ಮೂರು ತಿಂಗಳಾದ್ರೂ ಪತ್ತೆಯಾಗದ ವಿದ್ಯಾರ್ಥಿನಿಯರು – ಪಿಯುಸಿ ಸ್ಟೂಡೆಂಟ್ ನಾಪತ್ತೆ ಕೇಸ್ಗೆ CID ಎಂಟ್ರಿ.

ಬೆಂಗಳೂರಿನ ವಿದ್ಯಾರಾಣ್ಯಾಪುರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ಕೇಸ್ ಪೊಲೀಸರಿಗೆ ದೊಡ್ಡ ಸವಾಲಾಗಿದೆ.
ಜನವರಿ 31 ರಂದು ಮನೆ ಬಿಟ್ಟು ಹೊರಟ ಪಿಯುಸಿ ವಿದ್ಯಾರ್ಥಿನಿಯರಾದ ತನಿಷ್ಕಾ ಹಾಗೂ ಜ್ಯೂನಿಯರ್ತೇಜಸ್ವಿನಿ ಇನ್ನೂ ಪತ್ತೆಯಾಗಿಲ್ಲ. ಇದ್ರಿಂದ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಮೂರು ತಿಂಗಳಾದ್ರೂ ಪತ್ತೆಯಾಗದ ವಿದ್ಯಾರ್ಥಿನಿಯರು
ಈ ಇಬ್ಬರು ನಾಪತ್ತೆಯಾಗಿ ಬರೋಬ್ಬರಿ 3 ತಿಂಗಳು ಕಳೆದಿದ್ದು, ಇದುವರೆಗೂ ವಿದ್ಯಾರ್ಥಿನಿಯರು ಎಲ್ಲಿದ್ದಾರೆ ಎಂಬ ಸಣ್ಣ ಸುಳಿವು ಕೂಡ ಸಿಗ್ತಿಲ್ಲ. ಯಾರ ಸಂಪರ್ಕಕ್ಕೂ ಕೂಡ ಬಂದಿಲ್ಲ. ಹೀಗಾಗಿ ಈ ಪ್ರಕರಣವನ್ನು ಸರ್ಕಾರ CID ಹೆಗಲಿಗೆ ಹಾಕಿದೆ.
READ THIS : Chikkamagaluru ನಲ್ಲಿ ಸಬ್ ಇನ್ಸ್ಪೆಕ್ಟರ್ ಪತ್ನಿ ನೇಣಿಗೆ ಶರಣು..!!

ಈವರೆಗೂ ಅವರು ಎಲ್ಲಿದ್ದಾರೆ ಅನ್ನೋದು ನಿಗೂಡ
ಪರೀಕ್ಷೆಯ ಭಯದಿಂದ ವಿದ್ಯಾರ್ಥಿನಿಯರು ಮನೆ ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಯಾವುದೇ ಮೊಬೈಲ್ ಪೋನ್ ಬಳಸದೇ, ಎಟಿಎಂ ಕಾರ್ಡ್ ಬಳಸದೇ ಸಂಚರಿಸುತ್ತಿರೋದು ತನಿಖೆಗೆ ಮತ್ತಷ್ಟು ಸವಾಲಾಗಿದ್ದು. ಕೇವಲ ಮೂರು ಸಾವಿರ ರೂಪಾಯಿಗಳನ್ನ ತೆಗೆದುಕೊಂಡು ಮನೆ ಬಿಟ್ಟಿರುವ ವಿದ್ಯಾರ್ಥಿನಿಯರು ಆಧಾರ್ ಕಾರ್ಡ್ ಬಳಸಿಕೊಂಡು ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಇನ್ನು ಮಲೆಮಹದೇಶ್ವರ ಬೆಟ್ಟದಲ್ಲಿ ಇವರ ಸುಳಿವು ಸಿಕ್ಕಿದ್ರೂ, ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಇಬ್ಬರು ಮತ್ತೆ ಬೇರೆ ಕಡೆಗೆ ಸಂಚಾರ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ ಈವರೆಗೂ ಅವರು ಎಲ್ಲಿದ್ದಾರೆ ಅನ್ನೋದು ಮಾತ್ರ ನಿಗೂಡವಾಗಿದೆ.
CID ತನಿಖೆ ಬಳಿಕವಾದ್ರು ವಿದ್ಯಾರ್ಥಿನಿಯರು ಪತ್ತೆ ಆಗ್ತಾರಾ?
ಇನ್ನು ತನಿಷ್ಕಾ ಮತ್ತು ತೇಜಸ್ವಿನಿ ಸುಳಿವು ಸಿಗದ ಹಿನ್ನೆಲೆ ಪೊಲೀಸರು ಕಂಗಲಾಗಿ ಹೋಗಿದ್ದಾರೆ. ಎಷ್ಟೇ ಹುಡುಕಿದರು ಇಬ್ಬರು ಸಿಗದ ಹಿನ್ನೆಲೆ ಪೋಷಕರು ವಿದ್ಯಾರ್ಥಿನಿಯರ ಪತ್ತೆಗೆ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು.
ಬಳಿಕ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಪೋಷಕರು ಒತ್ತಾಯಿಸಿದ್ದರು. ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿದ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.
ಸಿಐಡಿ ತನಿಖೆ ಬಳಿಕವಾದ್ರು ವಿದ್ಯಾರ್ಥಿನಿಯರು ಪತ್ತೆ ಆಗ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.

MUST WATCH : ಗಾಂಜಾ ಸಿಕ್ಕಿಲ್ಲ ಅಂತಾ ಶೆಡ್ ಗೆ ಬೆಂಕಿ? – ಶಾಕಿಂಗ್ ಹೇಳಿಕೆ ಕೊಟ್ಟ ಶಾಸಕ SATHISH REDDY




