BBK S12 : Bigg Boss Kannada ಮನೆಯಲ್ಲಿ ಗಿಲ್ಲಿ 7 ತಿಂಗಳ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಅನುಮಾನಗಳನ್ನು ಸುದೀಪ್ ಅವರ ಮಾತು ಮತ್ತಷ್ಟು ಗಟ್ಟಿಗೊಳಿಸಿದೆ. ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾದ ವಿವರಗಳು ಇಲ್ಲಿವೆ.

BBK S12 : Bigg Boss Kannada ಮನೆಯಲ್ಲಿ ಗಿಲ್ಲಿ ಅವರ ಆಟ ಕಳೆದ ಕೆಲವು ದಿನಗಳಿಂದ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ವಿಶೇಷವಾಗಿ, “ಬಿಗ್ ಬಾಸ್ ಮೊದಲು ನಿಮ್ಮ ಜೊತೆ ಒಪ್ಪಂದ ಮಾಡಿಕೊಂಡಿರಲಿಲ್ಲವೇ?” ಎಂಬ ಕಿಚ್ಚ ಸುದೀಪ್ ಅವರ ಪ್ರಶ್ನೆ ವೀಕ್ಷಕರಲ್ಲಿ ಹೊಸ ಅನುಮಾನಗಳನ್ನು ಹುಟ್ಟಿಸಿದೆ. ಗಿಲ್ಲಿ ಏಳು ತಿಂಗಳ ಮುಂಚೆಯೇ ಶೋಗೆ ಸಿದ್ಧತೆ ಮಾಡಿಕೊಂಡಿದ್ದಾರೆಯೇ?
ಗಿಲ್ಲಿ ಆಟದಲ್ಲಿ ಏರಿಳಿತ – ಸುದೀಪ್ ಕ್ಲಾಸ್ ಮತ್ತೆ ವೈರಲ್
ಕಳೆದ ವಾರ ಮನೆಗೆ ಬಂದ ಸ್ಪರ್ಧಿಗಳೊಂದಿಗೆ ವಾದವಾಡಿದ ಪರಿಣಾಮ ಗಿಲ್ಲಿ ಕಿಚ್ಚ ಸುದೀಪ್ ಅವರಿಂದ ಕಠಿಣ ಪಾಠ ಕೇಳಿಕೊಂಡರು.
ಹಾಸ್ಯ ಮಾಡಲು ಹೋಗಿ ಲಯ ತಪ್ಪಿದ ಘಟನೆ , ಊಟದ ವಿಷಯದಲ್ಲಿ ವಿವಾದ , ಉಗ್ರಂ ಮಂಜು ಮದುವೆ ವಿಷಯದಲ್ಲಿ ಬಾಯ್ ತಪ್ಪಿದ್ದು , ಈ ಎಲ್ಲವನ್ನು ಸುದೀಪ್ ಗಂಭೀರವಾಗಿ ಪ್ರಶ್ನಿಸಿದರು.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಗಿಚ್ಚಿ-ಗಿಲಿಗಿಲಿ Shivu-Manasa

ಸುದೀಪ್ ಮಾತು: “ಫೆಬ್ರವರಿಯಲ್ಲೇ ಒಪ್ಪಂದ ಮಾಡಿಕೊಂಡಿರಲಿಲ್ಲವೇ?”
ಸುದೀಪ್ ಅವರ ಒಂದು ಮಾತು ಶೋನಲ್ಲಿ ಸದ್ದು ಮಾಡಿತು . ಫೆಬ್ರವರಿಯಲ್ಲೇ ಬಿಗ್ ಬಾಸ್ ನಿಮ್ಮ ಜೊತೆ ಒಪ್ಪಂದ ಮಾಡಿಕೊಂಡಿದ್ದರಲ್ಲವೇ?” .
ಈ ಹೇಳಿಕೆ ಕೇಳುತ್ತಿದ್ದಂತೆಯೇ ಮನೆಯಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸಂಚಲನ ಮೆರೆದಿತು. ಗಿಲ್ಲಿ ಶೋಗೆ 7 ತಿಂಗಳ ಮುಂಚೆ ಸೈನ್ ಮಾಡಿದರು? ಆ ಅವಧಿಯಲ್ಲಿ ಅವರು ವಿಶೇಷ ಸಿದ್ಧತೆ ಮಾಡಿಕೊಂಡರಾ? ಎಂಬುದೇ ಈಗ ದೊಡ್ಡ ಚರ್ಚಾ ವಿಷಯ.
ಗಿಲ್ಲಿಯ 7 ತಿಂಗಳ ಸಿದ್ಧತೆ ಆರೋಪ – ಏನಿದೆ ನಿಜ?
ಗಿಲ್ಲಿ ಮನೆಯಲ್ಲಿ KGF, ಸೂರ್ಯವಂಶ, ಹಾಗೂ ಅನೇಕ ಸಿನಿಮಾದ ಡೈಲಾಗ್ಗಳನ್ನು ಚೆನ್ನಾಗಿ ಹೇಳುತ್ತಿದ್ದಾರೆ.ಇ
ದಕ್ಕಾಗಿ ಅವರು ತಿಂಗಳಷ್ಟು ಸಿದ್ಧತೆ ಮಾಡಿಕೊಂಡಿದ್ದರು ಎಂಬ ವಾದ.Bigg Boss ಗೆ ಹೋಗುವ ಮೊದಲು ಗಿಲ್ಲಿ ಪ್ರಿಪರೇಷನ್ ಮಾಡಿರುವುದು ಅಭಿಮಾನಿಗಳ ದೃಷ್ಟಿಯಲ್ಲಿ ತಪ್ಪೇನೂ ಅಲ್ಲ.

ಅಭಿಮಾನಿಗಳ ಪ್ರತಿಕ್ರಿಯೆ
ಸಿದ್ಧತೆ ಮಾಡಿದ್ರೆ ತಪ್ಪೇನು? ಗೆಲ್ಲೋದು ಮುಖ್ಯ.ಗೇಮ್ ಸ್ಟ್ರಾಂಗ್ ಆಗಿದೆ ಅಂದ್ರೇ ಸಾಕು.ಪ್ಲ್ಯಾನ್ ಮಾಡಿಕೊಂಡು ಹೋದ್ರೇ ಅದು ಅವರ ಸ್ಟ್ರಾಟಜಿ. ಗಿಲ್ಲಿ ಬಗ್ಗೆ ಭಿನ್ನಾಭಿಪ್ರಾಯಗಳು ಹರಿದಾಡುತ್ತಿದ್ದರೂ, ಅವರ ಆಟ ಮನರಂಜನೆಯನ್ನು ಕೊಟ್ಟಿದೆ ಎನ್ನುವುದು ಬಹುತೇಕರ ಅಭಿಪ್ರಾಯ.




