ATM Theft : ಮಧುಗಿರಿಯಲ್ಲಿ ಖದೀಮರ ಗ್ಯಾಂಗ್ ಫುಲ್ ಆಕ್ಟಿವ್.

ಮಧುಗಿರಿಯಲ್ಲಿ ಖದೀಮರ ಗ್ಯಾಂಗ್ ಫುಲ್ ಆಕ್ಟಿವ್ ಆಗಿದ್ದು, ಕಳ್ಳರ ಕೃತ್ಯ ಬೆಳಕಿಗೆ ಬಂದಿದೆ. ಹೌದು ಮಧುಗಿರಿ ತಾಲೂಕಿನ ಪುರವರದಲ್ಲಿರುವ ಇಂಡಿಯಾ ಒನ್ ಎಟಿಎಂ (India One ATM) ನಲ್ಲಿ ಕಳ್ಳತನಕ್ಕೆ ಯತ್ನಿಸಿರೋ ಪ್ರಕರಣ ನಡೆದಿದೆ.
ಇದನ್ನು ಓದಿ : ಬಸ್ಸಿಗೆ ಬೈಕ್ ಡಿಕ್ಕಿ – ಸ್ಥಳದಲ್ಲೇ ಯುವಕ ಸಾವು
ಇವರು ಅಂತಿಥಾ ಕಳ್ಳರಲ್ಲ.. ಐನಾತಿ ಕಳ್ಳರು
ಕಳ್ಳರು ರಾತ್ರಿ ವೇಳೆ ಇಂಡಿಯಾ ಒನ್ ಎಟಿಎಂನಲ್ಲಿ ಕಳ್ಳತನಕ್ಕೆ ಮುಂದಾಗಿದ್ದು, ಎಟಿಎಂನಲ್ಲಿರೋ ದುಡ್ಡನ್ನು ಎಗರಿಸುವ ಪ್ರಯತ್ನ ಮಾಡಿದ್ದಾರೆ.ಆದ್ರೆ ಅದು ಸಾಧ್ಯವಾಗದ ಹಿನ್ನೆಲೆ ಎಟಿಎಂ ಮಷಿನ್ನನ್ನೇ ಕದ್ದೋಯ್ಯಲು ಯತ್ನಿಸಿದ್ದಾರೆ. ಆದ್ರೆ ಎಟಿಎಂ ಭಾರವಾಗಿದ್ದರಿಂದ ಎಟಿಎಂನನ್ನು ಕದ್ದೊಯ್ಯಲು ಸಾಧ್ಯವಾಗದ ಹಿನ್ನೆಲೆ ಎಟಿಎಂನನ್ನು ಎಟಿಎಂ ರೂಂನ ಹೊರಗೇಯೇ ಬಿಟ್ಟು ಪರಾರಿಯಾಗಿದ್ದಾರೆ.
ಸ್ಥಳಕ್ಕೆ DYSP ಭೇಟಿ, ಪರಿಶೀಲನೆ
ಇನ್ನು ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ್ (DYSP Manjunath) ಸಿಪಿಐ ಹನುಮಂತ ರಾಯಪ್ಪ, ಪಿಎಸೈ ಶ್ರೀನಿವಾಸ್ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನು ನೋಡಿ : ಇಂಡಿಗೋ ವಿಮಾನಗಳ ಹಾರಾಟ ರದ್ದು – ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಆಕ್ರೋಶ




