ಗಲಾಟೆಯಲ್ಲಿ ಜಸ್ಟ್ ತಳ್ಳಿದಕ್ಕೆ ಬಿದ್ದು ಸತ್ತ ದೊಡ್ಡಪ್ಪ, ಅಸಲಿಗೆ ಆಗಿದ್ದೇನು?

ಇತ್ತೀಚಿನ ದಿನಗಳಲ್ಲಿ ಜಮೀನು,ಮನೆಯ ವಿಚಾರಕ್ಕೆ ಗಲಾಟೆಗಳು ನಡೆಯುವುದು ಸರ್ವೆ ಸಾಮಾನ್ಯವಾಗಿಬಿಟ್ಟಿವೆ. ಕೂತು ಬಗೆಹರಿಸಬಹುದಾದ ಚಿಕ್ಕಪುಟ್ಟ ವಿಚಾರಕ್ಕೂ ಕೊಲೆ ಮಾಡುವ ಹಂತಕ್ಕೆ ತಲುಪ್ಪಿದ್ದಾರೆ ಜನರು. ಮನುಷ್ಯ, ಸಂಬಂಧವನ್ನೇ ಮರೆತು ಒಡಹುಟ್ಟಿದವರು, ಸಂಬಂಧಿಕರನ್ನೇ ಕೊಲೆ ಮಾಡುತ್ತಿದ್ದಾರೆ. ಇಂತ ಚಿಕ್ಕಬಳ್ಳಾಪುರದಲ್ಲಿ ಇಂತಹ ಪ್ರಕರಣಗಳು ಅದ್ಯಾಕೋ ದಿನೇ ದಿನೇ ಹೆಚ್ಚಾಗುತ್ತಿವೆ. ಇತ್ತ ಕೆಂಚರ್ಲಹಳ್ಳಿಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಗುರ್ರಂಪಲ್ಲಿಯಲ್ಲಿ ಮಾತುಕಥೆ ವೇಳೆ ದೊಡ್ಡಪ್ಪನನ್ನೆ ತಮ್ಮನ ಮಗ ಕೊಂದಿರುವ ಘಟನೆ ನಡೆದಿದೆ.
ಭೀಕರ Murder
ಮನೆ ವಿಚಾರಕ್ಕೆ ನ್ಯಾಯ ಪಂಚಾಯತಿ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಹೋದ ದೊಡ್ಡಪ್ಪನನ್ನು ತಮ್ಮನ ಮಗ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಚರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರ್ರಂಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು 66 ವರ್ಷದ ನಾರಾಯಣಸ್ವಾಮಿ ಎನ್ನಲಾಗಿದೆ.
ಇದನ್ನು ಓದಿ : ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವೃದ್ಧ ಸಾವು
ನಡೆದದ್ದೇನು?
ಗುರ್ರಂಪಲ್ಲಿ ಗ್ರಾಮದ ತಮ್ಮ ಮದ್ದರೆಡ್ಡಿ ಎಂಬಾತನ ಮನೆ ವಿಚಾರಕ್ಕೆ ಸುಮಾರು ದಿನಗಳಿಂದ ವಿವಾದವಿತ್ತು. ರಾತ್ರಿ ಮನೆ ವಿಚಾರಕ್ಕೆ ಮಾತುಕತೆ ನಡೆಯುತ್ತಿದ್ದ ವೇಳೆ, ಸ್ಥಳಕ್ಕೆ ಹೋದ ನಾರಾಯಣಸ್ವಾಮಿ ಮತ್ತು ತಮ್ಮ ಮಗ 38 ವರ್ಷದ ಮಧುಸೂದನ್ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಮಾತುಗಳು ವಿಕೋಪಕ್ಕೆ ತಿರುಗಿ ಮಧುಸೂದನೆ ನಾರಾಯಣಸ್ವಾಮಿ ದೊಡ್ಡಪ್ಪನಾಗಬೇಕು ಅನ್ನೋದನ್ನು ಲೆಕ್ಕಿಸದೆ ಕೊಲೆ ಮಾಡಿದ್ದಾನೆ.
ಮೃತದೇಹ ಶವಗಾರಕ್ಕೆ ರವಾನೆ
ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿದ್ದು, ಆಸ್ಪತ್ರೆಗೆ ಅಡಿಷನಲ್ ಎಸ್ಪಿ ಜಗನ್ನಾಥ್ ರೈ, ಸರ್ಕಲ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ, ಭೇಟಿ ನೀಡಿ ಘಟನೆಯ ಸಂಪೂರ್ಣ ವಿವರ ಪಡೆದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ನಾರಾಯಣಸ್ವಾಮಿಯ ತಮ್ಮ ಮದ್ದಿರೆಡ್ಡಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಮಧುಸೂದನ್ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನು ನೋಡಿ : ರಾಜಕೀಯ ನಿವೃತ್ತಿ ಬಗ್ಗೆ ರಾಜಣ್ಣ ಘೋಷಣೆ ನಾನು ಮುಂದಿನ ಎಲೆಕ್ಷನ್ ಗೆ ನಿಲ್ಲೋಲ್ಲ




