್ತಾಗಿದ್ದರು.
ಪೊಲೀಸರಿಂದ ಶೋಧ
ಇಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಮೂವರು ವಿಷ ಸೇವಿಸಿದ್ದು, ನೆರೆಹೊರೆಯವರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿದು ಕೂಡಲೇ ಘಟನಾ ಸ್ಥಳಕ್ಕೆ ಬಂದ ಎಸ್ ಜಿ ಪಾಳ್ಯ ಪೊಲೀಸ್ ತಂಡ, ಡಿಸಿಪಿ ಸಾರಾ ಫಾತೀಮಾ ಮತ್ತು ಎಫ್ಎಸ್ಎಲ್ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಪತಿಯೊಂದಿಗೆ ಗಲಾಟೆ ಹಿನ್ನೆಲೆ ಮನನೊಂದು ಗೃಹಿಣಿ Suicide!
ವ್ಯವಹಾರದಲ್ಲಿ ನಷ್ಟ, ಸಾಲದ ಹೊರೆ
ಈ ವೇಳೆ ಮನೆಯೊಳಗೆ ವಿಷದ ಬಾಟಲಿ ಪತ್ತೆಯಾಗಿದ್ದು, ದೇಹಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಮೂಲತಃ ತಾಯಿ ಮಗಳು ಇಬ್ಬರು ಬಿರಿಯಾನಿ, ಚಿಪ್ಸ್, ಹಾಲು ವ್ಯಾಪಾರದಲ್ಲಿ ತೊಡಗಿಕೊಂಡಿದ್ರೂ, ಆದರೆ ನಷ್ಟ ಮತ್ತು ಅತಿಯಾದ ಸಾಲದಿಂದ ಇವರಿಗೆ ಮಾನಸಿಕ ಒತ್ತಡ ಹೆಚ್ಚಾಗಿತ್ತು, ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ ಎನ್ನಲಾಗ್ತಿದೆ.
ಡೆತ್ ನೋಟ್ಗಾಗಿ ಶೋಧ
ಇನ್ನು ಮೊದಲು ಮಗ ಮೋನಿಷ್ ಗೆ ವಿಷ ನೀಡಿದ ಬಳಿಕ ತಾಯಿ ಅಜ್ಜಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆತ್ಮಹತ್ಯೆ ಬಗ್ಗೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ, ಹೀಗಾಗಿ ಪೊಲೀಸರು ಎಲ್ಲಾ ಆಯಾಮಾಗಳಿಂದಲೂ ತನಿಖೆ ಮುಂದುವರಿಸಿದ್ದಾರೆ. ಡಿಸಿಪಿ ಸಾರಾ ಫಾತೀಮಾ ಮರಣೋತ್ತರ ವರದಿ ಬಂದ ಬಳಿಕ ಸಾವಿನ ಕಾರಣ ಸ್ಪಷ್ಟವಾಗುವುದಾಗಿ ತಿಳಿಸಿದ್ದಾರೆ.
MUST WATCH: ಅತ್ತೆ ಮಗಳನ್ನೇ ಕೊಲೆಗೈದ ಮಾವ – ಹಂತಕನ ಬಂಧಿಸಿದ್ದೇ ರಣರೋಚಕ




