Devil Trailer : ಟ್ರೇಲರ್ನ ವಿಶೇಷ ಆಕರ್ಷಣೆಯೇ ಗಿಲ್ಲಿ ನಟನ ಪಾತ್ರದ ಝಲಕ್. ಬಿಗ್ ಬಾಸ್ ಮೂಲಕ ಮನೆಮಾತಾದ ಗಿಲ್ಲಿ, ‘ಡೆವಿಲ್’ ಚಿತ್ರದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Devil Trailer : ‘ಡೆವಿಲ್’ ಚಿತ್ರದ ಟ್ರೇಲರ್ ಡಿಸೆಂಬರ್ 5ರಂದು ಬೆಳಿಗ್ಗೆ 10.05ಕ್ಕೆ ರಿಲೀಸ್ ಆಗುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ತಾರಕ್ಕೇರಿತು. ದರ್ಶನ್ ಅವರ ಮಾಸ್ ಲುಕ್ ಟ್ರೇಲರ್ನ ಮೊದಲ ಕ್ಷಣದಿಂದಲೇ ಗಮನ ಸೆಳೆದಿದ್ದು, ಅವರ ಎಂಟ್ರಿ, ಗೆಟಪ್ ಮತ್ತು ಡೈಲಾಗ್ ಡೆಲಿವರಿ ಫ್ಯಾನ್ಸ್ನ್ನು ಮತ್ತಷ್ಟು ಕುತೂಹಲಕ್ಕೆ ಗುರಿಮಾಡಿದೆ.

ಟ್ರೇಲರ್ನ ವಿಶೇಷ ಆಕರ್ಷಣೆಯೇ ಗಿಲ್ಲಿ ನಟನ ಪಾತ್ರದ ಝಲಕ್. ಬಿಗ್ ಬಾಸ್ ಮೂಲಕ ಮನೆಮಾತಾದ ಗಿಲ್ಲಿ, ‘ಡೆವಿಲ್’ ಚಿತ್ರದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ನಲ್ಲಿ ಅವರು ಪೊಲೀಸರ ಎದುರು ಕುಳಿತೇ ಹೇಳುವ, “ಎಕ್ಸ್ಕ್ಯೂಸ್ ಮೀ ಪಿಸಿ… ಎಸಿ ಹಾಕಮ್ಮ, ಲಾಟ್ಸ್ ಆಫ್ ಸೆಖೆ” ಎಂಬ ಮಾಸ್ ಡೈಲಾಗ್ ನೆಟ್ಟಗೇ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಅವರ ಹೊಸ ಗೆಟಪ್ನ್ನು ನೋಡಿ ಆನಂದಿತರಾಗಿದ್ದಾರೆ.
ಇದನ್ನು ಓದಿ : ಅಜಾತಶತ್ರು SP Balasubrahmanyam ಪ್ರತಿಮೆಗೆ ವಿರೋಧ..!

ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಅವರಿಗೆ ಜೋಡಿಯಾಗಿ ರಚನಾ ರೈ ನಟಿಸಿದ್ದಾರೆ. ಮಹೇಶ್ ಮಂಜ್ರೇಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಾಂಡ್ರೆ, ಶೋಭರಾಜ್ ಸೇರಿದಂತೆ ಹಲವಾರು ಪ್ರಮುಖರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡಗೂ ಚಿತ್ರದಲ್ಲಿ ಪಾತ್ರ ಸಿಕ್ಕಿದ್ದು ಮತ್ತೊಂದು ಆಕರ್ಷಣೆ.




