Tumkur Crime News : ತುಮಕೂರಿನ ಹುಲಿಯೂರುದುರ್ಗದಲ್ಲಿ 16 ವರ್ಷದ ಶಾಲಾ ಬಾಲಕಿ ಸಂಬಂಧಿಕನಿಂದ ದೌರ್ಜನ್ಯಕ್ಕೆ ಒಳಗಾಗಿ ಗಂಡು ಮಗುವಿಗೆ ಜನ್ಮ ನೀಡಿದ ದಾರುಣ ಘಟನೆ. ಪೋಕ್ಸೋ ಪ್ರಕರಣ ದಾಖಲೆ, ಆರೋಪಿ ಬಂಧನ.

Tumkur Crime News : ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕು, ಹುಲಿಯೂರುದುರ್ಗದಲ್ಲಿ 16 ವರ್ಷದ ಶಾಲಾ ಬಾಲಕಿ ಸಂಬಂಧಿಕನಿಂದಲೇ ದೌರ್ಜನ್ಯಕ್ಕೆ ಒಳಗಾಗಿ ಗಂಡು ಮಗುವಿಗೆ ಜನ್ಮ ನೀಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಘಟನೆ ವಿವರ: ಸಂಬಂಧಿಕನಿಂದಲೇ ನೀಚ ಕೃತ್ಯ
ಬಾಲಕಿಯ ಮೇಲೆ ಆತ್ಮೀಯ ಸಂಬಂಧಿಕ ಮಲ್ಲೇಶ್ (35) ದೌರ್ಜನ್ಯ ಎಸಗಿದ್ದಾನೆ. ಈ ಘಟನೆ ಆಗಸ್ಟ್ ತಿಂಗಳಲ್ಲೇ ನಡೆದಿದ್ದರೂ, ಬಾಲಕಿ ಭಯದಿಂದ ವಿಷಯವನ್ನು ಹೊರಪಡಿಸಲಿಲ್ಲ. ಕೆಲ ದಿನಗಳ ಬಳಿಕ ಬಾಲಕಿಯ ಆರೋಗ್ಯ ಗಂಭೀರವಾಗುತ್ತಿದ್ದಂತೆ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದರು.
ಇದನ್ನೂ ಓದಿ : Actress Samantha: ಸದ್ದಿಲ್ಲದೆ ನಡೇದಿದ್ಯಾ ನಟಿ ಸಮಂತಾ ಎರಡನೇ ಮದುವೆ..?
ವೈದ್ಯರ ತಪಾಸಣೆಯಲ್ಲಿ ಬೆಳಕಿಗೆ ಬಂದ ಸತ್ಯ
ವೈದ್ಯರ ತಪಾಸಣೆಯಲ್ಲಿ ಬಾಲಕಿ ಏಳು ತಿಂಗಳು ಗರ್ಭಿಣಿಯಾಗಿರುವುದು ಪತ್ತೆಯಾಯಿತು. ನಂತರ ಪೋಷಕರು ಶಾಕ್ಗೊಂಡು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ನವೆಂಬರ್ 16ರಂದು ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಪೋಕ್ಸೋ ಪ್ರಕರಣ ದಾಖಲೆ – ಆರೋಪಿ ಬಂಧನ
ಪೋಷಕರ ದೂರು ಆಧರಿಸಿ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು. ದೂರು ದಾಖಲಾಗುತ್ತಿದ್ದಂತೆಯೇ ಮಲ್ಲೇಶ್ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಪೊಲೀಸರು ಪತ್ತೆ ಹಚ್ಚಿ ಇದೀಗ ಬಂಧಿಸಿದ್ದಾರೆ.
ತನಿಖೆ ಪ್ರಸ್ತುತ ನಡೆಯುತ್ತಿದೆ.




