BBK S12 : ಯಾರೇ ಕ್ಯಾಪ್ಟನ್ ಆದರೂ ಗಿಲ್ಲಿ ನಟ ಅವರು ಕ್ಯಾಪ್ಟನ್ ರೂಂ ಬಳಸುವುದನ್ನು ನೀವು ಕಂಡಿರಬಹುದು. ಈ ವಾರವೂ ಹಾಗೆಯೇ ಆಗಿದೆ. ಗಿಲ್ಲಿ ಅವರು ಬಿಗ್ ಬಾಸ್ ಹಾಸಿಗೆ ಮೇಲೆ ಮಲಗಿದರು. ಅಲ್ಲಿದ್ದ ಅಭಿಷೇಕ್, ಧನುಷ್ ಅವರು ಹೊರಗೆ ಹೋಗುವಂತೆ ಹೇಳಿದರೂ ಕೇಳಲಿಲ್ಲ. ಇದಕ್ಕೆ ಈಗ ಶಿಕ್ಷೆ ಸಿಕ್ಕಂತೆ ಆಗಿದೆ.

BBK S12 : ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಕ್ಯಾಪ್ಟನ್ ರೂಂ ವಿಶೇಷ ಮೌಲ್ಯವನ್ನು ಹೊಂದಿದೆ ಎಂದರೂ ತಪ್ಪಾಗಲಿಕ್ಕಿಲ್ಲ.
ಕ್ಯಾಪ್ಟನ್ ಆದವರು ಮಾತ್ರ ಈ ರೂಂ ಪ್ರವೇಶ ಮಾಡಬೇಕು. ಅದಕ್ಕೆ ಅಷ್ಟು ವಿಶೇಷವಾದ ಸ್ಥಾನ-ಮಾನ ಇದೆ.
ಆದರೆ, ಈ ಬಾರಿಯ ಸ್ಪರ್ಧಿಗಳಿಗೆ ಅದರಲ್ಲೂ ಗಿಲ್ಲಿ ನಟನಿಗೆ ಇದರ ಮೌಲ್ಯ ತಿಳಿದಂತೆ ಕಾಣಿಸುತ್ತಿಲ್ಲ.
ಅವರು ಕ್ಯಾಪ್ಟನ್ ಆಗದೆ ಇದ್ದರೂ ಆ ರೂಂ ಬಳಸಿದ್ದರು. ಇದರಿಂದ ಕ್ಯಾಪ್ಟನ್ ರೂಂಗೆ ಬೀಗ ಬಿದ್ದಿದೆ.
ಇದನ್ನು ಓದಿ : Bengaluru Cyber Crime|ಹಾಸಿಗೆಯ ಕೆಳಗೆ 11 ಲಕ್ಷ ರೂ. ಬಚ್ಚಿಟ್ಟಿದ್ದ Cyber Crime ಪೊಲೀಸ್ ವಶಕ್ಕೆ
ಯಾರೇ ಕ್ಯಾಪ್ಟನ್ ಆದರೂ ಗಿಲ್ಲಿ ನಟ ಅವರು ಕ್ಯಾಪ್ಟನ್ ರೂಂ ಬಳಸುವುದನ್ನು ನೀವು ಕಂಡಿರಬಹುದು. ಈ ವಾರವೂ ಹಾಗೆಯೇ ಆಗಿದೆ.
ಸ್ಪಂದನಾ ಮತ್ತು ಅಭಿಷೇಕ್ ಅವರು ಕ್ಯಾಪ್ಟನ್ ಆದಾಗ ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಂ ಪ್ರವೇಶ ಮಾಡಿದರು.
ಕಾವ್ಯಾ ಕೂಡ ಇದ್ದರು. ಆ ನಂತರ ಗಿಲ್ಲಿ ಅವರು ಬೆಡ್ ಪಕ್ಕದ ಚೇರ್ ಮೇಲೆ ಕುಳಿತರು. ನಂತರ ಒಂದು ಹಂತಕ್ಕೆ ಮುಂದೆ ಹೋದ ಗಿಲ್ಲಿ ಅವರು ಹಾಸಿಗೆ ಮೇಲೆ ಮಲಗಿದರು.
ಅಲ್ಲಿದ್ದ ಅಭಿಷೇಕ್, ಧನುಷ್ ಅವರು ಹೊರಗೆ ಹೋಗುವಂತೆ ಹೇಳಿದರೂ ಕೇಳಲಿಲ್ಲ.
‘ಹಾಗೆ ಕುಳಿತುಕೊಳ್ಳಬಾರದು’ ಎಂದು ಅಭಿಷೇಕ್ ಹೇಳಿದರು. ಆದರೆ, ಇದನ್ನು ಗಿಲ್ಲಿ ಕೇಳಲೇ ಇಲ್ಲ.ಅವರು ಮಲಗೇ ಇದ್ದರು. ಇಷ್ಟು ದಿನ ಸುದೀಪ್ ಅವರು ಈ ವಿಷಯದಲ್ಲಿ ಸೈಲೆಂಟ್ ಆಗಿದ್ದರು. ಈಗ 70 ದಿನಗಳ ಬಳಿಕ ಕ್ಯಾಪ್ಟನ್ ರೂಂಗೆ ಬೀಗ ಬಿದ್ದಿದೆ.
ಇದನ್ನು ನೋಡಿ : KODI SHREE SWAMIJI | CM ಬದಲಾವಣೆ ವಿಚಾರ – ಕೋಡಿ ಶ್ರೀ ಸ್ಫೋಟಕ ಭವಿಷ್ಯ




