Health Tips : ಮಧುಮೇಹಿಗಳು ತಿನ್ನಲೇಬೇಕು ಈ ತರಕಾರಿ- ಏಕಾಏಕಿ ಕಂಟ್ರೋಲ್’ಗೆ ಬರುತ್ತೆ ಶುಗರ್.

ದಿನನಿತ್ಯದ ಆಹಾರದಲ್ಲಿ ಸೌತೆಕಾಯಿ ಸೇರಿಸುವುದರಿಂದ ಮಧುಮೇಹಿಗಳಿಗೆ ಹಲವು ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ಸೌತೆಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುವುದಲ್ಲದೆ ದೇಹಕ್ಕೆ ಅಗತ್ಯವಿರುವ ನೀರಿನ ಪ್ರಮಾಣವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನು ಓದಿ : ಮಹಿಳೆಯನ್ನು ಕಚ್ಚಿ ಕೊಂದ ರಾಟ್ ವೀಲರ್ ನಾಯಿ
ಸೌತೆಕಾಯಿ ಮಧುಮೇಹಿಗಳಿಗೆ ಎಷ್ಟು ಸಹಕಾರಿ?
*ಮಧುಮೇಹದಿಂದ ಬಳಲುತ್ತಿರುವವರಿಗೆ ಪದೇ ಪದೇ ಮೂತ್ರ ವಿಸರ್ಜನೆಯಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಸೌತೆಕಾಯಿಯ ನಿಯಮಿತ ಸೇವನೆಯು ದೇಹದಲ್ಲಿ ಹೈಡ್ರೇಷನ್ ಕಾಪಾಡಲು ಸಹಕಾರಿ ಎಂದು ತಜ್ಞರು ತಿಳಿಸಿದ್ದಾರೆ.
*ಸೌತೆಕಾಯಿಯು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಚ್ಚಿದ ಬೊಜ್ಜು ತೂಕವು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದಾದ ಕಾರಣ, ಈ ತರಕಾರಿ ಸೇವನೆಯು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
*ಸೌತೆಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಶಕ್ತಿ ನೀಡುವೊಂದಿಗೆ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ತಗ್ಗಿಸುವಲ್ಲಿ ಸಹಕಾರಿಯಾಗುತ್ತವೆ. ಜೊತೆಗೆ, ಇದರ ಹೆಚ್ಚಿನ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
*ಹೆಚ್ಚಿನ ಮಧುಮೇಹಿ ವ್ಯಕ್ತಿಗಳು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಸೌತೆಕಾಯಿಯ ವಿಟಮಿನ್ ಎ ದೃಷ್ಠಿ ಸುಧಾರಿಸಲು ಪ್ರಮುಖ ಪಾತ್ರವಹಿಸುತ್ತದೆ.
ಇದನ್ನು ನೋಡಿ : ಬಸ್ ಸ್ಟ್ಯಾಂಡ್ ನಂತೆ ಆಯ್ತು AIRPORT – ಅಸ್ಥಿಯನ್ನು ಹಿಡಿದು FLIGHTಗೆ WAITING




