ಇಂದಿನಿಂದ ಬೆಳಗಾವಿ Winter Session ಆರಂಭ, 20 ವಿಧೇಯಕ ಮಂಡನೆಗೆ ಸಿದ್ಧತೆ.

ಉತ್ತರ ಕರ್ನಾಟಕದ ಸಮಸ್ಯೆಗಳು, ಪರಿಹಾರಗಳನ್ನೇ ಪ್ರಧಾನಾಗಿಟ್ಟುಕೊಂಡು ಹಾಗೂ ಸಿಎಂ ಕುರ್ಚಿ ಕದನದ ಮಧ್ಯ ರಾಜ್ಯದಲ್ಲಿ ಎರಡು ವಾರಗಳ ಚಳಿಗಾಲದ ಬೆಳಗಾವಿ ಅಧಿವೇಶನ (Belagavi Winter Session 2025) ಇಂದಿನಿಂದ ಆರಂಭವಾಗುತ್ತಿದೆ. ರಾಜ್ಯದ ನಾಯಕತ್ವ ಬದಲಾವಣೆ ತಿಕ್ಕಾಟದ ಮಧ್ಯ ಒಗ್ಗಟ್ಟಿನ ಮಂತ್ರ ಜಪಿಸಿರುವ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ವಿಪಕ್ಷಗಳ ಟೀಕೆಗಳಿಗೆ, ಪ್ರಶ್ನೆಗಳು ಮತ್ತು ಆರೋಪಗಳಿಗೆ ತಕ್ಕ ಉತ್ತರ ಕೊಡಲು ಸಜ್ಜಾಗಿದ್ದಾರೆ.
‘ಸ್ಪೆಷಲ್ ಫೋಕಸ್’
ಕಬ್ಬು, ಮಕ್ಕೆಜೋಳ ಸೇರಿದಂತೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ದರ, ನೆರೆ–ಪ್ರವಾಹ ಪರಿಹಾರ, ನೀರಾವರಿ ಯೋಜನೆಗಳ ಜಾರಿಗೆ ತೊಂದರೆ, ಸರ್ಕಾರಿ ನೇಮಕಾತಿ, ಪೊಲೀಸ್ ವೈಫಲ್ಯ ಈ ಎಲ್ಲ ಕದನ ವಿಚಾರಗಳನ್ನು ಪ್ರದಾನವಾಗಿ ಚರ್ಚೆಗೆ ತರುವುದಾಗಿ ವಿಪಕ್ಷಗಳು ಘೋಷಿಸಿವೆ. ಇನ್ನು ರಾಜ್ಯ ಸರ್ಕಾರ ತನ್ನ ಎರಡು ವರ್ಷಗಳ ಸಾಧನೆಯನ್ನು ವಿವರಿಸಿ ಪ್ರತಿಯೊಂದು ಆಕ್ಷೇಪಣೆಗೂ ಉತ್ತರಿಸಲು CM ಸಿದ್ದು ಹಾಗೂ DCM ಡಿಕೆ ಶಿವಕುಮಾರ್ ಸಜ್ಜಾಗಿದ್ದಾರೆ.
20 ವಿಧೇಯಕಗಳು ಮಂಡನೆ
ಈ ಅಧಿವೇಶನದಲ್ಲಿ ಸುಮಾರು 20 ವಿಧೇಯಕಗಳು ಮಂಡನೆಯಾಗಲಿವೆ. ರಾಜ್ಯದ ವಿವಿಧ ಇಲಾಖೆಗಳ ಸುಧಾರಣೆ, ಆಡಳಿತಾತ್ಮಕ ಬದಲಾವಣೆಗಳಿಗೆ ಸಂಬಂಧಿಸಿದ ಕಾನೂನು ಪ್ರಸ್ತಾಪಗಳು ಚರ್ಚೆಗೆ ಬರಲಿವೆ.
ಇದನ್ನು ಓದಿ : Dina Bhavishya|ದಿನ ಭವಿಷ್ಯ 8 ಡಿಸೆಂಬರ್ 2025

“ಮಲತಾಯಿ ಧೋರಣೆ”
ಉತ್ತರ ಕರ್ನಾಟಕಕ್ಕೆ “ಮಲತಾಯಿ ಧೋರಣೆ”, ರೈತರ ಆತಂಕಗಳು, ಕಾನೂನು–ಸುವ್ಯವಸ್ಥೆ ಹಿನ್ನಡೆ, ಅನುದಾನ ಬಿಡುಗಡೆಗೆ ಸಂಬಂಧಿಸಿದ ಆರೋಪಗಳು, ಡಿಕೆಶಿ ದುಬಾರಿ ವಾಚ್ ವಿವಾದ — ಎಲ್ಲವನ್ನೂ ಸಭೆಯ ವೇದಿಕೆಯಲ್ಲಿ ಎತ್ತಲು ವಿಪಕ್ಷಗಳು ತಯಾರಿ ನಡೆಸಿವೆ.
89 ಸಂಘಟನೆಗಳ ಪ್ರತಿಭಟನೆ
ಕಬ್ಬು ಬೆಳೆಗಾರರು ಸೇರಿದಂತೆ 89ಕ್ಕೂ ಹೆಚ್ಚು ರೈತರು ಹಾಗೂ ಹೋರಾಟಗಾರರ ಸಂಘಟನೆಗಳು ಅಧಿವೇಶನದ ಮೊದಲ ದಿನವೇ ಬೆಳಗಾವಿಯಲ್ಲಿ ಪ್ರತಿಭಟನೆಗೆ ಕರೆ ನೀಡಿವೆ. ಇದಕ್ಕಾಗಿ ಸುವರ್ಣಸೌಧ ಸುತ್ತಮುತ್ತ 6000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಇತ್ತೀಚಿನ ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ ಸ್ಪೋಟದ ಹಿನ್ನೆಲೆ ಪ್ರದೇಶದಲ್ಲಿ High Alert ಜಾರಿಯಲ್ಲಿದೆ. ಡಿಸೆಂಬರ್ 19ರವರೆಗೆ ಚಳಿಗಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ.

ಇದನ್ನು ನೋಡಿ : DUSHYANTH | ಮಗ ದುಷ್ಯಂತರ ಗತವೈಭವ ನೋಡಿ – ಗುಬ್ಬಿ ವಾಸಣ್ಣ ಏನಂದ್ರಂತೆ ಗೊತ್ತಾ.?




