Karnataka Raj Bhavan : ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ತ್ರಿಪುರಾ, ಉತ್ತರಖಂಡ ರಾಜ್ಯಗಳಲ್ಲಿ ಈಗಾಗಲೇ ರಾಜಭವನದ ಹಸೆರು ಬದಲಿಸಲಾಗಿದೆ.
ಅದರಂತೆ ಬೆಂಗಳೂರಿನಲ್ಲಿರುವ ರಾಜಭವನದ ಹೆಸರು ಸಹ ಬದಲಾವಣೆ ಮಾಡಲಾಗಿದ್ದು, ಹೊಸ ಹೆಸರು ನಾಮಕರಣ ಮಾಡಲಾಗಿದೆ.

Karnataka Raj Bhavan : ಭಾರತ ಸರ್ಕಾರವು ದೇಶದಾದ್ಯಂತ ಇರುವ ರಾಜಭವನಗಳ ಹೆಸರನ್ನು ಬದಲಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದೀಗ ಬೆಂಗಳೂರಿನ ರಾಜ್ಯಪಾಲರ ಅಧಿಕೃತ ನಿವಾಸವಾದ ರಾಜಭವನಕ್ಕೂ ಹೊಸ ಹೆಸರು ನಾಮಕರಣ ಮಾಡಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ತೀರ್ಮಾನದಂತೆ, ರಾಜಭವನಗಳನ್ನು “ಲೋಕಭವನ” ಎಂದು ಮರುನಾಮಕರಣ ಮಾಡುವ ಕಾರ್ಯ ಪ್ರಾರಂಭಗೊಂಡಿದ್ದು, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ತ್ರಿಪುರಾ ಮತ್ತು ಉತ್ತರಖಂಡದಲ್ಲಿ ಈಗಾಗಲೇ ಜಾರಿಯಾಗಿದೆ. ಇದೀಗ ಕರ್ನಾಟಕವೂ ಈ ಪಟ್ಟಿಗೆ ಸೇರಿದೆ.
ಬೆಂಗಳೂರಿನಲ್ಲಿರುವ ರಾಜ್ಯಪಾಲರ ನಿವಾಸವಾದ ರಾಜಭವನಕ್ಕೆ ಅಧಿಕೃತವಾಗಿ ‘ಲೋಕಭವನ, ಕರ್ನಾಟಕ’ ಎಂದು ಹೆಸರು ಬದಲಾಯಿಸಲಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಅನುಮೋದನೆ ಮತ್ತು ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಈ ಬದಲಾವಣೆ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಇಲಾಖೆಗಳು, ಅಧಿಕೃತ ಪತ್ರಗಳು, ವೆಬ್ಸೈಟ್ಗಳು ಹಾಗೂ ಫಲಕಗಳಲ್ಲಿ “ರಾಜಭವನ ಕರ್ನಾಟಕ” ಬದಲು “ಲೋಕಭವನ ಕರ್ನಾಟಕ” ಎಂಬ ಹೆಸರನ್ನೇ ಬಳಸಬೇಕಾಗಿದೆ.
ಹೆಸರು ಬದಲಾವಣೆಯ ಹಿಂದೆ ಇರುವ ಕಾರಣವೇನು?
ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ರಾಜ್ಯಪಾಲರ ನಿವಾಸಗಳನ್ನು “ಗವರ್ನರ್ ಹೌಸ್ಗಳು” ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಾನಂದರ ಅಲ್ಲಿಗೆ “ರಾಜಭವನ” ಎಂಬ ಹೆಸರನ್ನು ನೀಡಲಾಗಿತ್ತು. ಆದರೆ ಈ ಹೆಸರು ಆಡಳಿತ ವೈಭವ, ಅಧಿಕಾರ ಮತ್ತು ವಿಶಿಷ್ಟತೆಗಳನ್ನು ಪ್ರತಿಬಿಂಬಿಸುತ್ತಿತ್ತು.
ಕೇಂದ್ರ ಸರ್ಕಾರದ ಅಭಿಪ್ರಾಯದ ಪ್ರಕಾರ, ರಾಜ್ಯಪಾಲರ ನಿವಾಸಗಳು ಸಾರ್ವಜನಿಕರಿಗೂ ಮುಕ್ತವಾಗಿರಬೇಕೆಂಬ ಉದ್ದೇಶದಿಂದ, ಹೆಚ್ಚು ಮಾನವೀಯ ಹಾಗೂ ಪ್ರಜೆಪ್ರಿಯ ಹೆಸರನ್ನು ನೀಡುವ ನಿಟ್ಟಿನಲ್ಲಿ “ಲೋಕಭವನ” ಎಂಬ ಹೆಸರನ್ನು ಆಯ್ಕೆಮಾಡಲಾಗಿದೆ.
ಹೊಸ ಹೆಸರಿನ ಮೂಲಕ ಸಾರ್ವಜನಿಕರಿಗೆ ಕೂಡಾ ಭವನ ಪ್ರವೇಶಿಸಲು ಅವಕಾಶವಿದ್ದು, ಪ್ರವಾಸಿಗರು, ವಿದ್ಯಾರ್ಥಿಗಳು ನಿರ್ದಿಷ್ಟ ಸಮಯದಲ್ಲಿ ಭವನದ ಒಳಾಂಗಣ, ಇತಿಹಾಸ ಮತ್ತು ಆಡಳಿತ ಸಂಸ್ಕೃತಿಯನ್ನು ಹತ್ತಿರದಿಂದ ಅನುಭವಿಸಬಹುದು.
ಇದರ ಮೂಲಕ ಆಡಳಿತ ಭವನಗಳ ವೈಭವವನ್ನು ಜನಸಾಮಾನ್ಯರಿಗೆ ಹಂಚಿಕೊಳ್ಳುವ ಮೂಲಕ ಸಂಸ್ಕೃತಿ, ಇತಿಹಾಸ ಮತ್ತು ಕಲೆಗಳ ಅರಿವು ಹೆಚ್ಚಿಸುವುದು ಸರ್ಕಾರದ ಉದ್ದೇಶ.
ಒಟ್ಟಿನಲ್ಲಿ, ಈ ಮರುನಾಮಕರಣವು ಭಾರತೀಯ ಆಡಳಿತ ಪರಂಪರೆಯನ್ನು ಹೆಚ್ಚು ಜನಪ್ರಿಯಗೊಳಿಸಿ, ಜನಸಾಮಾನ್ಯರ ಸಂಪರ್ಕವನ್ನು ಬಲಪಡಿಸುವ ಪ್ರಯತ್ನವಾಗಿದೆ.




