Samantha Marriage : ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಒಂಟಿಯಾಗಿದ್ದ ತೆಲುಗು ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Samantha Marriage : ತೆಲುಗು ನಟಿ ಸಮಂತಾ ರುತ್ ಪ್ರಭು, ನಟ ನಾಗಚೈತನ್ಯನೊಂದಿಗೆ ವಿಚ್ಛೇದನದ ಬಳಿಕ, ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ‘ಫ್ಯಾಮಿಲಿ ಮ್ಯಾನ್’ ಮತ್ತು ‘ಸಿಟಾಡೆಲ್ ಹನಿಬನಿ’ ನಿರ್ದೇಶಕ ರಾಜ್ ನಿಡಿಮೋರು ಜೊತೆ ಈ ಹೊತ್ತು ದಾಂಪತ್ಯಕ್ಕೆ ಹೆಜ್ಜೆ ಇಟ್ಟಿದ್ದಾರೆ.
ವದಂತಿಗಳಿಗೆ ತೆರೆ ಎಳೆದ ಜೋಡಿ
ಹಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಇಶಾ ಫೌಂಡೇಶನ್ ಆವರಣದಲ್ಲಿ ಇರುವ ಲಿಂಗಭೈರವಿ ದೇವಿಯ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಇನ್ನು ಸಮಂತಾ ಕೆಂಪು ಸೀರೆ ಧರಿಸಿ ಮಿಂಚಿದ್ರೆ, ರಾಜ್ ನಿಡಿಮೋರು ವೈಟ್ ಕುರ್ಥಾ ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ
ಸಮಂತಾ ಮತ್ತು ರಾಜ್ ನಿಡಿಮೋರು ಅವರು ಮದುವೆಯ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ಫೋಟೋಗಳನ್ನ ಸಮಂತಾ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಲಿಂಗಭೈರವಿ ದೇವಿಯ ಆರಾಧಕಿ ಆಗಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ಬೆಳಗ್ಗೆ ಶಾಸ್ತ್ರೊಕ್ತವಾಗಿ ಮದುವೆ ನೆರವೇರಿತು. ಈ ಮೂಲಕ ಬಹುದಿನಗಳಿಂದ ಹರಿದಾಡುತ್ತಿದ್ದ ವದಂತಿ ಅಂತ್ಯವಾಗಿದೆ.
ಇದನ್ನೂ ಓದಿ : Actress Samantha: ಸದ್ದಿಲ್ಲದೆ ನಡೇದಿದ್ಯಾ ನಟಿ ಸಮಂತಾ ಎರಡನೇ ಮದುವೆ..?
ಮದುವೆ ಪೋಟೋಸ್ ಶೇರ್ ಮಾಡಿದ ಸಮಂತಾ
ರಾಜ್ ನಿಡಿಮೋರುಗೆ ಇದು ಎರಡನೇ ವಿವಾಹವಾಗಿದ್ದು, ಸಮಂತಾ ಪ್ರಸ್ತುತ ತೆಲುಗು ಚಿತ್ರರಂಗದಲ್ಲಿ ಬಹುಪ್ರೀತಿಪಾತ್ರ ನಟಿಯಾಗಿದ್ದಾರೆ. ಸಮಂತಾ–ರಾಜ್ ಜೋಡಿ ವೆಬ್ಸಿರೀಸ್ ಮೂಲಕ ಪರಿಚಯವಾದ ಬಳಿಕ ಪ್ರೀತಿಯಲ್ಲಿ ಬಿದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
MUST WATCH: ಸಿನಿಮಾ ಪ್ರಮೋಷನ್ಗೆ ತುಮಕೂರಿಗೆ EKKA MOVIE ತಂಡ ಎಂಟ್ರಿ | TUMAKURU NEWS |




