IPL 2026 : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ತವರಿನಲ್ಲಿ ಆಡದಿರುವ ಸಾಧ್ಯತೆ ಹೆಚ್ಚಾಗಿದೆ.

IPL 2026 : ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ಅನುಮಾನ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ತವರಿನಲ್ಲಿ ಆಡದಿರುವ ಸಾಧ್ಯತೆ ಹೆಚ್ಚಾಗಿದೆ.
ಈ ಬಾರಿ ಚಿನ್ನಸ್ವಾಮಿ ಸ್ಟೇಡಿಯಂ (M. Chinnaswamy Stadium) ಆತಿಥ್ಯ ವಹಿಸುವುದು ಅನುಮಾನವಾಗಿದ್ದು, RCB ತನ್ನ ಹೊಸ ತವರು ಮೈದಾನವನ್ನು ಘೋಷಿಸಲು ಸಜ್ಜಾಗಿದೆ.

ಪುಣೆ ಆಗಲಿದೆ RCB ಯ 2ನೇ ತವರು?
ಮುಂಬರುವ ಸೀಸನ್ಗೆ RCB ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಯೊಂದಿಗೆ ಮಾತುಕತೆ ನಡೆಸಿದ್ದು,
ಪುಣೆಯ MCA ಸ್ಟೇಡಿಯಂ ನವೀನ ತವರಾಗಿ ಆಯ್ಕೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
MCA ಕಾರ್ಯದರ್ಶಿ ಕಮಲೇಶ್ ಪಿಸಾಲ್ ಅವರು,“ಐಪಿಎಲ್ ಸಮಯದಲ್ಲಿ ನಮ್ಮ ಮೈದಾನ ಲಭ್ಯವಿದೆ. RCB ತಂಡವು ಇಲ್ಲಿ ತನ್ನ ಪಂದ್ಯಗಳನ್ನು ಆಯೋಜಿಸಲು ಚಿಂತನೆ ನಡೆಸಿದೆ. ಅಂತಿಮ ನಿರ್ಧಾರ ಶೀಘ್ರದಲ್ಲೇ ಪ್ರಕಟವಾಗಲಿದೆ,”
ಎಂದು ತಿಳಿಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂ ನಿಷೇಧದ ಹಿನ್ನೆಲೆ
ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ RCB ಅಭಿಮಾನಿಗಳು ಮೃತಪಟ್ಟಿದ್ದರು.
ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.
ತನಿಖೆಯ ವೇಳೆ ಮೈದಾನದಲ್ಲಿ ಹಲವು ಸುರಕ್ಷತಾ ಲೋಪಗಳು ಬಹಿರಂಗಗೊಂಡವು.
ಅದರಿಂದಾಗಿ ಬಿಸಿಸಿಐ ತಾತ್ಕಾಲಿಕವಾಗಿ ಬೆಂಗಳೂರು ಸ್ಟೇಡಿಯಂಗೆ ಪಂದ್ಯ ಆಯೋಜನೆಗೆ ಅನುಮತಿ ನೀಡಿಲ್ಲ.
ಇದರ ಪರಿಣಾಮವಾಗಿ IPL 2026 ರಲ್ಲಿ ಚಿನ್ನಸ್ವಾಮಿ ಮೈದಾನಕ್ಕೆ NOC ಸಿಗುವ ಸಾಧ್ಯತೆ ಅತೀ ಕಡಿಮೆ.
ಪರ್ಯಾಯ ಮೈದಾನ ಹುಡುಕಾಟ ಆರಂಭಿಸಿದ RCB
ಈ ಹಿನ್ನೆಲೆ RCB ತನ್ನ ಪಂದ್ಯಗಳನ್ನು ಆಯೋಜಿಸಲು ಪರ್ಯಾಯ ಮೈದಾನಗಳನ್ನು ಪರಿಶೀಲಿಸುತ್ತಿದ್ದು, ಪುಣೆ ಮೊದಲ ಆಯ್ಕೆಯಾಗಿದೆ.
ತಂಡದ ಮೂಲಗಳು ತಿಳಿಸಿದಂತೆ,

“ಬಿಸಿಸಿಐಯಿಂದ ಅಂತಿಮ ನಿರ್ಧಾರ ಬಂದ ತಕ್ಷಣ, RCB ಹೊಸ ತವರನ್ನು ಅಧಿಕೃತವಾಗಿ ಘೋಷಿಸುತ್ತದೆ.”
RCB ಪುಣೆಯೊಂದಿಗೆ ಜೊತೆಗೆ ರಾಜಸ್ಥಾನ ಮತ್ತು ಹೈದ್ರಾಬಾದ್ ಮೈದಾನಗಳನ್ನೂ ಪರಿಗಣಿಸುತ್ತಿದೆ ಎಂಬ ವರದಿಯೂ ಬಂದಿದೆ.
IPL 2026 — ಹೊಸ ತವರಿನಲ್ಲಿ ಹಾಲಿ ಚಾಂಪಿಯನ್
ಹಾಲಿ ಚಾಂಪಿಯನ್ ಆಗಿರುವ RCB, IPL 2026ರಲ್ಲಿ ಹೊಸ ಮೈದಾನದಲ್ಲಿ ಆಡಬೇಕಾದರೆ ಇದು ತಂಡಕ್ಕೆ ಹೊಸ ಸವಾಲು.
ಆದರೆ RCB ಅಭಿಮಾನಿಗಳು ಎಲ್ಲೆಡೆ ಇರುವುದರಿಂದ, ಪುಣೆಯಲ್ಲಿಯೂ ಬೆಂಬಲದ ಅಲೆ ನಿರೀಕ್ಷೆಯಲ್ಲಿದೆ.




