Sangeeth Sagar : ‘ಪಾತ್ರಧಾರಿ’ ಸಿನಿಮಾ ಶೂಟಿಂಗ್ ವೇಳೆಯೇ ಹೃದಯಾಘಾತದಿಂದ ಡೈರೆಕ್ಟರ್ ಸಾವು!

ಚಿತ್ರೀಕರಣದ ವೇಳೆ ಸ್ಯಾಂಡಲ್ವುಡ್ ನಿರ್ದೇಶಕ (Sandalwood Director) ನಿಗೆ ಹೃದಯಘಾತ ಸಂಭವಿಸಿದೆ. ಸಂಗೀತ್ ಸಾಗರ್ (Sangeeth Sagar) ಎಂಬ ನಿರ್ದೇಶಕ ಹೃದಯಘಾತ (Heart Attack) ದಿಂದ ಸಾವನ್ನಪ್ಪಿದ್ದಾರೆ. ಪಾತ್ರಧಾರಿ (Patradhari) ಎಂಬ ಸಿನಿಮಾ ಮಾಡುತ್ತಿದ್ದ ಸಂಗೀತ್ ಸಾಗರ್ ಶೂಟಿಂಗ್ ಮಾಡುತ್ತಿದ್ದ ವೇಳೆಯೇ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ಮೂವರು ಮಕ್ಕಳ ತಾಯಿಯ Deadly Murder
ಚಿಕತ್ಸೆ ಫಲಕಾರಿಯಾಗದೇ ಸಾವು
ಮಧ್ಯಾಹ್ನ ಹಾಸ್ಯ ನಟ ಸಂಜು ಬಸಯ್ಯ ಅವರಿಗೆ ಆ್ಯಕ್ಷನ್ ಹೇಳುವ ವೇಳೆಯಲ್ಲಿ ಸಂಗೀತ್ ಸಾಗರ್ ಅವರು ಅಸ್ವಸ್ಥರಾಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಕೊಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ಧಾರೆ.
8ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ನಿರ್ದೇಶನ
ಸಕಲೇಶಪುರದ ದೊಡ್ಡನಾಗರ ಮೂಲದ ಸಂಗೀತ್ ಸಾಗರ್ ಅವರು ಇದುವರೆಗೆ 8ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಸುಮಾರು 20 ದಿನಗಳಿಂದ ಹರಿಹರಪುರ ಮತ್ತು ತೀರ್ಥಹಳ್ಳಿ ಸುತ್ತಮುತ್ತ ‘ಪಾತ್ರಧಾರಿ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ನಾಳೆ ಕುಂಬಳಕಾಯಿ ಶಾಸ್ತ್ರ ಮಾಡಿ ಕೊನೆಯ ಚಿತ್ರೀಕರಣ ಮಾಡಬೇಕಿತ್ತು.
ಇದನ್ನು ನೋಡಿ : GUBBI | ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬ ವಿದ್ಯುತ್ ತಗುಲಿ ವ್ಯಕ್ತಿ ಸುಟ್ಟು ಭಸ್ಮ




