IPL ಗೂ ಮುನ್ನ ಆರ್ಸಿಬಿ ಫ್ಯಾನ್ಸ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗುಡ್ನ್ಯೂಸ್ ನೀಡಿದ್ದಾರೆ.

2025ರ IPL ಚಾಂಪಿಯನ್ ಆರ್ಸಿಬಿಗೆ ಈ ವರ್ಷ ತವರು ಮೈದಾನದಲ್ಲಿ ಆಡುವ ಭಾಗ್ಯ ಇಲ್ಲ ಎಂದು ಹೇಳಲಾಗಿತ್ತು. ಇದರಿಂದ ಫ್ಯಾನ್ಸ್ ಕೂಡ ಬೇಸರ ಹೊರಹಾಕಿದ್ದರು. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಫ್ಯಾನ್ಸ್ ನಿರಾಸೆ
ಸಾಮಾನ್ಯವಾಗಿ ಚಾಂಪಿಯನ್ ಆಗಿ ಹೊರಹೊಮ್ಮಿದ ಫ್ರಾಂಚೈಸಿಗಳ ತವರು ಕ್ರೀಡಾಂಗಣದಲ್ಲಿ ಮರು ವರ್ಷದ ಐಪಿಎಲ್ ಟೂರ್ನಿ ಉದ್ಘಾಟನೆ ನಡೆಯುತ್ತದೆ. ಹಾಗೆಯೇ 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಬೆಂಗಳೂರಿನಲ್ಲಿ ನಡೆಯಬೇಕು. ಆದ್ರೆ ಚಿನ್ನಸ್ವಾಮಿ ಕ್ರೀಡಾಂಗಣದಿಂದಲೇ ಟೂರ್ನಿ ಎತ್ತಂಗಡಿ ಮಾಡಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿತ್ತು. ಇದರಿಂದ ಫ್ಯಾನ್ಸ್ ಗೆ ನಿರಾಸೆಯಾಗಿತ್ತು.
ಇದನ್ನು ಓದಿ : ಖಾಸಗಿ ಬಸ್ ಉರುಳಿ ಬಿದ್ದು 30 ಮಂದಿಗೆ ಗಾಯ

RCB ಫ್ಯಾನ್ಸ್ಗೆ ಭರ್ಜರಿ ಗುಡ್ ನ್ಯೂಸ್
ಈ ಬಗ್ಗೆ DCM DK Shivakumar ಮಾತನಾಡಿ “ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದುಹೋಗಿರುವ ಅಂತರರಾಷ್ಟ್ರೀಯ ಪಂದ್ಯಗಳನ್ನು ನಾವು ವಾಪಸ್ ತರುತ್ತೇವೆ. ಬೆಂಗಳೂರು ಎಂದಿಗೂ ಕ್ರಿಕೆಟ್ ಹಬ್ ಆಗಿಯೇ ಉಳಿಯಬೇಕು. 2026ರ ಐಪಿಎಲ್ ಪಂದ್ಯಗಳು ಚಿನ್ನಸ್ವಾಮಿಯಲ್ಲೇ ನಡೆಯುತ್ತವೆ,” ಎಂದು ಭರವಸೆ ನೀಡಿದ್ದಾರೆ.
ಅಷ್ಟೇ ಅಲ್ಲದೇ,
- ಬೆಂಗಳೂರಿನ ಗೌರವಕ್ಕೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳಲಾಗುತ್ತದೆ,
- ಕಾನೂನು, ಸುರಕ್ಷತೆ, ಕ್ರೌಡ್ ಮ್ಯಾನೇಜ್ಮೆಂಟ್ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೇಡಿಯಂ ಬಳಕೆ,
- ಅಗತ್ಯವಿದ್ದರೆ ಪರ್ಯಾಯವಾಗಿ ದೊಡ್ಡ ಸ್ಟೇಡಿಯಂ ನಿರ್ಮಾಣ,
ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

RCB ನಮ್ಮ ಹೆಮ್ಮೆ
“ನಾನು ಕ್ರಿಕೆಟ್ ಲವರ್… RCB ನಮ್ಮ ಹೆಮ್ಮೆ. ಬೆಂಗಳೂರಿನಿಂದ ಐಪಿಎಲ್ ಶಿಫ್ಟ್ ಆಗೋದು ಎಂದಿಗೂ ಆಗದಂತೆ ನೋಡಿಕೊಳ್ಳುತ್ತೇವೆ,” ಎಂದು ಡಿಕೆಶಿ ಹೇಳಿದ್ದಾರೆ.
ಡಿಸಿಎಂ ಅವರ ಈ ಹೇಳಿಕೆ RCB ಅಭಿಮಾನಿಗಳಲ್ಲಿ ಹೊಸ ಆತ್ಮವಿಶ್ವಾಸ ಜಾಗೃತವಾಗಿದೆ. 2026ರ ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನೋಡಲು ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನು ನೋಡಿ : TUMAKURU | ದೇಹದ ನೋವಿಗೆ FULL STOP ಬೇಕಾ? – CERA CARE JADE STONE HEALTH BED ಟ್ರೈ ಮಾಡಿ!




