Ramanagara News : ಹೆಡ್ ಕಾನ್ಸ್ಟೇಬಲ್ (Head Constable) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ರಾಮನಗರದಲ್ಲಿ ನಡೆದಿದೆ.

Ramanagara News: ಹೆಡ್ ಕಾನ್ಸ್ಟೇಬಲ್ ಒಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೆರೆಯಲ್ಲಿ ಶವವಾಗಿ ಪತ್ತೆಯಾದ ಮೃತ ವ್ಯಕ್ತಿಯನ್ನು ಲಕ್ಷ್ಮಣ್ (51) ಎಂದು ಗುರುತಿಸಲಾಗಿದೆ.
ಮೃತ ಲಕ್ಷ್ಮಣ್ ಚನ್ನಪಟ್ಟಣ ಸಂಚಾರಿ ಪೊಲೀಸ್ ಸ್ಟೇಷನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಅವರು, ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಕೆರೆಯಲ್ಲಿ ಹೆಲ್ಮೆಟ್ ಸಮೇತ ಶವ ಪತ್ತೆ
ಇಂದು ಬೆಳಗ್ಗೆ ಸ್ಥಳೀಯರು ಕೆರೆಯಲ್ಲಿ ಶವ ತೇಲುತ್ತಿರುವುದು ಗಮನಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ. ಶವದ ಜೊತೆ ಹೆಲ್ಮೆಟ್ ಕೂಡ ಪತ್ತೆಯಾಗಿದೆ. ಅಲ್ದೇ ಕೆರೆ ತೀರದಲ್ಲೇ ಲಕ್ಷ್ಮಣ್ ಅವರ ಬೈಕ್ ಕೂಡ ಕಂಡುಬಂದಿದೆ. ಘಟನಾ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : Ramanagara : ಬಿಡದಿ ಬಳಿ ಸೆಕ್ಯುರಿಟಿ ಗಾರ್ಡ್ ಕೊಲೆ – ಹಳೆ ದ್ವೇಷಕ್ಕೆ ನಡೆದಿರುವ ಶಂಕೆ
ಆತ್ಮಹತ್ಯೆಯೋ? ಅಪಘಾತವೋ?
ಲಕ್ಷ್ಮಣ್ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೇ ಅಥವಾ ಕಾಲು ಜಾರಿ ನೀರಿಗೆ ಬಿದ್ದಿರಬಹುದೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತದೇಹವನ್ನು ಕೆರೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.
ಸಾವು ಅನುಮಾನಾಸ್ಪದವಾಗಿರುವ ಹಿನ್ನೆಲೆಯಲ್ಲಿ ಮುಂದಿನ ತನಿಖೆ ಜೋರಾಗಿದ್ದು, ಹಲವಾರು ಪ್ರಶ್ನೆಗಳು ಮೂಡಿವೆ.
MUST WATCH: BRUTAL MUR*ER | ತೋಟದ ಮನೆಯಲ್ಲಿದ್ದ ಮಹಿಳೆಯ ಭೀಕರ ಕೊಲೆ- ಇಟ್ಟುಕೊಂಡವನಿಂದಲೇ ಬಲಿಯಾದ್ಳಾ..?




