Upalokayukta B. Veerappa : ಕರ್ನಾಟಕಕ್ಕೆ ಭ್ರಷ್ಟಾಚಾರದಲ್ಲಿ ಟಾಪ್ ಐದನೇ ಸ್ಥಾನ – ಕರ್ನಾಟಕದಲ್ಲಿ ಶೇ.63 ರಷ್ಟು ಭ್ರಷ್ಟಾಚಾರ-ಉಪಲೋಕಾಯುಕ್ತ ಬಿ.ವೀರಪ್ಪ

Upalokayukta B. Veerappa : ಸರ್ಕಾರಿ ಕೆಲಸ ಅಂದ್ರೆ ದೇವರ ಕೆಲಸ ಅಂತಾರೆ, ಅದ್ರೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕು ಅಂದ್ರೆ ಅಧಿಕಾರಿಗಳ ಜೇಬಿಗೆ ಲಂಚ ಇಳಿಯಲೇಬೇಕು. ಪ್ರತಿ ಇಲಾಖೆಯಲ್ಲಿಯೂ ಭ್ರಷ್ಟಾಚಾರ ಅನ್ನೋದು ತಾಂಡವ ಆಡ್ತಾ ಇದ್ದು, ಸಾಮಾನ್ಯ ಜನರು ಲಂಚಾವತಾರಕ್ಕೆ ರೋಸಿ ಹೋಗಿದ್ದಾರೆ. ಇಲಾಖೆಗಳಲ್ಲಿ ದುಡ್ಡು ಬಿಚ್ಚಿದ್ರೆ ಸಾಕು ಎಲ್ಲಾ ಫಟಾ ಫಟ್ ಅಂತಾ ಕೆಲಸ ಆಗಿಬಿಡುತ್ತೆ. ಇದೀಗ ಭ್ರಷ್ಟಾಚಾರದ ಬಗ್ಗೆ ಉಪಲೋಕಾಯುಕ್ತ ವೀರಪ್ಪ ಅವರು ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ.
ಕರ್ನಾಟಕಕ್ಕೆ ಭ್ರಷ್ಟಾಚಾರದಲ್ಲಿ ಎಷ್ಟನೇ ಸ್ಥಾನ ಗೊತ್ತಾ?
ದೇಶದಲ್ಲಿ ಅತಿಹೆಚ್ಚು ಭ್ರಷ್ಟಾಚಾರವಿರುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ ಐದನೆಯ ಸ್ಥಾನ ಪಡೆದಿದ್ದು, ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ.
ವೀರಪ್ಪ ಅವರು ಅಧಿಕಾರ ವಹಿಸಿಕೊಂಡಾಗಿನಿಂದಲೂ ಹಲವು ಜಿಲ್ಲೆಗಳು, ಹಲವು ಇಲಾಖೆಗಳಿಗೆ ಭೇಟಿ ನೀಡಿ ಕೂಲಂಕೂಷವಾಗಿ ಪರಿಶೀಲನೆ ನಡೆಸುತ್ತಿದ್ದು, ಇದೀಗ ಶಾಕಿಂಗ್ ಮಾಹಿತಿ ನೀಡಿದ್ದು, ಸಾಮಾನ್ಯ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ.
ಇದನ್ನು ಓದಿ : ATM ಮಷಿನ್ನನ್ನೇ ಎಗರಿಸಲು ಯತ್ನಿಸಿದ ಐನಾತಿ ಕಳ್ಳರು

ಶೇ.63 ರಷ್ಟು ಭ್ರಷ್ಟಾಚಾರ ಇದೆ-ಜಸ್ಟೀಸ್ ಬಿ.ವೀರಪ್ಪ
ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ನಡೆದ ಪುಸ್ತಕ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ, ಉಪಲೋಕಾಯುಕ್ತ ಬಿ. ವೀರಪ್ಪ, ಕೇರಳದಲ್ಲಿ ಶೇ.10ರಷ್ಟು ಭ್ರಷ್ಟಾಚಾರವಿದ್ರೆ, ಕರ್ನಾಟಕದಲ್ಲಿ ಶೇ.63ರಷ್ಟು ಭ್ರಷ್ಟಾಚಾರ ಇದೆ. ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಮಹಿಳಾ ಅಧಿಕಾರಿಗಳು, ನೌಕರರು ಸಹ ಭ್ರಷ್ಟಾಚಾರದಲ್ಲಿ ಮುಳುಗಿರುವುದೆ ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದ್ರು.
ಅಲ್ದೇ ಕರ್ನಾಟಕ ರಾಜ್ಯವು ಭ್ರಷ್ಟಾಚಾರದ ಅಗ್ರಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದೆ. ನಾನು ಉಪಲೋಕಾಯುಕ್ತನಾಗಿ ನೇಮಕವಾದ ಮೇಲೆ ಇದನ್ನೆಲ್ಲಾ ಕಣ್ಣಾರೆ ನೋಡುವ ಅವಕಾಶ ಸಿಕ್ಕಿದೆ ಎಂದು ಜಸ್ಟೀಸ್ಟ್ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದ್ರು. ಬಿ.ವೀರಪ್ಪ ಅವರ ಈ ಶಾಕಿಂಗ್ ಹೇಳಿಕೆ ಇಡೀ ರಾಜ್ಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡ್ತಿದೆ.

ಇದನ್ನು ನೋಡಿ : ಕರ್ನಾಟಕ ರಾಜ್ಯಪಾಲರ ಮೊಮ್ಮಗನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್..!




