Karnataka Politics: ಸಿಎಂ-ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಲೇವಡಿ ಮಾಡಿದ್ದಾರೆ.

Karnataka Politics: ಬ್ರೇಕ್ಫಾಸ್ಟ್ಗೆ ಇಡ್ಲಿ, ನಾಟಿ ಕೋಳಿ ಸಾರು, ಡಿನ್ನರ್ಗೆ ಬೆಳ್ಳುಳ್ಳಿ ಕಬಾಬ್ ಇರುತ್ತೇನೋ ಅಂತ ಸಿಎಂ-ಡಿಸಿಎಂ ಬ್ರೇಕ್ಫಾಸ್ಟ್ ಮೀಟಿಂಗ್ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಲೇವಡಿ ಮಾಡಿದರು.
ಬ್ರೇಕ್ಫಾಸ್ಟ್ ಗೆ ಇಡ್ಲಿ, ನಾಟಿ ಕೋಳಿ ಸಾರು – ಡಿನ್ನರ್ಗೆ ಬೆಳ್ಳುಳ್ಳಿ ಕಬಾಬ್
ಬೆಂಗಳೂರಿನಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಉಪಹಾರ ಇಲಾಖೆ ಮಾತ್ರ ಸಕ್ರಿಯವಾಗಿದೆ. ಬ್ರೇಕ್ಫಾಸ್ಟ್ಗೆ ಇಡ್ಲಿ, ಉಪ್ಪಿಟ್ಟು, ನಾಟಿ ಕೋಳಿ ಸಾರು. ಡಿನ್ನರ್ಗೆ ಬೆಳ್ಳುಳ್ಳಿ ಕಬಾಬ್ ಬರಬಹುದೇನೋ ಎಂದು ವ್ಯಂಗ್ಯವಾಡಿದ್ದಾರೆ.”
ಆದರೆ ಜನರಿಗೆ ಬೇಕಾದ ಕೆಲಸಗಳನ್ನು ಮಾಡೋದು ರಾಜ್ಯ ಸರ್ಕಾರ ಮರೆತುಬಿಟ್ಟಿದೆ ಎಂದು ನಿಖಿಲ್ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ, ನೇಮಕಾತಿ ಇಲ್ಲ
ರಾಜ್ಯದಲ್ಲಿ ಸರ್ಕಾರಿ ಶಾಲೆ ಮುಚ್ಚುತ್ತಿವೆ. ಶಿಕ್ಷಕರ ನೇಮಕಾತಿ ಆಗ್ತಿಲ್ಲ. ಆರೋಗ್ಯ ಇಲಾಖೆ ಸರಿಯಾಗಿ ಕೆಲಸ ಮಾಡ್ತಿಲ್ಲ. ಸರ್ಕಾರಕ್ಕೆ ಬಂದು 2.5 ವರ್ಷ ಆಗಿದೆ. ಫುಲ್ ಮೆಜಾರಿಟಿ ಪಡೆದಿದ್ದಾರೆ.
ಗ್ಯಾರಂಟಿ ಕೊಡ್ತೀವಿ ಅಂದರು, ಆದರೆ ಗ್ಯಾರಂಟಿ ಹಣವನ್ನು ತಿಂಗಳು ಸರಿಯಾಗಿ ಕೊಡ್ತಿಲ್ಲ. ಚುನಾವಣೆ ಹತ್ತಿರ ಬಂದಾಗ ಮಾತ್ರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡ್ತಿದ್ದಾರೆ. ಸರ್ಕಾರದ ಹಣವನ್ನು ಚುನಾವಣೆಗೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: KN Rajanna: ಅಧಿಕಾರ ಹಂಚಿಕೆ, ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ರಾಜಣ್ಣ ಸ್ಫೋಟಕ ಹೇಳಿಕೆ
“15 ಸಾವಿರ ಗುಂಡಿ ಮುಚ್ಚುವ ಸಾಮರ್ಥ್ಯ ಸರ್ಕಾರಕ್ಕಿಲ್ಲ”
ಈ ಸರ್ಕಾರಕ್ಕೆ 15 ಸಾವಿರ ಗುಂಡಿ ಮುಚ್ಚುವ ಯೋಗ್ಯತೆ ಕೂಡ ಇಲ್ಲ. 500–600 ಜನ ಗುಂಡಿಗೆ ಬಿದ್ದು ಸತ್ತಿದ್ದಾರೆ. ಇದರ ಹೊಣೆ ಸರ್ಕಾರವೇ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ರಸ್ತೆ ಯಾವುದು, ಪುಟ್ಪಾತ್ ಯಾವುದು ಅನ್ನೋದೇ ಗೊತ್ತಾಗೋದಿಲ್ಲ. ಇದು ಸರ್ಕಾರದ ಪರಿಸ್ಥಿತಿ ಎಂದು ಆಕ್ರೋಶ ಹೊರಹಾಕಿದರು.
ಸಿಎಂ–ಡಿಸಿಎಂ ‘ನಾವು ಬ್ರದರ್ಸ್’ ಹೇಳಿಕೆಗೆ ನಿಖಿಲ್ ಪ್ರತಿಕ್ರಿಯೆ
ಯಾರು ಯಾವಾಗ ಬ್ರದರ್ ಆಗ್ತಾರೋ, ಯಾವಾಗ ಬ್ರದರ್ಶಿಪ್ ಕ್ಯಾನ್ಸಲ್ ಆಗುತ್ತೋ ಗೊತ್ತಿಲ್ಲ. ಅವರ ಪಕ್ಷದ ವಿಚಾರ ನಮ್ಮನ್ನ ಕೇಳಬೇಡಿ. ಕಾಂಗ್ರೆಸ್ನಲ್ಲಿ ಯಾರಿಗೆ ಸಹಿ ಹಾಕಬೇಕು ಅಂತ A, B, C ಟೀಮ್ ಆಗಿದೆ. ಹೈಕಮಾಂಡ್ ಇದ್ದರೆ ಇದನ್ನ ಸರಿ ಮಾಡಲಿ ಎಂದರು.

“ಬ್ರೇಕ್ಫಾಸ್ಟ್–ಡಿನ್ನರ್ ಮೀಟಿಂಗ್ಗಳಿಂದ ಜನರಿಗೆ ಏನು ಲಾಭ?”
“ಈ ಎಲ್ಲ ಬ್ರೇಕ್ಫಾಸ್ಟ್, ಡಿನ್ನರ್ ಮೀಟಿಂಗ್ಗಳಿಂದ ಜನರಿಗೆ ಯಾವ ಸಂದೇಶ ಕೊಡ್ತೀರಾ? ಎಲ್ಲವೂ ಸರಿ ಇದ್ದರೆ ಆಡಳಿತದಲ್ಲಿ ತೋರಿಸಿ. ಅದನ್ನು ಬಿಟ್ಟು ಹೊಟೇಲ್ ರಾಜಕೀಯ ಯಾಕೆ?”
MUST WATCH: ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರ KN RAJANNA ಫಸ್ಟ್ ರಿಯಾಕ್ಷನ್




