ವಿಲನ್ ಶೇಡ್ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್ರನ್ನ ಕಣ್ತುಂಬಿಕೊಂಡ 3 ಮಿಲಿಯನ್ ಮಂದಿ!

ದರ್ಶನ್ ನಟನೆಯ Devil ಚಿತ್ರದ ಟ್ರೇಲರ್ಗೆ ಅದ್ದೂರಿ ವೆಲ್ಕಮ್ ದೊರೆತಿದೆ. ಕೆಲವೇ ಗಂಟೆಗಳಲ್ಲಿ ಟ್ರೈಲರ್ 3 ಮಿಲಿಯನ್ ವೀಕ್ಷಣೆ ಕಂಡಿದೆ. ದರ್ಶನ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ, ಪವರ್ಫುಲ್ ಡೈಲಾಗ್ಗಳಿಂದ ತುಂಬಿರುವ ಚಿತ್ರದ ಟ್ರೇಲರನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಕಿಕ್ನಲ್ಲಿದ್ದರೆ ಫುಲ್ ಆನ್ ಡೆವಿಲ್
‘ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ, ನಾನು ಬರ್ತಿದೀನಿ ಚಿನ್ನ’, ‘ಲುಕ್ನಲ್ಲಿ ಹೀರೋನೇ.. ಕಿಕ್ನಲ್ಲಿದ್ದರೆ ಫುಲ್ ಆನ್ ಡೆವಿಲ್’ ಎಂಬ ಸಂಭಾಷಣೆಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನು Devil ಚಿತ್ರದ ನಾಯಕಿಯಾಗಿ ರಚನಾ ಕಾಣಿಸಿಕೊಂಡಿದ್ದು, ಟ್ರೈಲರ್ ನಲ್ಲಿ ಅವರ ಕೆಲ ಸನ್ನಿವೇಶಗಳು ಗಮನ ಸೆಳೆದಿವೆ. ರಚನಾ ಗ್ಲಾಮರ್ ಹಾಗೂ ಅಭಿನಯ ಎರಡರಲ್ಲೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.

ಇದನ್ನು ಓದಿ : Bengaluru Cyber Crime|ಹಾಸಿಗೆಯ ಕೆಳಗೆ 11 ಲಕ್ಷ ರೂ. ಬಚ್ಚಿಟ್ಟಿದ್ದ Cyber Crime ಪೊಲೀಸ್ ವಶಕ್ಕೆ
ಮಹತ್ವದ ಪಾತ್ರ
ಮಾಜಿ ‘ಬಿಗ್ ಬಾಸ್’ ಸ್ಪರ್ಧಿ ವಿನಯ್ ಗೌಡ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅವರ ಪಾತ್ರದ ಕೆಲವು ಕ್ಷಣಗಳು ಟ್ರೈಲರ್ನಲ್ಲೇ ಕುತೂಹಲ ಹುಟ್ಟಿಸುತ್ತವೆ.
ಡಿಸೆಂಬರ್ 11ರಂದು ಡೆವಿಲ್ ಚಿತ್ರ ಬಿಡುಗಡೆಯಾಗಲಿದ್ದು, ಕೌಂಟ್ ಡೌನ್ ಈಗ ಜೋರಾಗಿದೆ. ವಿಲನ್ ಶೇಡ್, ಪ್ಲೇ ಬಾಯ್ ಲುಕ್, ರೊಮ್ಯಾಂಟಿಕ್ ಹಲವು ರೀತಿ ಕಾಣಿಸಿಕೊಂಡಿರುವ ದರ್ಶನ್ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅಲ್ಲದೇ ಚಿತ್ರದಲ್ಲಿ ಗಿಲ್ಲಿ ನಟನ ಪಾತ್ರವೂ ಪ್ರಮುಖವಾಗಿದ್ದು, ಟ್ರೈಲರ್ನಲ್ಲೇ ಅದು ಹೈಲೈಟ್ ಆಗಿದೆ.
ಇದನ್ನು ನೋಡಿ : KODI SHREE SWAMIJI | CM ಬದಲಾವಣೆ ವಿಚಾರ – ಕೋಡಿ ಶ್ರೀ ಸ್ಫೋಟಕ ಭವಿಷ್ಯ





